Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನಾಳೆಯಿಂದ ಮಂಡ್ಯದಲ್ಲಿ ಅದ್ಧೂರಿ ಕೃಷಿ ಮೇಳ – ಸಿಎಂ ಸಿದ್ದರಾಮಯ್ಯರಿಂದ ಚಾಲನೆ, 5 ಲಕ್ಷ ಜನ ಸೇರುವ ನಿರೀಕ್ಷೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ನಾಳೆಯಿಂದ ಮಂಡ್ಯದಲ್ಲಿ ಅದ್ಧೂರಿ ಕೃಷಿ ಮೇಳ – ಸಿಎಂ ಸಿದ್ದರಾಮಯ್ಯರಿಂದ ಚಾಲನೆ, 5 ಲಕ್ಷ ಜನ ಸೇರುವ ನಿರೀಕ್ಷೆ

Latest

ನಾಳೆಯಿಂದ ಮಂಡ್ಯದಲ್ಲಿ ಅದ್ಧೂರಿ ಕೃಷಿ ಮೇಳ – ಸಿಎಂ ಸಿದ್ದರಾಮಯ್ಯರಿಂದ ಚಾಲನೆ, 5 ಲಕ್ಷ ಜನ ಸೇರುವ ನಿರೀಕ್ಷೆ

Public TV
Last updated: December 4, 2025 4:07 pm
Public TV
Share
4 Min Read
Mandya 1
SHARE

– ಮಂಡ್ಯದಿಂದ ಕೃಷಿ ಮೇಳಕ್ಕೆ ಬರಲು ಪ್ರತಿ 15 ನಿಮಿಷಕ್ಕೊಂದು ಬಸ್‌ ವ್ಯವಸ್ಥೆ

ಮಂಡ್ಯ: ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ವತಿಯಿಂದ ಮಂಡ್ಯದ ವಿಸಿ ಫಾರಂ ಆವರಣದಲ್ಲಿ ಡಿ.5 ರಿಂದ 7ರ ವರೆಗೆ ನಡೆಯಲಿರುವ ಕೃಷಿ ಮೇಳ 2025ಕ್ಕೆ (Krishi Mela 2025) ಶುಕ್ರವಾರ (ಡಿ.5) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಚಾಲನೆ ನೀಡಲಿದ್ದಾರೆ.

ಹೆಲಿಕಾಪ್ಟರ್‌ ಮೂಲಕ ಮಂಡ್ಯಕ್ಕೆ (Mandya) ಆಗಮಿಸಲಿರುವ ಸಿದ್ದರಾಮಯ್ಯ ಅವರು, ಮಧ್ಯಾಹ್ನ 12 ಗಂಟೆ ಹೊತ್ತಿಗೆ ಕೃಷಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಸಿಎಂಗೆ ಕೃಷಿ ಸಚಿವ ಚಲುವರಾಯಸ್ವಾಮಿ (N ChaluvarayaSwamy) ಹಾಗೂ ಸ್ಥಳೀಯ ಶಾಸಕರು ಸಾಥ್‌ ನೀಡಲಿದ್ದಾರೆ. ಒಟ್ಟು 350 ಸ್ಟಾಲ್‌ಗಳು ಮೇಳದಲ್ಲಿ ಇರಲಿದ್ದು, ರೈತರಿಗೆ ಉಪಯುಕ್ತ ಮಾಹಿತಿ ನೀಡಲಾಗುತ್ತದೆ. ಹೊಸ ತಳಿಗಳ ಮಾಹಿತಿ, ಕೃಷಿ ಆಧುನಿಕ ತಂತ್ರಜ್ಞಾನಗಳ ಬಗ್ಗೆ ಪ್ರಾತ್ಯಕ್ಷಿಕೆ ಸೇರಿ ಹತ್ತು ಹಲವು ವಿಶೇಷತೆಗಳು ಮೇಳದಲ್ಲಿ ಇರಲಿವೆ. ಬೆಂಗಳೂರು ಜಿಕೆವಿಕೆ ಮೈದಾನದಲ್ಲಿ ನಂತರ ನಡೆಯುತ್ತಿರುವ 2ನೇ ಅತಿದೊಡ್ಡ ಕೃಷಿ ಮೇಳ ಇದಾಗಿದೆ.

