DharwadDistrictsKarnatakaLatestMain Post

ದರ್ಗಾಗೆ ಗುದ್ದಿದ ಕಾರ್ – ಒಂದೇ ಕುಟುಂಬದ ಮೂವರ ಸಾವು

ಹುಬ್ಬಳ್ಳಿ: ದರ್ಗಾಗೆ ಕಾರ್ ಗುದ್ದಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿ, ಓರ್ವ ಮಹಿಳೆ ಗಂಭೀರ ಗಾಯಗೊಂಡಿರುವ ಘಟನೆ ಹುಬ್ಬಳ್ಳಿ – ಪುಣೆ, ಬೆಂಗಳೂರು ಹೆದ್ದಾರಿಯಲ್ಲಿ ನಡೆದಿದೆ.

ಹುಬ್ಬಳ್ಳಿ ಸಮೀಪ ಜಿಗಳೂರ ಗ್ರಾಮದ ಬಳಿ ಈ ಭೀಕರ ಕಾರ್ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಹನಮಂತಪ್ಪ ಬೇವಿನಕಟ್ಟಿ, ಪತ್ನಿ ರೇಣುಕಾ, ಅಳಿಯ ರವೀಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಧ್ವಜ ಖರೀದಿಗೆ ವೇತನದಲ್ಲಿ 38 ರೂ. ಖಡಿತಗೊಳಿಸಿದ ರೈಲ್ವೆ ಇಲಾಖೆ- ನೌಕರರಿಂದ ಅಸಮಾಧಾನ

ಮೃತರು ಬೆಂಗಳೂರಿನಲ್ಲಿ ಗೃಹ ಪ್ರವೇಶ ಮುಗಿಸಿ ಹುಬ್ಬಳ್ಳಿಗೆ ಕಾರ್‌ನಲ್ಲಿ ವಾಪಸ್ಸಾಗುತ್ತಿದ್ದರು. ಈ ವೇಳೆ ಚಾಲಕನ ನಿರ್ಲಕ್ಷ್ಯದಿಂದ ರಸ್ತೆಯ ಪಕ್ಕದಲ್ಲಿದ್ದ ದರ್ಗಾಗೆ ಕಾರ್‌ ಗುದ್ದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಗಾಯಗೊಂಡ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕುಟುಂಬ ಕಲಹ – ವಿದ್ಯುತ್ ಹೈಟೆನ್ಷನ್ ಟವರ್ ಏರಿ ವ್ಯಕ್ತಿ ಹೈಡ್ರಾಮಾ

Live Tv

Leave a Reply

Your email address will not be published.

Back to top button