ಕಾಗದ ರಹಿತವಾದ ಕೇರಳದ 3 ಕೋರ್ಟ್‌ – ಆ.1ರಿಂದ ಕೇರಳ ಹೈಕೋರ್ಟ್‌ನಲ್ಲೂ ಚಾಲನೆ

Public TV
1 Min Read
Kerala High court

ತಿರುವನಂತಪುರಂ: ತಂತ್ರಜ್ಞಾನ ಬೆಳೆದಂತೆ ಈಗ ಪ್ರತಿಯೊಬ್ಬರ ಕೈಯಲ್ಲೂ ಟಚ್‌ಸ್ಕ್ರೀನ್‌ ಮೊಬೈಲ್‌ಗಳಿವೆ. ಕಂಪ್ಯೂಟರ್‌ ಬಳಕೆಯೂ ಹೆಚ್ಚಾಗಿದೆ. ಡಿಜಿಟಲೀಕರಣ ಹಾಗೂ ಪರಿಸರ ಕಾಳಜಿ ಪ್ರೋತ್ಸಾಹಕ್ಕೆ ಕೇರಳದ ಮೂರು ಕೋರ್ಟ್‌ಗಳು ಮುಂದಾಗಿದ್ದು, ಕೋರ್ಟ್‌ಗಳಲ್ಲಿ ಕಾಗದ ರಹಿತ ನ್ಯಾಯಾಂಗ ವ್ಯವಸ್ಥೆ ಜಾರಿಗೆ ಮುನ್ನುಡಿ ಬರೆದಿವೆ.

ಕೇರಳದ 3 ಕೋರ್ಟ್‌ಗಳಲ್ಲಿ ಕಾಗರ ರಹಿತ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದೆ. ಕೇರಳ ಹೈಕೋರ್ಟ್ ಆ.1ರಿಂದ ಇದನ್ನು ಅಳವಡಿಸಿಕೊಂಡಿದೆ. ನ್ಯಾಯಾಂಗ ವ್ಯವಸ್ಥೆಯ ಯಾವುದೇ ಕಾರ್ಯ ಹಾಗೂ ಪ್ರಕ್ರಿಯೆಗಳು ಕಾಗದ ರಹಿತವಾಗಿ ನಡೆಯಲಿವೆ. ಇದನ್ನೂ ಓದಿ: ಇಂದು ಮಾಲ್ಡೀವ್ಸ್ ಅಧ್ಯಕ್ಷರನ್ನು ಭೇಟಿಯಾಗಲಿರುವ ಮೋದಿ

court file

ಈ ಕ್ರಮ ಪರಿಸರ ಸ್ನೇಹಿಯಾಗಿದೆ. ಸಮಯ ಉಳಿತಾಯ ಮತ್ತು ವೆಚ್ಚ ಕಡಿಮೆಗೊಳಿಸಲು ಸಹಕಾರಿಯಾಗಿದೆ. ದೊಡ್ಡ ದೊಡ್ಡ ಫೈಲ್‌ಗಳನ್ನು ಸಾಗಿಸುವ ಪರಿಪಾಠವೂ ತಪ್ಪುತ್ತದೆ ಎಂದು ಹೈಕೋರ್ಟ್‌ನ ಕ್ರಮವನ್ನು ವಕೀಲರು ಸ್ವಾಗತಿಸಿದ್ದಾರೆ.

ಈ ಕ್ರಮದ ಬಗ್ಗೆ ಕೆಲವರು ಪ್ರಶ್ನಾರ್ಥಕವಾಗಿ ನೋಡುತ್ತಿದ್ದಾರೆ. ದಶಕಗಳಿಂದ ಪ್ರಕರಣಗಳ ಭೌತಿಕ ಫೈಲ್‌ಗಳಿಂದ ವಾದಿಸುತ್ತಿದ್ದವರಿಗೆ ಹೊಸ ವ್ಯವಸ್ಥೆಯು ಎಷ್ಟು ಸಹಾಯಕವಾಗಬಹುದು ಎಂದು ಕೇಳುತ್ತಿದ್ದಾರೆ. ಇದನ್ನೂ ಓದಿ: ಆಗಸ್ಟ್‌ 2 ವಿಶೇಷ ದಿನ; ನಾನು DP ಬದಲಾಯಿಸಿದ್ದೇನೆ, ನೀವೂ ಬದಲಾಯಿಸಿ – ಜನತೆಗೆ ಮೋದಿ ಕರೆ

2017 ರಲ್ಲಿ ನಟಿಯೊಬ್ಬರ ಮೇಲಿನ ಹಲ್ಲೆ ಪ್ರಕರಣದಲ್ಲಿ ನಟ ದಿಲೀಪ್ ಅವರ ಪರ ವಾದ ಮಂಡಿಸುತ್ತಿರುವ ವಕೀಲ ಫಿಲಿಪ್ ಟಿ ವರ್ಗೀಸ್, ಹೈಕೋರ್ಟ್‌ ಕ್ರಮವನ್ನು ಸ್ವಾಗತಿಸಿದ್ದಾರೆ. ʻಈ ಕ್ರಮ ಕಾಗದ ಅಥವಾ ಭೌತಿಕ ಫೈಲ್‌ಗಳ ಬಳಕೆಯ ಮೇಲೆ ಸಂಪೂರ್ಣ ನಿಷೇಧವನ್ನು ಅರ್ಥೈಸುವುದಿಲ್ಲ. ಕಂಪ್ಯೂಟರ್ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಲು ಆಗದವರು ಭೌತಿಕ ಫೈಲ್‌ಗಳನ್ನು ಬಳಸುವ ಆಯ್ಕೆಯನ್ನು ಹೊಂದಿರುತ್ತಾರೆ ಎಂದು ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *