Connect with us

Districts

ಕಲ್ಮಠದ ಕೊಟ್ಟೂರು ಸ್ವಾಮಿಯ ಕಾಮಪುರಾಣ ಬಯಲು- ಟೀಚರ್, ಅಡುಗೆ ಮಹಿಳೆ, ಲೈಬ್ರೇರಿಯನ್ ಯಾರನ್ನೂ ಬಿಟ್ಟಿಲ್ಲ ಈ ಸ್ವಾಮಿ

Published

on

Share this

– ಈ ಸ್ವಾಮೀಜಿಗೆ ಅಮ್ಮ-ಮಗಳು ಇಬ್ಬರೂ ಬೇಕಂತೆ
– ತನ್ನೊಂದಿಗೆ ಮಂಚಕ್ಕೇರಿದ ಮಹಿಳೆಗೆ 35 ಲಕ್ಷ ರೂಪಾಯಿ ಭವ್ಯ ಬಂಗಲೆ
– ಫಾರಿನ್ ಭಕ್ತರ ಜೊತೆಯೂ ಕಾಮಿ ಸ್ವಾಮಿಯ ಚಕ್ಕಂದ
– ತನ್ನಿಂದ ಹುಟ್ಟಿದ ಗಂಡು ಮಗುವಿಗೆ ಕೊಡಿಸ್ತಾನೆ ಫ್ರೀ ಎಜುಕೇಷನ್

ಕೊಪ್ಪಳ: ಜಿಲ್ಲೆಯ ಗಂಗಾವತಿಯ ಕಲ್ಮಠದ ಕೊಟ್ಟೂರು ಸ್ವಾಮಿ ಕಾಮಪುರಾಣ ಬಯಲಾಗಿದೆ. ಈ ಮಠದ ಹೆಸರಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ನಡೀತಿವೆ. ಸಂಸ್ಥೆಯಲ್ಲಿ ಕೆಲಸ ಮಾಡೋ ಮಹಿಳೆಯರು ಈ ಸ್ವಾಮಿ ಜೊತೆ ಮಂಚವೇರಬೇಕಂತೆ. ಈತನ ಜೊತೆಗೆ ಮಂಚಕ್ಕೇರಿರೋರು ಒಂದಲ್ಲ, ಎರಡಲ್ಲ ಅನೇಕ ಮಹಿಳೆಯರು. ಟೀಚರ್, ಅಡುಗೆ ಮಹಿಳೆ, ಲೈಬ್ರೇರಿಯನ್ ಹೀಗೆ ಯಾರನ್ನೂ ಬಿಟ್ಟಿಲ್ಲ ಈ ಸ್ವಾಮಿ

ಹೌದು. ವೀರಶೈವ ಸಂಪ್ರದಾಯ ಈ ಸ್ವಾಮಿಗೆ ಯಾವುದು ಅನ್ವಯ ಆಗೋದಿಲ್ವಂತೆ. ಈ ಸ್ವಾಮೀಜಿಗೆ ಹೆಂಗಸರು ಮಾಡಿರೋ ಅಡುಗೆ, ಹೈಫೈ ಡ್ರಿಂಕ್ಸ್, ನಾನ್ ವೆಜ್ ಆಹಾರ ಪ್ರಿಯವಾಗಿದೆ. ಇನ್ನು ಈ ಸ್ವಾಮಿ ಬ್ಯಾಂಕಾಕ್, ಥೈವಾನ್‍ ನಿಂದ ಬಂದ ಮಹಿಳಾ ಭಕ್ತರ ಜೊತೆಯೂ ಚಕ್ಕಂದವಾಡಿದ್ದಾನೆ. ಇನ್ನು ಮಠದ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡೋ ಚೆಲುವೆಯರು ಈ ಸ್ವಾಮೀಜಿ ಕಣ್ಣಿಗೆ ಬಿದ್ರೆ ರಾತ್ರಿ ಮಂಚಕ್ಕೆ ಬರಲೇಬೇಕು.

