– 2 ಗಂಟೆ ತಡವಾಗಲಿದೆ ಪರಿವರ್ತನಾ ಸಮಾವೇಶ
– ಬೈಕ್ ರ‍್ಯಾಲಿ ವೇಳೆ ಬಿಜೆಪಿ ಕಾರ್ಯಕರ್ತರಿಂದ ಸಂಚಾರಿ ನಿಯಮ ಉಲ್ಲಂಘನೆ
– ರ‍್ಯಾಲಿಗೆ ಆಹ್ವಾನ ನೀಡಿಲ್ಲವೆಂದು ಸೊಗಡು ಶಿವಣ್ಣ ಅಸಮಾಧಾನ
ಬೆಂಗಳೂರು/ತುಮಕೂರು: ಬಿಜೆಪಿ ನವ ಪರಿವರ್ತನಾ ಯಾತ್ರೆಗೆ ಬಿಜೆಪಿ ಕಾರ್ಯಕರ್ತರ ದಂಡೇ ಹರಿದುಬರುತ್ತಿದೆ. ಎಲ್ಲಿ ನೋಡಿದ್ರೂ ಜನ, ಎಲ್ಲಿ ನೋಡಿದ್ರೂ ಕೇಸರಿ ಕಲರವ ತುಂಬಿದೆ. ರ‍್ಯಾಲಿ ಹಿನ್ನಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ನೆಲಮಂಗಲದಿಂದ ಬೆಂಗಳೂರು ಕಡೆಗೆ ಬರುವ ವಾಹನ ಸವಾರರು ಪರದಾಡುತ್ತಿದ್ದಾರೆ.
Advertisement
ತುಮಕೂರು ರಸ್ತೆಯಲ್ಲಿ 4 ರಿಂದ 5 ಕಿ.ಮೀ ಟ್ರಾಫಿಕ್ ಜಾಮ್ ಉಂಟಾಗಿದೆ. ಮಹಾ ಟ್ರಾಫಿಕ್‍ನಲ್ಲಿ ಸಿಲುಕಿ ಆಂಬುಲೆನ್ಸ್ ಗಳು ಕೂಡ ಪರದಾಟ ನಡೆಸುವಂತಾಗಿದೆ. ಬರೊಬ್ಬರಿ 1 ಲಕ್ಷಕ್ಕೂ ಅಧಿಕ ಕೇಸರಿ ಪಡೆ ಕಾರ್ಯಕರ್ತರು ಯಾತ್ರೆಯಲ್ಲಿ ಭಾಗಿಯಾಗಲು ಬರುತ್ತಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನದ ಸ್ಥಳವೆಲ್ಲಾ ಭರ್ತಿಯಾಗಿದೆ. ಕಾರು, ಬೈಕ್, ಬಸ್‍ಗಳಲ್ಲಿ ಇನ್ನೂ ಕಮಲ ಕಾರ್ಯಕರ್ತರು ಬರ್ತಾನೇ ಇದ್ದಾರೆ.
Advertisement
Advertisement
2 ಗಂಟೆ ತಡವಾಗಿ ಸಮಾವೇಶ ಆರಂಭ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆಗಮನ ತಡವಾದ ಹಿನ್ನಲೆಯಲ್ಲಿ ಸಮಾವೇಶ ಮುಂದೂಡಿಕೆಯಾಗಿದ್ದು, ಮಧ್ಯಾಹ್ನ 1 ಗಂಟೆಗೆ ಆರಂಭವಾಗುವ ಸಾಧ್ಯತೆ ಇದೆ. ಬೆಳಗ್ಗೆ 11 ಗಂಟೆ ಬದಲು ಮಧ್ಯಾಹ್ನ 1 ಗಂಟೆಗೆ ರ‍್ಯಾಲಿಗೆ ಚಾಲನೆ ಸಿಗಲಿದೆ. ಮಧ್ಯಾಹ್ನ 2.30ಕ್ಕೆ ಅಮಿತ್ ಶಾ ಭಾಷಣ ಮಾಡಲಿದ್ದಾರೆ.
Advertisement
ಬೆಂಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ಯಾತ್ರೆಗೆ ತುಮಕೂರಿನಿಂದ ಬೈಕ್ ರ‍್ಯಾಲಿ ಹೊರಟಿದೆ. ಸುಮಾರು 4 ಸಾವಿರ ಬೈಕ್‍ಗಳಲ್ಲಿ 8 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ರ‍್ಯಾಲಿ ಹೊರಟಿದ್ದಾರೆ. ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಧ್ಯಕ್ಷ ಜ್ಯೋತಿಗಣೇಶ್, ಮಾಜಿ ಪರಿಷತ್ ಸದಸ್ಯ ಹುಲಿನಾಯ್ಕರ್ ರ‍್ಯಾಲಿಗೆ ಚಾಲನೆ ನೀಡಿದ್ದಾರೆ.
ಸೊಗಡು ಶಿವಣ್ಣ ಅಸಮಾಧಾನ: ಈ ರ‍್ಯಾಲಿ ಚಾಲನೆಯಲ್ಲೂ ಬಿಜೆಪಿ ಭಿನ್ನಮತ ಸ್ಫೋಟಗೊಂಡಿದೆ. ಸೊಗಡು ಶಿವಣ್ಣ ಗೈರಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಬೈಕ್ ರ‍್ಯಾಲಿಗೆ ತನಗೆ ಯಾರೂ ಆಹ್ವಾನ ನೀಡಿಲ್ಲ. ಹಾಗಾಗಿ ನಾನು ನೇರವಾಗಿ ಬೆಂಗಳೂರಿಗೆ ಬಂದಿದ್ದೇನೆ ಎಂದು ಸೊಗಡು ಶಿವಣ್ಣ ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದ್ದಾರೆ.
ಕಾನೂನು ಉಲ್ಲಂಘನೆ: ಇನ್ನೂ ಬೈಕ್ ರ‍್ಯಾಲಿಯಲ್ಲಿ ಹೊರಟ ನೂರಾರು ಸವಾರರು ಹೆಲ್ಮೆಟ್ ಧರಿಸದೇ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಹೆಲ್ಮೆಟ್ ಇಲ್ಲದೆ ಬೈಕ್ ರ‍್ಯಾಲಿ ಹೊರಡುತಿದ್ದುದನ್ನು ಕಂಡು ಪೊಲೀಸರು ಮೂಕಪ್ರೇಕ್ಷರಂತೆ ನೋಡುತ್ತಿದ್ದರು.
ಇದನ್ನೂ ಓದಿ: ಬಿಜೆಪಿಯಿಂದ ಮಹದಾಯಿ ದಾಳ- ಪರಿವರ್ತನಾ ಯಾತ್ರೆಯೊಂದಿಗೆ ಮಹದಾಯಿ ವಿವಾದ ಅಂತ್ಯಗೊಳ್ಳುತ್ತಾ?
ಇದನ್ನೂ ಓದಿ: ಬಿಜೆಪಿಯಿಂದ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ- ಇಂದಿನಿಂದ 75 ದಿನ ಕೇಸರಿ ಕಹಳೆ- ಇಲ್ಲಿದೆ ರ‍್ಯಾಲಿ ವೇಳಾಪಟ್ಟಿ