ಬೆಂಗಳೂರು: ಹೊಸಪೇಟೆಯಲ್ಲಿ (Hosapete) ರಾಮ ಭಕ್ತರಿಂದ ರೈಲಿಗೆ (Indian Railways) ಬೆಂಕಿ ಹಚ್ಚುತ್ತೇನೆಂದು ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಪೊಲೀಸರು (Police) ಬಂಧಿಸಿದ್ದಾರೆ.
ಶೇಖ್ ಸಾಬ್ ಬಂಧಿತ ಆರೋಪಿ. ಈತ ರೈಲ್ವೇಯಲ್ಲಿ ಗ್ರೂಪ್ ಸಿ (Group C) ನೌಕರನಾಗಿದ್ದಾನೆ ಎಂದು ಪಬ್ಲಿಕ್ ಟಿವಿಗೆ ರೈಲ್ವೇಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದ ಒಕ್ಕಲಿಗ ಸಚಿವರ ನಡುವೆ ಕೋಲ್ಡ್ ವಾರ್!
- Advertisement -
- Advertisement -
ಶೇಖ್ ಸಾಬ್ ರಾತ್ರಿ ಪಾಳಿಯ ಕೆಲಸಕ್ಕೆ ಹೋಗಲು ಅಯೋಧ್ಯಾ ಧಾಮ್ (Ayodhya Dham) ರೈಲಿನಿಂದ ಹೊಸಪೇಟೆ ಗುಂತಕಲ್ ರೈಲಿಗೆ ಹೋಗಲು ಯತ್ನಿಸಿದ್ದಾನೆ. ಈ ವೇಳೆ ರಾಮಭಕ್ತರಿಗೂ ಆತನಿಗೂ ಮಾತಿಗೆ ಮಾತು ಬೆಳೆದಿರುವ ವಿಚಾರ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಅಕ್ಬರ್, ಸೀತಾ ಸಿಂಹಗಳಿಗೆ ಮರುನಾಮಕರಣ ಮಾಡಿ- ಕೋಲ್ಕತ್ತಾ ಹೈಕೋರ್ಟ್ ಸೂಚನೆ
- Advertisement -
ಏನಿದು ಘಟನೆ?
ಮೈಸೂರಿನಿಂದ ಅಯೋಧ್ಯೆಗೆ ತೆರಳಿದ್ದ ರಾಮ ಭಕ್ತರು ಮರಳಿ ರೈಲಿನಲ್ಲಿ ಮೈಸೂರಿಗೆ ಬರುತ್ತಿದ್ದರು. ಈ ವೇಳೆಯಲ್ಲಿ ರಾಮ ಭಕ್ತರು ಮಾರ್ಗದುದ್ದಕ್ಕೂ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ್ದಾರೆ. ಅಯೋಧ್ಯೆಯಿಂದ ಮೈಸೂರಿಗೆ ಬರುತ್ತಿದ್ದ ರೈಲು ಹೊಸಪೇಟೆಯಲ್ಲಿ ನಿಂತಾಗ ನಾಲ್ಕು ಮಂದಿ ಅನ್ಯಕೋಮಿನ ಯುವಕರು ರಾಮ ಭಕ್ತರ ಜೊತೆಯಲ್ಲಿ ವಾಗ್ವಾದ ಆರಂಭ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಅನ್ಯ ಕೋಮಿನ ಯುವಕರಲ್ಲಿ ಓರ್ವ ರೈಲಿಗೆ ಬೆಂಕಿ ಹಚ್ಚುತ್ತೇವೆ ಎಂದು ಹೇಳಿದ್ದಾನೆ. ಇದರಿಂದ ಕೆರಳಿದ ರಾಮ ಭಕ್ತರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ರೈಲು ಎರಡು ಗಂಟೆ ತಡವಾಗಿ ಹೊಸಪೇಟೆಯಿಂದ ಹೊರಟಿದೆ.
- Advertisement -