ನವದೆಹಲಿ: ಹರ್ ಘರ್ ತಿರಂಗಾ ಅಭಿಯಾನದ ಅಡಿಯಲ್ಲಿ ರೈಲ್ವೆ ತನ್ನ ಎಲ್ಲಾ ಉದ್ಯೋಗಿಗಳಿಗೆ ನೀಡಿರುವ ರಾಷ್ಟ್ರ ಧ್ವಜದ ವೆಚ್ಚವನ್ನು ಅವರ ಸಂಬಳದಿಂದ ವಸೂಲಿ ಮಾಡುತ್ತಿದ್ದು, ಇಲಾಖೆಯ ಈ ಕ್ರಮಕ್ಕೆ ರೈಲ್ವೆ ನೌಕರರ ಸಂಘದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಆಜಾದಿ ಕಾ ಅಮೃತ ಮಹೋತ್ಸವದ ಅಡಿಯಲ್ಲಿ ಕೇಂದ್ರವು ಹರ್ ಘರ್ ತಿರಂಗಾ ಅಭಿಯಾನವನ್ನು ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಏಜೆನ್ಸಿಯಿಂದ ರೈಲ್ವೆ ನೌಕರರಿಗೆ ರಾಷ್ಟ್ರಧ್ವಜವನ್ನು ನೀಡಿದ್ದಾರೆ. ಆದರೆ ಈ ಧ್ವಜದ ಬೆಲೆಯನ್ನು 38 ರೂ.ಗಳಲ್ಲಿ ಇರಿಸಲಾಗಿದೆ. ರೈಲ್ವೆ ನೌಕರರು ಹಣವನ್ನು ಪಾವತಿಸಿ ಈ ರಾಷ್ಟ್ರ ಧ್ವಜವನ್ನು ಖರೀದಿಸಬೇಕಿಲ್ಲ. ಆದರೆ ಅವರ ಸಂಬಳದಿಂದ ಈ ಹಣ ಕಡಿತಗೊಳ್ಳುತ್ತದೆ. ಇದಕ್ಕೆ ಉತ್ತರ ಮಧ್ಯ ರೈಲ್ವೆ ನೌಕರರ ಸಂಘ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದೆ.
Advertisement
Advertisement
ವಿಭಾಗೀಯ ಸಚಿವ ಚಂದನ್ ಸಿಂಗ್ ಮಾತನಾಡಿ, ಈ ಧ್ವಜವನ್ನು ಸಿಬ್ಬಂದಿಗೆ ನೌಕರರ ಪ್ರಯೋಜನ ನಿಧಿಯಿಂದ ನೀಡಲಾಗುತ್ತಿದೆ. ನಂತರ ಅವರ ಸಂಬಳದಿಂದ ಕಡಿತಗೊಳಿಸಿದ ಹಣವನ್ನು ನೌಕರರ ಲಾಭ ನಿಧಿಗೆ ವರ್ಗಾಯಿಸಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ತಗ್ಗಿದ ಮಳೆ – ರೆಡ್‌ನಿಂದ ಆರೆಂಜ್ ಅಲರ್ಟ್‌ನತ್ತ ಕರಾವಳಿ
Advertisement
ಈ ಧ್ವಜಗಳು ಬಿಜೆಪಿ ಕಚೇರಿಯಲ್ಲಿ 20 ರೂ.ಗೆ ಲಭ್ಯವಿದ್ದು, ಪ್ರಧಾನ ಅಂಚೆ ಕಚೇರಿಯಲ್ಲಿ 25 ರೂ.ಗೆ ಖರೀದಿಸಬಹುದು. ಸ್ವಸಹಾಯ ಸಂಘಗಳು ಸಹ 20 ರೂ.ಗೆ ಧ್ವಜವನ್ನು ನೀಡುತ್ತಿವೆ. ಇದನ್ನೂ ಓದಿ: ಕುಟುಂಬ ಕಲಹ – ವಿದ್ಯುತ್ ಹೈಟೆನ್ಷನ್ ಟವರ್ ಏರಿ ವ್ಯಕ್ತಿ ಹೈಡ್ರಾಮಾ