ಆನ್‌ಲೈನ್‌ನಲ್ಲಿ ವಂಚಿಸಿದ್ದ ನೇಪಾಳಿ ಪ್ರಜೆಗಳ ಬಂಧನ

Advertisements

ಹೈದರಾಬಾದ್: ಆನ್‌ಲೈನ್ ಹೂಡಿಕೆಯಿಂದ ಹೆಚ್ಚಿನ ಆದಾಯವನ್ನು ಗಳಿಸಬಹುದು ಎಂದು ನಂಬಿಸಿ ವ್ಯಕ್ತಿಯೊಬ್ಬನಿಗೆ 86 ಲಕ್ಷ ರೂಪಾಯಿ ವಂಚಿಸಿದ ಮೂವರು ನೇಪಾಳಿ ಪ್ರಜೆಗಳನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಗೋಪಾಲ್ ಶೆರ್ಪಾ (24), ಸುಶೀಲ್ ಗುರುಂಗ್ (29), ಮತ್ತು ನಿಮಾ ತಮಾಂಗ್ ಅಲಿಯಾಸ್ ಅಮೃತ್ ತಮಾಂಗ್ (24) ಬಂಧಿತ ಆರೋಪಿಗಳು. ಪ್ರಕರಣ ಸಂಬAಧಿಸಿ ರಾಚಕೊಂಡ ಸೈಬರ್ ಕ್ರೈಂ ಪೊಲೀಸರಿಗೆ ಘಟಕೇಸರ ನಿವಾಸಿ ಭಾನೋತು ಕಿರಣ್ ಕುಮಾರ್ ದೂರು ನೀಡಿದ್ದರು.

Advertisements

ಈ ಬಗ್ಗೆ ತನಿಖೆ ಕೈಗೊಂಡ ಸೈಬರ್ ಕ್ರೈಂ ತಂಡವು, ಶಂಕಿತರ ಬ್ಯಾಂಕ್ ಖಾತೆಗಳು ಮತ್ತು ಕಾಲ್ ಡಾಟಾದ ದಾಖಲೆಗಳನ್ನು ಕಲೆ ಹಾಕಿತ್ತು. ನಂತರ ಪಶ್ಚಿಮ ಬಂಗಾಳದ ಸಿಲಿಗುರಿಯಿಂದ ಕಾರ್ಯಾಚರಣೆ ನಡೆಸುತ್ತಿರುವ ಗ್ಯಾಂಗ್‌ನ ಪತ್ತೆ ಮಾಡಿದೆ. ನ.3ರಂದು ಕಿಂಗ್‌ಪಿನ್ ದೀಪು ಮಂಡಲ್ ಸಹಚರರಾದ ಸಿಲಿಗುರಿಯ ನೂರ್ ಆಲಂ, ಎಕ್ರಾಮ್ ಹುಸೇನ್ ಮತ್ತು ಎಂಡಿ ಇಜಾರುಲ್ ಅವರನ್ನು ಬಂಧಿಸಿತ್ತು. ಅವರಿಂದ ಇನ್ನೂ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ನೇಪಾಳದ ವಂಚಕರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಐಫೋನ್ ಬಳಸಿ ಈಗ ರಹಸ್ಯವಾಗಿ ಬೇರೆಯವರ ಮಾತುಗಳನ್ನು ಕೇಳಬಹುದು

ಆರೋಪಿಗಳ ಹತ್ತಿರವಿದ್ದ 1 ಲಕ್ಷ ನಗದು ಹಾಗೂ 53 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದು, ಅವರ ಬ್ಯಾಂಕ್ ಖಾತೆಯಲ್ಲಿದ್ದ 10 ಲಕ್ಷ ರೂ.ಗಳನ್ನು ಸ್ಥಗಿತಗೊಳಿಸಿದ್ದಾರೆ. ಇವರೆಲ್ಲರು ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ದೀಪು ಮಂಡಲ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ರಾಚಕೊಂಡ ಪೊಲೀಸ್ ಕಮಿಷನರ್ ಮಹೇಶ್ ಭಾಗವತ್ ತಿಳಿಸಿದ್ದಾರೆ. ಇದನ್ನೂ ಓದಿ: ಐಟಿ ಕಂಪೆನಿಗಳಿಗೆ ಟೆಕ್ಕಿಗಳಿಂದಲೇ ವಂಚನೆ!

Advertisements

Advertisements
Exit mobile version