 

ಶಿಕ್ಷಕಿ ಜೊತೆ ಸೆಕ್ಸ್: ಮೊದಲು ಕಲ್ಮಠದ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಮಹಿಳೆಗೆ ಕಲ್ಮಠದಲ್ಲಿ ವಾಸ ಮಾಡಲು ಸ್ವಾಮೀಜಿ ಹೇಳಿದ್ದ. ಹೀಗಾಗಿ ಮಠದಲ್ಲಿ ಈ ಶಿಕ್ಷಕಿ ಇದ್ದಳು. ಮಠದಲ್ಲಿರುವ ಎರಡು ಕೊಠಡಿಯ ಒಳಗೆ ಬಾಗಿಲು ಇದೆ. ಈ ಶಿಕ್ಷಕಿಯ ಜೊತೆಯೂ ಕೂಡ ಸ್ವಾಮೀಜಿ ದೈಹಿಕ ಸಂಪರ್ಕ ಮಾಡಿದ್ದಾನೆ. ಈಗ ಶಿಕ್ಷಕಿ ನಿವೃತ್ತಿಯಾಗಿದ್ದಾಳೆ. ಶಿಕ್ಷಕಿ ಮದುವೆಯಾಗದಂತೆ ನೋಡಿಕೊಂಡಿದ್ದಾನೆ. ಈಗ ಆಕೆಗೆ ವಯಸ್ಸಾಗುತ್ತಿದ್ದಂತೆ ಸ್ವಾಮೀಜಿ ಕೈ ಕೊಟ್ಟಿದ್ದು, ಗಂಗಾವತಿಯಲ್ಲಿ ಒಬ್ಬಳೇ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದಾಳೆ.

 

ಮಂಚಕ್ಕೇರಿದ ಮಹಿಳೆಗೆ 35 ಲಕ್ಷದ ಮನೆ: ಹುಲಿಹೈದರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಿಳೆಯನ್ನ ತನ್ನ ಮಠದಲ್ಲಿ ತಂದಿಟ್ಟುಕೊಂಡು ರತಿಕ್ರೀಡೆ ಆಡ್ತಿದ್ದಾನೆ. ಈಗ ಆ ಮಹಿಳೆಯನ್ನ ಹುಲಿಹೈದರ್ ಗ್ರಾಮಪಂಚಾಯತ್ ಸದಸ್ಯೆಯನ್ನಾಗಿ ಮಾಡಿದ್ದಲ್ಲದೆ ಗಂಗಾವತಿಯಲ್ಲಿ 35 ಲಕ್ಷದ ಮನೆ ಕಟ್ಟಿಸಿಕೊಟ್ಟಿದ್ದಾನೆ. ಮನೆಯಲ್ಲಿ ಸಿಸಿ ಕ್ಯಾಮೆರಾ ಮತ್ತು ಎಸಿ ಹಾಕಿಸಿದ್ದಾನೆ. ಮಹಿಳೆಯ ಪತಿಗೆ ತಮ್ಮ ಕಾಲೇಜಿನಲ್ಲಿ ಸಿಪಾಯಿ ಕೆಲಸ ನೀಡಿದ್ದಾನೆ.

ಅಮ್ಮ ಮಗಳು ಇಬ್ಬರೂ ಬೇಕಂತೆ: ಅಷ್ಟೆ ಅಲ್ಲ ಗ್ರಾ.ಪಂ ಸದಸ್ಯೆಯನ್ನಾಗಿ ಮಾಡಿದ ಮಹಿಳೆಯ ಮಗಳು 12ನೇ ಕ್ಲಾಸ್ ಓದುತ್ತಿದ್ದಾಳೆ. ಈ ಮಗಳ ಜೊತೆ ಕೂಡ ಸ್ವಾಮೀಜಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಮಗಳು ಗರ್ಭವತಿಯಾದಾಗ ಗದಗನಲ್ಲಿ ಅಬಾರ್ಷನ್ ಮಾಡಿಸಿದ್ದಾನೆ. ಈಗಲೂ ಸ್ವಾಮೀಜಿಯ ಮಠದಲ್ಲಿ ಈಕೆ ಇದ್ದಾಳೆ.