Chaluvarayaswamy Siddaramaiah

45 ತಳಿಯ ಭತ್ತ ಅಭಿವೃದ್ಧಿ
ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯಕ್ಕೆ ತನ್ನದೇ ಆದ ಪ್ರಾತಿನಿಧ್ಯ ಇದೆ. ಈವರೆಗೆ ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದಿಂದ ಭತ್ತದಲ್ಲಿ 45 ತಳಿಗಳು, 3 ಹೈಬ್ರೀಡ್ ಗಳು, 50 ತಾಂತ್ರಿಕತೆಗಳು, ರಾಗಿಯಲ್ಲಿ 37 ತಳಿಗಳು, ಕಬ್ಬಿನಲ್ಲಿ 17 ತಳಿಗಳು ಮತ್ತು 20 ತಂತ್ರಜ್ಞಾನಗಳು, ಮುಸುಕಿನ ಜೋಳದಲ್ಲಿ ನಾಲ್ಕು ತಳಿಗಳು ಮೇವಿನ ಬೆಳೆಗಳಲ್ಲಿ ನಾಲ್ಕು ತಳಿಗಳು, ಸೂರ್ಯಕಾಂತಿ ಸಂಕಿರಣ ತಿಳಿ (ಕೆ.ಬಿ.ಎಸ್.ಹೆಚ್-88) ಚಾಮರಾಜನಗರ ಕಪ್ಪು ಅರಿಶಿಣದ ತಳಿ, ಅರಿಶಿಣದ ತಳಿಯನ್ನು ಅಭಿವೃದ್ಧಿ ಪಡಿಸಲಾಗಿದೆ.

ರೈತರು ಜೈವಿಕ ಗೊಬ್ಬರಕ್ಕೆ ಹೆಚ್ಚಿನ ಒತ್ತು ನೀಡಬೇಕು ಜೈವಿಕ ಗೊಬ್ಬರ ಬಳಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ರೈತರು ಬಹು ಬೆಳೆ ಕೃಷಿಯನ್ನ ಹೆಚ್ಚು ಮಾಡಬೇಕು. ಬಹುಬೆಳೆ ಕೃಷಿಯಲ್ಲಿ ಶ್ರಮ ಮತ್ತು ಜವಾಬ್ದಾರಿ ಎರಡು ಹೆಚ್ಚಿರುತ್ತದೆ ಜೊತೆಗೆ ಆದಾಯವು ಸಹ ಹೆಚ್ಚು ಲಭಿಸುತ್ತದೆ.

