ಬೆಂಗಳೂರು: ಬೆಸ್ಕಾಂ (BESCOM) ಪಾಡು ಹೇಳತೀರದ್ದಾಗಿದೆ. ಅತ್ತ ಗೃಹಜ್ಯೋತಿ ಯೋಜನೆ (GruhaJyoti Scheme) ಜಾರಿಯಾದ ಮೇಲೆ ಜನರು ಕರೆಂಟ್ ಬಿಲ್ ಕಟ್ತಿಲ್ಲ. ಇತ್ತ BBMP ಸೇರಿದಂತೆ ಅನೇಕ ಸರ್ಕಾರಿ ಸಂಸ್ಥೆಗಳೂ ಸಾವಿರಾರು ಕೋಟಿ ರೂಪಾಯಿ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿವೆ. ಜನರಿಗೆಲ್ಲಾ ಬುದ್ಧಿ ಹೇಳೋ ಬಿಬಿಎಂಪಿಯೇ 800 ಕೋಟಿಗೂ ರೂ.ಗಿಂತ ಅಧಿಕ ಬಿಲ್ ಬಾಕಿ ಉಳಿಸಿಕೊಂಡಿದೆ.
ಗೃಹಜ್ಯೋತಿ ಜಾರಿಯಾದ ಮೇಲೆ ಮತ್ತಷ್ಟು ಸಮಸ್ಯೆಗಳ ಸುಳಿಗೆ ಬೆಸ್ಕಾಂ ಸಿಲುಕಿಕೊಂಡಂತಿದೆ. ಒಂದುಕಡೆ ಜನರು ಕರೆಂಟ್ ಬಿಲ್ ಕಟ್ಟೋಕೆ ಮೀನಮೀಷ ಎಣಿಸಿದ್ರೆ, ಇತ್ತ ಸರ್ಕಾರಿ ಸಂಸ್ಥೆಗಳೂ ಕರೆಂಟ್ ಬಿಲ್ ಕಟ್ಟದೇ ಕಳ್ಳಾಟ ಆಡ್ತಿದೆ. ಅದರಲ್ಲೂ ತೆರಿಗೆ, ದಂಡ, ಶುಲ್ಕ ಅಂತ ಜನರ ಪ್ರಾಣ ತೆಗೆಯೋ ಬಿಬಿಎಂಪಿಯೇ ನೂರಾರು ಕೋಟಿ ರೂಪಾಯಿ ಬೆಸ್ಕಾಂಗೆ ಕರೆಂಟ್ (Electricity Bill) ಬಾಕಿ ಉಳಿಸಿಕೊಂಡಿದೆ ಎಂದರೆ ನೀವು ನಂಬಲೇ ಬೇಕು.
Advertisement
Advertisement
ಹೌದು, ಬಿಬಿಎಂಪಿ ಸೇರಿದಂತೆ ರಾಜ್ಯದ ಹಲವು ಸರ್ಕಾರಿ ಸಂಸ್ಥೆಗಳು ಕೆಲವು ತಿಂಗಳಿನಿಂದ ಕರೆಂಟ್ ಬಿಲ್ ಕಟ್ಟಿಲ್ಲ. ಇದರಿಂದ ಬೆಸ್ಕಾಂಗೆ 6,374 ಕೋಟಿ ರೂಪಾಯಿ ಬಿಲ್ ಬರುವುದು ಬಾಕಿ ಇದೆ. ಇದನ್ನೂ ಓದಿ: ಇಂದಿನಿಂದ ಬೆಳಗಾವಿ ಅಧಿವೇಶನ – ಸರ್ಕಾರದ ವಿರುದ್ಧ ಜಂಟಿ ಸಮರಕ್ಕೆ BJP-JDS ಸಜ್ಜು
Advertisement
ಬೆಸ್ಕಾಂಗೆ ಸರ್ಕಾರಿ ಸಂಸ್ಥೆಗಳೇ ಹೊರೆ: ಬೆಸ್ಕಾಂಗೆ ಸರ್ಕಾರಿ ಸಂಸ್ಥೆಗಳೇ ಹೆಚ್ಚಿನ ಹೊರೆಯಾಗಿದೆ. ಪ್ರತಿಷ್ಠಿತ ಸಂಸ್ಥೆಗಳೇ ಸಾವಿರಾರು ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದೆ. ಬಿಬಿಎಂಪಿ, ಜಲಮಂಡಳಿ, ನಗರಾಭಿವೃದ್ಧಿ ಇಲಾಖೆ, ಸಣ್ಣ ಮತ್ತು ದೊಡ್ಡ ನೀರಾವರಿ ಇಲಾಖೆ, ಇತರೆ ಸರ್ಕಾರಿ ಸಂಸ್ಥೆಗಳಿಂದ ಒಟ್ಟು 6,000 ಕೋಟಿ ರೂ. ಗಿಂತ ಅಧಿಕ ಬಿಲ್ ಬಾಕಿ ಬರಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಯಾವ ಸಂಸ್ಥೆ – ಎಷ್ಟು ಬಾಕಿ?
ಬಿಬಿಎಂಪಿ : 820 ಕೋಟಿ ರೂ.
ಜಲಮಂಡಳಿ : 495 ಕೋಟಿ ರೂ.
ನಗರಾಭಿವೃದ್ಧಿ ಇಲಾಖೆ : 113 ಕೋಟಿ ರೂ.
ಸಣ್ಣ & ದೊಡ್ಡ ನೀರಾವರಿ ಇಲಾಖೆ : 51 ಕೋಟಿ ರೂ.
ಇತರೆ ಸರ್ಕಾರಿ ಸಂಸ್ಥೆಗಳು : 4,885 ಕೋಟಿ ರೂ.
ಒಟ್ಟು : 6,374 ಕೋಟಿ
ಬೆಸ್ಕಾಂಗೆ ಬಿಬಿಎಂಪಿ 820 ಕೋಟಿ ರೂಪಾಯಿ ಕರೆಂಟ್ ಬಿಲ್ ಬಾಕಿ ಇಟ್ಟಿದೆ. ಬಿಬಿಎಂಪಿಗೆ ಹಲವು ಬಾರಿ ನೋಟೀಸ್ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಮೇಲಿನ ಹೊರೆ ತಪ್ಪಿಸಲು ನಾವು ಅನಿವಾರ್ಯವಾಗಿ ವಸೂಲಿ ಮಾಡಲೇಬೇಕಾದ ಸ್ಥಿತಿಗೆ ಬಂದಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 3 ರಾಜ್ಯಗಳಲ್ಲಿ ಮೋದಿ ಪಡೆಗೆ ಭರ್ಜರಿ ಗೆಲುವು – ಗ್ಯಾರಂಟಿಯಿಂದಲೇ ತೆಲಂಗಾಣದಲ್ಲಿ ಗೆದ್ದ ಕಾಂಗ್ರೆಸ್