ಕೊಪ್ಪಳ: ಕಲ್ಮಠ ಸ್ವಾಮಿ ಕಾಮ ಪುರಾಣ ಬಯಲಿಗೆಳೆದ ಕಾರು ಚಾಲಕನಿಗೆ ಜೀವಬೆದರಿಕೆ ಹಾಕಿರೋ ಪ್ರಕರಣ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.
ಸ್ವಾಮೀಜಿ ಆಪ್ತರಾದ ಶರಣಪ್ಪ ಹುನಗುಂದ, ಶರಣಪ್ಪ ಹೊಸೂರು, ನಾಗರಾಜ್, ಶಿವಾನಂದ ಹಾಗೂ ಗುರುಪಾದಯ್ಯ ಕಾರು ಚಾಲಕ ಮಲ್ಲಯ್ಯಸ್ವಾಮಿ ಮನೆಗೆ ನುಗ್ಗಿ ಕಲ್ಮಠ ಸ್ವಾಮೀಜಿ ವಿರುದ್ಧ ಕೊಟ್ಟಿರೋ ದೂರು ಹಿಂತೆಗೆದುಕೊಳ್ಳುವಂತೆ ಜೀವಬೆದರಿಕೆ ಹಾಕಿದ್ದು ಅಲ್ಲದೇ ಅವಾಚ್ಯ ಪದದಿಂದ ಬೈದು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಲೈಂಗಿಕ ಹಗರಣ ಹೊರಬಿದ್ದ ನಂತರ ಎಸ್ಕೇಪ್ ಆಗಿದ್ದ ಕಲ್ಮಠ ಸ್ವಾಮೀಜಿ ಮಠಕ್ಕೆ ವಾಪಸ್

ಈ ಕುರಿತು ಮಲ್ಲಯ್ಯಸ್ವಾಮಿ ಗಂಗಾವತಿ ನಗರಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 143,147,323, 504, 506, ಹಾಗೂ 149 ರಡಿ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇನ್ನೊಂದೆಡೆ ಸ್ವಾಮೀಜಿ ವಿರುದ್ಧ ಪ್ರತಿಭಟನೆ ಮಾಡ್ತಿರೋ ಹೋರಾಟಗಾರರಿಗೆ ಹಣದ ಆಮೀಷವೊಡ್ಡುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ವೀರಶೈವ ಲಿಂಗಾಯತ ಸಮಾಜದ ಮುಖಂಡ ಮಹಾಬಳೇಶ ಹಾಸಿನಾಳರಿಗೆ ಹಣದ ಆಮೀಷವೊಡ್ಡಿದ್ದಾರೆ ಅಂತ ಬಹಿರಂಗಪಡಿಸಿದ್ದಾರೆ. ಜನವರಿ 22ರಂದು ಕೊಟ್ಟೂರಸ್ವಾಮಿ ಪೀಠದಿಂದ ಕೆಳಗಿಳಿಯಬೇಕೆಂದು ಮಠಕ್ಕೆ ಮುತ್ತಿಗೆ ಹಾಕಲಾಗೋದು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕಲ್ಮಠದ ಕೊಟ್ಟೂರು ಸ್ವಾಮಿಯ ಕಾಮಪುರಾಣ ಬಯಲು- ಟೀಚರ್, ಅಡುಗೆ ಮಹಿಳೆ, ಲೈಬ್ರೇರಿಯನ್ ಯಾರನ್ನೂ ಬಿಟ್ಟಿಲ್ಲ ಈ ಸ್ವಾಮಿ
https://www.youtube.com/watch?v=uUJHzuz-RDE
https://www.youtube.com/watch?v=-l8QW35t_fA