Mandya 23

ಕೃಷಿ ಮೇಳ 2025 ರಲ್ಲಿ ನವೀನ ಕೃಷಿ ತಂತ್ರಜ್ಞಾನಗಳ ಪ್ರದರ್ಶನ, ವಸ್ತು ಪ್ರದರ್ಶನ, ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಪದ್ಧತಿ ಪ್ರಾತ್ಯಕ್ಷಿಕೆಗಳು, ಪಶು ಸಂಗೋಪನೆ ತಾಂತ್ರಿಕತೆಗಳು, ಮೀನು ಕೃಷಿ, ಸಸ್ಯಕ್ಷೇತ್ರ ನಿರ್ವಹಣೆಯಲ್ಲಿ ಪ್ರಮುಖವಾಗಿ ದೇಸಿ ಮತ್ತು ವಿದೇಶಿ ತಳಿಗಳ ಬಗ್ಗೆ ಮಾಹಿತಿ ಮತ್ತು ಮಾರಾಟ ಮಾಡಲಾಗುವುದು, ನಮ್ಮ ಜಿಲ್ಲೆಯಲ್ಲಿ ನೀರಿನ ಪ್ರಮಾಣ ಹೆಚ್ಚಿದೆ ಕೃಷಿ ಹೊಂಡ ನಿರ್ಮಾಣ ಮಾಡಿ ಮೀನು ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ಬಾಹುಬಲಿ ಕಬ್ಬಿನ ತಳಿ ಫೇಮಸ್‌
ನಮ್ಮ ಕೇಂದ್ರದಲ್ಲಿ ಅಭಿವೃದ್ಧಿ ಪಡಿಸಿದ ತಳಿಗಳನ್ನು ರಾಷ್ಟ್ರಮಟ್ಟದಲ್ಲಿ ಬಿಡುಗಡೆಗೊಳಿಸಲಾಗಿದೆ. ದೇಶದ ಪ್ರಥಮ ಹೈಬ್ರಿಡ್ ಬತ್ತದ ತಳಿಗೆ – (ಕೆ.ಆರ್.ಹೆಚ್-2) ಇಂದಿಗೂ ದೇಶದಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಇದೆ. ವಿ.ಸಿ ಫಾರಂ ನಿಂದಲೇ ಅಭಿವೃದ್ಧಿ ಪಡಿಸಿದ ಕಬ್ಬಿನ ತಳಿಯಾದ (ವಿ.ಸಿ.ಎಫ್-0517) ಅನ್ನು ಬಾಹುಬಲಿ ಎಂದು ಕರೆಯಲಾಗುತ್ತದೆ. ಸದರಿ ಕಬ್ಬಿನ ತಳಿಯೂ ಹೆಚ್ಚಿನ ಸಕ್ಕರೆ ಅಂಶ ಹೊಂದಿದ್ದು ರೈತರಿಗೆ ಹೆಚ್ಚು ಇಳುವರಿ ನೀಡಿ ಆದಾಯ ಹೆಚ್ಚಿಸುತ್ತಿದೆ. ಕರ್ನಾಟಕದಲ್ಲಿ ಅಲ್ಲದೇ ನೆರೆ ರಾಜ್ಯಗಳಲ್ಲೂ ಸದರಿ ಕಬ್ಬಿನ ತಳಿಯ ಬೇಡಿಕೆ ಹೆಚ್ಚಿದೆ.

Mandya 2 1

ಸಿಎಂ, ಹೆಚ್‌ಡಿಕೆ ಸೇರಿ ಗಣ್ಯರು ಭಾಗಿ
5 ಜಿಲ್ಲೆಗಳ ರೈತರನ್ನು ಒಳಗೊಂಡಂತೆ ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯ ಆಯೋಜಿಸಿರುವ ʻಕೃಷಿ ಮೇಳ 2025ʼ ಅನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ ಹಾಗೂ ಕೃಷಿ ಮೇಳದ ಎರಡನೇ ದಿನದಂದು ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವರಾದ ಹೆಚ್‌.ಡಿ ಕುಮಾರಸ್ವಾಮಿ ಅವರು ಭಾಗವಹಿಸಲಿದ್ದಾರೆ. ಮೂರನೇ ದಿನದಂದು ಜೆಎಸ್‌ಎಸ್‌ ಮಠದ ಸ್ವಾಮಿಗಳು ಭಾಗವಹಿಸಲಿದ್ದಾರೆ.

ಮೇಳದಲ್ಲಿ ಹೈಟೆಕ್ ತೋಟಗಾರಿಕೆ ಪ್ರಾತ್ಯಕ್ಷಿಕೆ ಸುಧಾರಿತ ಮೇವಿನ ತಳಿಗಳು ಮತ್ತು ತಾಂತ್ರಿಕತೆಗಳು, ಸಿರಿಧಾನ್ಯಗಳ ಮೇಳ, ಫಲಪುಷ್ಪ ಪ್ರದರ್ಶನ, ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ, ದೇಶಿ ರಾಸುಗಳ ಪ್ರದರ್ಶನ, ಔಷಧಿ ಸಸ್ಯಗಳ ಪ್ರಾತ್ಯಕ್ಷಿಕೆ, ಜೈವಿಕ ಇಂಧನದ ತಂತ್ರಜ್ಞಾನಗಳು, ಮಾರುಕಟ್ಟೆಯ ತಂತ್ರಗಳು, ಕೃಷಿ ಅರಣ್ಯ, ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆಗಳ, ಕೃಷಿ ಹವಾಮಾನ ನಿರ್ವಹಣೆ, ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮತ್ತು ಸಿರಿಧಾನ್ಯಗಳ ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು ನೀಡಲಾಗುವುದು.

