LatestLeading NewsMain PostNational

ಆಗಸ್ಟ್‌ 2 ವಿಶೇಷ ದಿನ; ನಾನು DP ಬದಲಾಯಿಸಿದ್ದೇನೆ, ನೀವೂ ಬದಲಾಯಿಸಿ – ಜನತೆಗೆ ಮೋದಿ ಕರೆ

Advertisements

ನವದೆಹಲಿ: 75ನೇ ಸ್ವಾತಂತ್ರ್ಯ ದಿನೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮದ ತಮ್ಮ ಖಾತೆಗಳ ಡಿಪಿಯನ್ನು ಬದಲಾಯಿಸಿದ್ದು, ತ್ರಿವರ್ಣ ಧ್ವಜದ ಚಿತ್ರವನ್ನು ಹಾಕಿಕೊಂಡಿದ್ದಾರೆ. ದೇಶದ ಜನತೆಯೂ ತಮ್ಮ ಡಿಪಿಯಲ್ಲಿ ತ್ರಿವರ್ಣ ಧ್ವಜದ ಚಿತ್ರ ಹಾಕಿಕೊಳ್ಳುವಂತೆ ಕರೆ ನೀಡಿದ್ದಾರೆ.

ʼಆಗಸ್ಟ್‌ 2 ವಿಶೇಷವಾದ ದಿನ! ನಾವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವ ಸಮಯದಲ್ಲಿ, ನಮ್ಮ ರಾಷ್ಟ್ರವು ತ್ರಿವರ್ಣ ಧ್ವಜವನ್ನು ಗೌರವಿಸುವ ಸಾಮೂಹಿಕ ಆಂದೋಲನವಾದ ಹರ್‌ ಘರ್‌ ತಿರಂಗಾಗೆ ಸಿದ್ಧವಾಗಿದೆ. ನಾನು ನನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ DP ಅನ್ನು ಬದಲಾಯಿಸಿದ್ದೇನೆ. ನೀವು ಕೂಡ ಹಾಗೆಯೇ ಮಾಡಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸರಿಗಿಂತ ಇಡಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ: ಮೋದಿ ವಿರುದ್ಧ ಅಶೋಕ್ ಗೆಹ್ಲೋಟ್ ಕಿಡಿ

ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದ ಪಿಂಗಲಿ ವೆಂಕಯ್ಯ ಅವರ ಜನ್ಮದಿನಕ್ಕೆ ಈ ಮೂಲಕ ಪ್ರಧಾನಿ ಗೌರವ ಸಲ್ಲಿಸಿದರು.

ಮಹಾನ್ ಪಿಂಗಲಿ ವೆಂಕಯ್ಯ ಅವರ ಜನ್ಮದಿನದಂದು ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ. ನಾವು ಹೆಮ್ಮೆಪಡುವ ತ್ರಿವರ್ಣ ಧ್ವಜವನ್ನು ನಮಗೆ ನೀಡಿದ ಅವರಿಗೆ ಎಂದೆಂದಿಗೂ ದೇಶ ಋಣಿಯಾಗಿದೆ. ತ್ರಿವರ್ಣ ಧ್ವಜದಿಂದ ಶಕ್ತಿ ಮತ್ತು ಸ್ಫೂರ್ತಿಯನ್ನು ಪಡೆದು ರಾಷ್ಟ್ರೀಯ ಪ್ರಗತಿ ಕೆಲಸವನ್ನು ಮುಂದುವರಿಸೋಣ ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ ವಿರೋಧಿಸಿ ಸದನದಲ್ಲಿ ಹಸಿ ಬದನೆಕಾಯಿ ತಿಂದ ಸಂಸದೆ

ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಕೇಂದ್ರ ಗೃಹ ಸಚಿವ, ಜೆ.ಪಿ.ನಡ್ಡಾ ಸೇರಿದಂತೆ ಅನೇಕ ಬಿಜೆಪಿ ನಾಯಕರು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳ ಡಿಪಿಯಲ್ಲಿ ರಾಷ್ಟ್ರಧ್ವಜದ ಚಿತ್ರ ಹಾಕಿಕೊಂಡಿದ್ದಾರೆ.

ಭಾನುವಾರದ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ಪ್ರಧಾನ ಮಂತ್ರಿ ಅವರು ಆಗಸ್ಟ್ 2ರಿಂದ 15ರ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ತ್ರಿವರ್ಣ ಧ್ವಜವನ್ನು ಎಲ್ಲರೂ ಪ್ರೊಫೈಲ್ ಚಿತ್ರವಾಗಿ ಬಳಸಿಕೊಂಡು ಹರ್‌ ಘರ್‌ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದ್ದರು.

Live Tv

Leave a Reply

Your email address will not be published.

Back to top button