ಲೈಬ್ರೇರಿಯನ್ ಜೊತೆಯೂ ಕಾಮದಾಟ: ಈ ಕಾಮಿಸ್ವಾಮಿ ಕಾಮಪುರಾಣ ಇಷ್ಟಕ್ಕೆ ನಿಲ್ಲೋದಿಲ್ಲ. ಯಾಕಂದ್ರೆ ಈ ಸ್ವಾಮಿ ಕಾಮತೃಷೆಗೆ ಬಲಿಯಾದವರ ಲಿಸ್ಟ್ ಅಷ್ಟೊಂದಿದೆ. ಮಠದ ಸಂಸ್ಥೆಯಲ್ಲಿ ಲೈಬ್ರೇರಿಯನ್ ಆಗಿದ್ದ ಮಹಿಳೆಯನ್ನ ಮಂಚಕ್ಕೆ ಕರೆದು ಕಾಮದಾಟ ಆಡಿದ್ದಾನೆ. ಕಲ್ಮಠ ಶಿಕ್ಷಣ ಸಂಸ್ಥೆಯಲ್ಲಿ ಲೈಬ್ರೇರಿಯನ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಎರಡು ಗಂಡು ಮಕ್ಕಳು ಕರುಣಿಸಿದ್ದಾನೆ ಈ ಕಾಮಿ ಸ್ವಾಮಿ. ಆಕೆಯ ಪತಿಗೆ ಮಾಹಿತಿ ತಿಳಿದು ಗಲಾಟೆಯಾಗಿದೆ. ನಂತರ ಸ್ವಾಮೀಜಿ 15 ಲಕ್ಷ ರೂಪಾಯಿ ಕೊಟ್ಟು ತಣ್ಣಗೆ ಮಾಡಿದ್ದಾನೆ. ಅಷ್ಟೇ ಅಲ್ಲ ಪ್ರತಿ ತಿಂಗಳು ಮಕ್ಕಳಿಗೆ ಹಣನೂ ಕೊಡುತ್ತಿದ್ದಾನೆ. ಸದ್ಯ ಈ ಮಹಿಳೆ ಗದಗ ಜಿಲ್ಲೆಯಲ್ಲಿ ವಾಸವಾಗಿದ್ದಾರೆ. ಆವಾಗಿನಿಂದ ಈ ಸ್ವಾಮಿ ಕಾಮದ ವರಸೆ ಚೇಂಜ್ ಆಗಿದೆ. ನಂತರ ಸಂತಾನಹರಣ ಮಾಡಿಸಿಕೊಂಡ ಮಹಿಳೆಯರ ಮೇಲೆ ಕಣ್ಣು ಹಾಕಿದ್ದಾನೆ ಈ ಕಾಮಿಸ್ವಾಮಿ.

ಕೇಂದ್ರ ಮಠದಲ್ಲೊಬ್ಬಳು, ಶಾಖಾ ಮಠದಲ್ಲೊಬ್ಬಳು ಬೇಕಂತೆ: ಕೇಂದ್ರ ಮಠದೊಳಗೆ ಒಬ್ಬ ಮಹಿಳೆ ಇದ್ದು, ಬಾಗಲಕೋಟೆ ಜಿಲ್ಲೆಯ ಶಾಖಾಮಠದಲ್ಲಿ ಅಡುಗೆ ಮಹಿಳೆಯೊಂದಿಗೆ ಒತ್ತಾಯದ ಸೆಕ್ಸ್ ಮಾಡ್ತಾನಂತೆ ಈ ಸ್ವಾಮಿ. ಶಾಖಮಠದಲ್ಲಿಯೇ ಈ ಸ್ವಾಮೀಜಿಗೆ ಮೈತೊಳೆದು ಅವನಿಗೆ ಬಟ್ಟೆ ಹಾಕಿಸುವ ಕೆಲಸ ಈ ಮಹಿಳೆಯ ಮಾಡುತ್ತಿದ್ದಾಳೆ. ಹಲವಾರು ವರ್ಷಗಳಿಂದ ಮಠದಲ್ಲಿ ಈ ಮಹಿಳೆಯ ಜೊತೆ ದೈಹಿಕ ಸಂಪರ್ಕ ಮಾಡುತ್ತಿದ್ದಾನೆ.