ಕೃಷಿಯಲ್ಲಿ ಬಂಡವಾಳ ಹೂಡಿಕೆ ಟ್ರಿಕ್ಸ್‌
ಸದರಿ ಮೇಳದಲ್ಲಿ ವಿಸ್ಮಯಕಾರಿ ಕ್ರೀಟ ಪ್ರಪಂಚ, ಜೇನು ಕೃಷಿ, ಹೈಟೆಕ್ ನರ್ಸರಿ ಪ್ರದರ್ಶನ ಮತ್ತು ಮಾರಾಟ ರೈತರು ಬೆಳೆದ ಉತ್ಪನ್ನ ಮತ್ತು ಕೈಗೊಂಡ ಮೌಲ್ಯವರ್ಧನೆಯನ್ನು ನೇರ ಗ್ರಾಹಕರಿಗೆ ಮಾರಾಟ ಮಾಡಲು ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುತ್ತದೆ. ಕೃಷಿ ಯಾಂತ್ರಿಕೀಕರಣ ಪ್ರದರ್ಶನ ಮತ್ತು ಮಾರಾಟ ಸಹ ನಡೆಯುತ್ತದೆ. ದೇಶಿಯ ಔಷಧಿ ಗಿಡಗಳನ್ನು ರೈತರೊಂದಿಗೆ ಒಡಂಬಡಿಕೆ ಮಾಡಿಕೊಂಡು ಅವುಗಳ ಅಭಿವೃದ್ಧಿ ಪಡಿಸಿ ರೈತರಿಗೆ ಮಾರಾಟಕ್ಕೆ ಸಹಾಯ ಮಾಡಲಾಗುವುದು. ಯುವಕರು ಕೃಷಿಯ ಕಡೆ ಹೆಚ್ಚು ಹೊತ್ತು ನೀಡಬೇಕು. ಕೆಲಸವನ್ನರಸಿ ನೆರೆ ರಾಜ್ಯ, ಜಿಲ್ಲೆಗಳಿಗೆ ಹೋಗುವುದನ್ನು ಬಿಟ್ಟು ಕೃಷಿಯಲ್ಲಿ ಬಂಡವಾಳ ಹೂಡಿ ಆದಾಯ ಗಳಿಸಬಹುದು.

ಸಾಧಕರಿಗೆ ಸನ್ಮಾನ
ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸಮ್ಮಾನ ಮಾಡಲಾಗುವುದು ಐದು ಜಿಲ್ಲೆಗಳಿಂದ ಒಟ್ಟು ಹತ್ತು ಜನ ಜಿಲ್ಲಾಮಟ್ಟದ ಪ್ರಗತಿಪರ ರೈತರಿಗೆ ಪ್ರಶಸ್ತಿ ಮತ್ತು 55 ಯುವ ರೈತರಿಗೆ ತಾಲ್ಲೂಕು ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕೃಷಿ ಮೇಳದಲ್ಲಿ 350 ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಕೃಷಿ ಮೇಳಕ್ಕೆ ಬರೋದು ಹೇಗೆ?
ಇನ್ನೂ ನೆರೆಯ ಜಿಲ್ಲೆಗಳಿಂದ ಕೃಷಿ ಮೇಳಕ್ಕೆ ಬರುವ ಆಸಕ್ತ ರೈತರಿಗೆ ಆಯಾ ಐದು ಜಿಲ್ಲೆಯ ತಾಲೂಕು ಕೇಂದ್ರಗಳಿಂದ ವಾಹನ ವ್ಯವಸ್ಥೆ ಕಲ್ಪಿಸಲು ಮಾತನಾಡಲಾಗಿದೆ. ಮಂಡ್ಯದಿಂದ ವಿಸಿ ಫಾರ್ಮ್ ಗೆ ಬರಲು ಪ್ರತಿ 15 ನಿಮಿಷಕ್ಕೆ ಒಂದು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಟ್ರಾಫಿಕ್ ನಿರ್ವಹಣೆ ಮಾಡಲು ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

