ಮಂಗಳೂರು: ನಗರದ ಖಾಸಗಿ ಕಾಲೇಜೊಂದರ (Private College) ಹಾಸ್ಟೆಲ್ನಲ್ಲಿದ್ದ (Hostel) ಮೂವರು ವಿದ್ಯಾರ್ಥಿನಿಯರು (Students) ಹಾಸ್ಟೆಲ್ ಕಿಟಕಿಯ ರಾಡ್ ಮುರಿದು ಪರಾರಿಯಾಗಿರುವ ಘಟನೆ ವರದಿಯಾಗಿದೆ.
ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನ ಮೂವರು ವಿದ್ಯಾರ್ಥಿನಿಯರಾದ ಯಶಸ್ವಿನಿ, ದಕ್ಷತಾ, ಸಿಂಚನಾ ಪಿಯುಸಿ ವಿದ್ಯಾರ್ಥಿಗಳಾಗಿದ್ದು, ಹಾಸ್ಟೆಲ್ನಲ್ಲಿ ಇದ್ದು ವ್ಯಾಸಂಗ ಮಾಡುತ್ತಿದ್ದರು. ಇಂದು ಮುಂಜಾನೆ 3 ಗಂಟೆ ಸುಮಾರಿಗೆ ನಾವು ಹೋಗುತ್ತಿದ್ದೇವೆ, ಕ್ಷಮಿಸಿ ಎಂದು ಪತ್ರ ಬರೆದಿಟ್ಟು ಹಾಸ್ಟೆಲ್ನ ಕಿಟಕಿಯ ರಾಡ್ ಮುರಿದು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಸಾರ್ವಜನಿಕ ಆಸ್ಪತ್ರೆಯಲ್ಲಿ ನವಜಾತ ಶಿಶು ಕಳ್ಳತನ
ಪರಾರಿಯಾದ ವಿದ್ಯಾರ್ಥಿನಿಯರಲ್ಲಿ ಯಶಸ್ವಿನಿ ಮತ್ತು ದಕ್ಷತಾ ಬೆಂಗಳೂರು ನಿವಾಸಿಗಳಾಗಿದ್ದು, ಸಿಂಚನಾ ಚಿತ್ರದುರ್ಗ ಮೂಲದ ವಿದ್ಯಾರ್ಥಿನಿ. ಮುಂಜಾನೆ 3 ಗಂಟೆ ವೇಳೆಗೆ ಕಿಟಕಿ ರಾಡ್ ಮುರಿದು ಹೊರಬಂದು ದಾರಿಯಲ್ಲಿ ಬ್ಯಾಗ್ನೊಂದಿಗೆ ಹೋಗುತ್ತಿರುವ ಸಿಸಿಟಿವಿ ವೀಡಿಯೋ ಹರಿದಾಡುತ್ತಿದೆ. ಇದನ್ನೂ ಓದಿ: PayCM ಪೋಸ್ಟರ್ಗೆ ಸಿಎಂ ಗರಂ – ಎಫ್ಐಆರ್ ದಾಖಲು