ಡ್ರೈವರ್ ಗೆ ಕೊಲೆ ಬೆದರಿಕೆ: ಗನ್ ಲೈಸೆನ್ಸ್ ಹೊಂದಿರೋ ಈ ಸ್ವಾಮಿ ತನಗೆ ಸಹಕರಿಸದಿದ್ರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕ್ತಾನೆ ಎನ್ನಲಾಗಿದೆ. 20 ವರ್ಷಗಳಿಂದ ಕಾಮಿಸ್ವಾಮಿ ಕಾಮದಾಟಕ್ಕೆ ಪರೋಕ್ಷವಾಗಿ ಸಹಕರಿಸ್ತಿದ್ದ ಡ್ರೈವರ್ ಈಗ ಸಹಕರಿಸದ್ದಕ್ಕೆ ಸಂಬಳ ಕೊಡದೆ ಕೆಲಸದಿಂದ ತಗೆದುಹಾಕಿದ್ದಾನೆ. ಒಂದು ವೇಳೆ ತನ್ನೆಲ್ಲ ಕಾಮಪುರಾಣ ಬಯಲು ಮಾಡಿದ್ರೆ ಕೊಲೆ ಮಾಡ್ತೀನಿ ಅಂತ ಹೆದರಿಸಿ ಗುಂಡಾಗಳಿಂದ ಡ್ರೈವರ್ ಮೇಲೆ ಹಲ್ಲೆ ಮಾಡಿಸಿದ್ದಾನೆ. ಈಗ ಡ್ರೈವರ್ ಮಲ್ಲಯ್ಯಸ್ವಾಮಿ ಅಂಗಡಿ ಕುಟುಂಬ ಜೀವಭಯದಲ್ಲಿ ಊರು ಬಿಡುವ ಸ್ಥಿತಿಯಲ್ಲಿದ್ದಾರೆ.

ಸ್ವಾಮೀಜಿಯಿಂದ ಇಷ್ಟೆಲ್ಲಾ ಅನಾಚಾರ ನಡೀತಿದ್ರು ಟ್ರಸ್ಟ್ ನವರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈ ಸ್ವಾಮಿ ಮತ್ತೊಂದು ಟ್ರಸ್ಟ್ ಮಾಡಿಕೊಂಡು ಐಟಿಐ, ಡಿಇಡಿ, ಕಾಲೇಜು ನಡೆಸ್ತಿದ್ದಾನೆ. ಮಠದ ಆಸ್ತಿಯನ್ನ ತನ್ನ ಆಸ್ತಿ ಮಾಡಿಕೊಂಡು ಹೆಂಗಸರಿಗೆ ಮೋಸ ಮಾಡಿ ಅವರಿಗೆ ಪರಭಾರೆ ಮಾಡ್ತಿದ್ದಾನೆ.

9 ನೇ ಪೀಠಾಧಿಪತಿಯಾಗಿರೋ ಕೊಟ್ಟೂರು ಸ್ವಾಮಿ ಕಾಮದಾಟಕ್ಕೆ ಬಲಿಯಾಗಿರೋ ಮಹಿಳೆಯರು ಅನಾಮಧೇಯ ಪತ್ರ ಬರೆದು ನೋವು ತೋಡಿಕೊಂಡಿದ್ದಾರೆ. ಪೊಲೀಸರು ಇಂಥ ಕಾಮಿಸ್ವಾಮಿ ಮೇಲೆ ಕ್ರಮಕೈಗೊಂಡು ಮಠದ ಪಾವಿತ್ರ್ಯತೆ ಕಾಪಾಡಬೇಕಿದೆ.

 

Click to comment

Leave a Reply

Your email address will not be published. Required fields are marked *

Advertisement