TAGGED:chaluvarayaswamyKrishi Mela 2025mandyaMandya VC Farmsiddaramaiahಚಲುವರಾಯಸ್ವಾಮಿಮಂಡ್ಯಮಂಡ್ಯ ಕೃಷಿ ಮೇಳಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema news

AR Rahman 2
ರೆಹಮಾನ್ ಕೋಮುರಾಗ – ಪುತ್ರಿಯರ ಬೆಂಬಲ
Cinema Latest Top Stories
ashwini gowda gilli nata
ಗಿಲ್ಲಿ ನಿಜವಾದ ಬಡವ ಅಲ್ಲ, ಬಡವನ ಥರ ಗೆಟಪ್‌ ಹಾಕ್ಕೊಂಡು ಗೆದ್ದಿದ್ದಾರೆ: ಅಶ್ವಿನಿ ಗೌಡ
Cinema Latest Main Post TV Shows
ashwini gowda 1
ನಾನು ವಿನ್ನರ್‌ ಆಗುವ ನಿರೀಕ್ಷೆ ಹೆಚ್ಚಿತ್ತು: 2ನೇ ರನ್ನರ್‌ ಅಪ್‌ ಅಶ್ವಿನಿ ಗೌಡ ರಿಯಾಕ್ಷನ್‌
Cinema Latest Main Post TV Shows
Gilli Nata 5
BBK 12 | ಕಾವ್ಯನ್ನ ಮದ್ವೆ ಆಗ್ತೀರಾ ಅಂದಿದ್ದಕ್ಕೆ ಗಿಲ್ಲಿ ಕೊಟ್ಟ ಉತ್ತರ ಏನು?
Cinema Latest Main Post TV Shows

You Might Also Like

RCB Women vs Gujarat Giants Women won by 61 runs RCB QUALIFY FOR THE PLAYOFFS
Cricket

ಗುಜರಾತ್‌ ವಿರುದ್ಧ 61 ರನ್‌ಗಳ ಭರ್ಜರಿ ಜಯ – ಪ್ಲೇ ಆಫ್‌ ಪ್ರವೇಶಿಸಿದ ಆರ್‌ಸಿಬಿ

Public TV
By Public TV
3 minutes ago
Nitin Nabin
Latest

ಹೊಸ ತಲೆಮಾರಿನತ್ತ ಹೆಜ್ಜೆ ಹಾಕಿದ ಬಿಜೆಪಿ – 45 ವರ್ಷಕ್ಕೆ ನಿತಿನ್ ನಬಿನ್‌ಗೆ ಅಧ್ಯಕ್ಷ ಪಟ್ಟ

Public TV
By Public TV
1 hour ago
DGP Ramachandra Rao
Karnataka

ರಾಸಲೀಲೆ ವಿಡಿಯೋ ವೈರಲ್ – ರಾಮಚಂದ್ರ ರಾವ್‌ಗೆ 10 ದಿನಗಳ ಕಡ್ಡಾಯ ರಜೆ

Public TV
By Public TV
2 hours ago
SSLC Exams
Bengaluru City

SSLC ಪ್ರಶ್ನೆಪತ್ರಿಕೆಗೆ ಸಿಗುತ್ತಾ ಆಯ್ಕೆ?

Public TV
By Public TV
3 hours ago
UAE President Zayed Al Nahyan and PM Narendra Modi
Latest

ಜಸ್ಟ್‌ 2 ಗಂಟೆಗಳ ಭೇಟಿ – ಭಾರತಕ್ಕೆ ಯುಎಇ ಅಧ್ಯಕ್ಷರು ಬಂದಿದ್ದು ಯಾಕೆ?

Public TV
By Public TV
3 hours ago
Madikeri 5
Crime

ಗೋಮಾಂಸ ಸಾಗಾಟ ಮಾಡ್ತಿದ್ದ ಆರೋಪಿ ಬಂಧನ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?