ಮೈಸೂರಿನಲ್ಲಿ ವಿದ್ಯುತ್ ತಂತಿ ತುಳಿದು ಮೂವರು ಸಾವು

Advertisements

ಮೈಸೂರು: ವಿದ್ಯುತ್ ತಂತಿ (Electric Wire) ತುಳಿದು ಮೂವರು ಸಾವನ್ನಪ್ಪಿರುವ ಘಟನೆ ಇಂದು ಮೈಸೂರು (Mysuru) ಜಿಲ್ಲೆಯ ಟಿ ನರಸೀಪುರ ತಾಲೂಕಿನ ನಿಲಸೋಗೆ ಗ್ರಾಮದಲ್ಲಿ ನಡೆದಿದೆ.

Advertisements

ವರದಿಗಳ ಪ್ರಕಾರ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹರೀಶ್ (32), ರಾಚೇಗೌಡ (60) ಹಾಗೂ ಮಹದೇವಸ್ವಾಮಿ (38) ಮೃತಪಟ್ಟಿದ್ದಾರೆ.

Advertisements

ಘಟನಾ ಸ್ಥಳಕ್ಕೆ ಚೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಟಿ ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ತಾಯಿಯನ್ನು ನಿಂದಿಸಿದ್ದಕ್ಕೆ ಜೈಲಿನಿಂದ ಬಂದ ಸ್ನೇಹಿತರಿಂದ್ಲೇ ಯುವಕ ಕೊಲೆಯಾದ

Live Tv

Advertisements
Exit mobile version