ಬೀದರ್: ಮಹಿಳಾ ಮತದಾರರಿಗೆ ಹಂಚಲು ತೆಗೆದುಕೊಂಡು ಹೋಗುತ್ತಿದ್ದ ಸಾವಿರಾರು ಸೀರೆಗಳನ್ನು ಪೊಲೀಸರು ಜಪ್ತಿ ಮಾಡಿದ ಘಟನೆ ಬೀದರ್ (Bidar) ಜಿಲ್ಲೆಯ ಭಾಲ್ಕಿ (Bhalki) ಪಟ್ಟದಲ್ಲಿ ನಡೆದಿದೆ.
ಚುನಾವಣೆ (Election) ಹತ್ತಿರ ಬರುತ್ತಿದ್ದಂತ್ತೆ ಬೀದರ್‌ನಲ್ಲಿ ಗಿಫ್ಟ್ ಪಾಲಿಟಿಕ್ಸ್ ಜೋರಾಗಿ ನಡೆಯುತ್ತಿದೆ. ಸೋಮವಾರ ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ (Eshwara Khandre) ಅವರ ಭಾವ ಚಿತ್ರವಿರುವ ಸೀರೆಗಳ ಪ್ಯಾಕೆಟ್‌ಗಳನ್ನು ಭಾಲ್ಕಿ ನಗರದ ಮನೆ ಮನೆಗೆ ತೆರಳಿ ಕಾಂಗ್ರೆಸ್ (Congress) ಕಾರ್ಯಕರ್ತರು ಹಂಚುತ್ತಿದ್ದರು. ಈ ಸಂದರ್ಭ ಬಿಜೆಪಿ (BJP) ಕಾರ್ಯಕರ್ತರು ಎಂಟ್ರಿಯಾಗಿದ್ದಾರೆ. ಇದನ್ನೂ ಓದಿ: ಹೊರಗಿನ ಅಭ್ಯರ್ಥಿಗಳಿಗೆ ಮಣೆ ಹಾಕುವ ಕನಕಗಿರಿ ಮತದಾರರು
ಭಾಲ್ಕಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಿಕೆ ಸಿದ್ರಾಮ್ ಹಾಗೂ ಕಾರ್ಯಕರ್ತರು ಆಗಮಿಸಿ ಪರಿಶೀಲನೆ ಮಾಡುತ್ತಿದ್ದಾಗ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಭಾಲ್ಕಿ ಪೊಲೀಸರು ಸಾವಿರಾರು ಸೀರೆ ಬಾಕ್ಸ್‌ಗಳನ್ನು ಜಪ್ತಿ ಮಾಡಿ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಸಕ್ರಿಯ ರಾಜಕಾರಣಕ್ಕೆ ಸುಷ್ಮಾ ಸ್ವರಾಜ್ ಪುತ್ರಿ
ಸೀರೆ ಹಂಚಿ ಮಹಿಳಾ ಮತದಾರರ ಓಲೈಕೆಗೆ ಮುಂದಾದ ಶಾಸಕ ಈಶ್ವರ್ ಖಂಡ್ರೆ ವಿರುದ್ಧ ಭಾಲ್ಕಿ ಪಟ್ಟದ ಗಾಂಧಿ ವೃತದಲ್ಲಿ ಈ ಕೂಡಲೇ ಶಾಸಕರನ್ನು ಬಂಧಿಸಬೇಕು ಎಂದು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ನಾಲ್ಕು ಮುಖ್ಯಮಂತ್ರಿಗಳನ್ನು ಕೊಟ್ಟ ರಾಮನಗರ ರಾಜಕೀಯ ಘಟಾನುಘಟಿಗಳ ತವರು