ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದ (Kalaburagi Central Jail) ಅಧೀಕ್ಷಕಿ (Jail Superintendent) ಅನಿತಾ ಅವರ ಕಾರನ್ನು ಸ್ಫೋಟಿಸುವುದಾಗಿ ಬೇದರಿಕೆ ಹಾಕಿದ್ದ ಪ್ರಕರಣ ಸಂಬಂಧ ಇಬ್ಬರು ಮಹಿಳೆಯರು ಸೇರಿ 9 ಕೈದಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮುಸ್ತಫಾ,ನಸೀರ್, ಬಚ್ಚನ್,ಅಲ್ತಾಫ್, ದೇವರಾಜ್, ನಾಗರಾಜ್, ಶ್ರೀಕಾಂತ್ ಸೇರಿ 9 ಕೈದಿಗಳ (Prisoners) ವಿರುದ್ಧ ಅಧೀಕ್ಷಕಿ ಅನಿತಾ ಎಫ್‌ಐಆರ್ ದಾಖಲಿಸಿದ್ದಾರೆ. ಜೈಲಿನಲ್ಲಿ ಬೀಡಿ, ಗುಟ್ಕಾ ಸಿಗರೇಟ್ ಬಂದ್ ಮಾಡಿದ್ದಕ್ಕೆ ಅನೀತಾ ವಿರುದ್ಧ ಕೈದಿಗಳು ಪ್ರತಿಭಟನೆ ನಡೆಸಿದ್ದರು. ಆ ಬಳಿಕ ದುಷ್ಕರ್ಮಿಯೊಬ್ಬನಿಂದ ಆಡಿಯೋ ರೂಪದಲ್ಲಿ ಬೆದರಿಕೆ ಸಂದೇಶ ಬಂದಿತ್ತು. ಇದನ್ನ ಜೈಲಿನಲ್ಲಿರುವ ಕೈದಿಗಳೇ ಕಳುಹಿಸಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿತ್ತು. ಇದೀಗ ಈ ಪ್ರಕರಣದ ಹಿಂದೆ 9 ಜನ ಕೈದಿಗಳ ಕೈವಾಡ ಇರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮೋದಿ ಮನೆ ಹೊರಗಿನ ನಾಯಿಯಂತೆ ಚುನಾವಣಾ ಆಯೋಗ ವರ್ತಿಸುತ್ತಿದೆ: ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ಎಂಎಲ್‌ಸಿ
Advertisement
Advertisement
ಜೈಲಾಧಿಕಾರಿಗಳೇ ಎತ್ತಿಕಟ್ಟಿರುವ ಆರೋಪ:
ಮತ್ತೊಂದೆಡೆ ಅನಿತಾ ಅವರ ಬ್ಲ್ಯಾಕ್‌ಮೇಲ್ ಪ್ರಕರಣದ ಹಿಂದೆ ಜೈಲಾಧಿಕಾರಿಗಳೇ ಇದ್ದಾರೆ ಅನ್ನೋ ಆರೋಪವೂ ಕೇಳಿಬಂದಿದೆ. ಜೈಲಿನಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಿದ ಹಿನ್ನೆಲೆ ಅನಿತಾ ಅವರ ವಿರುದ್ಧ ಪಿತೂರಿ ನಡೆಸಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಈ ಬಗ್ಗೆಯೂ ತನಿಖೆ ನಡೆಯುತ್ತಿರುವುದಾಗಿ ಜೈಲಿನ ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕೇಜ್ರಿವಾಲ್ ಮೇಲೆ ನಿಗೂಢ ದ್ರವ ಎಸೆತ – ದಾಳಿ ಹಿಂದೆ ಬಿಜೆಪಿ ಕೈವಾಡ ಎಂದು ಆರೋಪ
Advertisement
Advertisement
ಏನಿದು ಪ್ರಕರಣ?
ಕಲಬುರಗಿ ಸೆಂಟ್ರಲ್ ಜೈಲಿನ ಅಧೀಕ್ಷಕಿ ಅನಿತಾ ಅವರ ಕಾರನ್ನು ಸ್ಫೋಟಿಸುವುದಾಗಿ ದುಷ್ಕರ್ಮಿಯೊಬ್ಬ ಆಡಿಯೋ ಸಂದೇಶ ಕಳುಹಿಸಿದ್ದ ಪ್ರಕರಣ ಇದೇ ನವೆಂಬರ್ 28ರಂದು ಬೆಳಕಿಗೆ ಬಂದಿತ್ತು. ಅನಾಮದೇಯ ವ್ಯಕ್ತಿಯಿಂದ ಕಲಬುರಗಿ ನಗರದ ಪೊಲೀಸ್ ಇನ್ಸೆಪೆಕ್ಟರ್ ಮೊಬೈಲ್‍ಗೆ ಬೆದರಿಕೆ ಸಂದೇಶ ಬಂದಿತ್ತು. ಈ ಮಾಹಿತಿಯನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಇದರಿಂದ ಅಲರ್ಟ್ ಆದ ಅಧಿಕಾರಿಗಳು ಕಾರನ್ನು ಸಿಸಿಟಿವಿ ಇರುವೆಡೆ ಮಾತ್ರ ಪಾರ್ಕ್ ಮಾಡುವಂತೆ ಕಾರು ಚಾಲಕನಿಗೆ ಸೂಚಿಸಿದ್ದರು. ಇದನ್ನೂ ಓದಿ: ಹೈಬ್ರಿಡ್ ಮಾಡೆಲ್‌ನಲ್ಲಿ ಚಾಂಪಿಯನ್ಸ್ ಟ್ರೋಫಿಗೆ ಆಡಲು ಪಾಕಿಸ್ತಾನ ಒಪ್ಪಿಗೆ – ಆದ್ರೆ ಕಂಡೀಷನ್ ಅಪ್ಲೈ
ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೆ ಕಲಬುರಗಿ ಜೈಲಿಗೆ ಅನಿತಾ ಅವರು ವರ್ಗಾವಣೆಯಾಗಿ ಬಂದಿದ್ದರು. ಜೈಲಿನಲ್ಲಿ ಚಾರ್ಜ್ ತೆಗೆದುಕೊಂಡ ದಿನವೆ ಕೈದಿಗಳ ಹೈಫೈ ಲೈಫ್ ಅನಾವರಣ ಆಗಿತ್ತು. ಇದನ್ನು ಗಂಭೀರವಾಗಿ ಅವರು ಪರಿಗಣಿಸಿದ್ದರು. ಇದಾದ ಬಳಿಕ ಕಾರಾಗೃಹ ಇಲಾಖೆ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿತ್ತು. ಜೈಲಿನಲ್ಲಿ ಬೀಡಿ, ಗುಟ್ಕಾ ಸಿಗರೇಟ್ ಬಂದ್ ಮಾಡಿದ್ದರು. ಇದರಿಂದ ಕೆರಳಿದ ಕೈದಿಗಳು ಅನೀತಾ ವಿರುದ್ಧ ಪ್ರತಿಭಟನೆ ಮಾಡಿದ್ದರು. ಇದನ್ನೂ ಓದಿ: ಫೆಂಗಲ್ ಅಬ್ಬರ; ಚೆನ್ನೈನ ಎಟಿಎಂ ಬಳಿ ವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವು – ಪ್ರವಾಹದ ನೀರಿನಲ್ಲಿ ತೇಲಿದ ಶವ