ಸಹೋದರಿಗಾಗಿ ಆರ್ಡರ್ ಮಾಡಿದ್ದ ಐಸ್‍ಕ್ರೀಮ್‍ನಲ್ಲಿತ್ತು ಮನುಷ್ಯನ ಕೈಬೆರಳು – ಮುಂದೇನಾಯ್ತು?

Public TV
1 Min Read
Thought It Was Nut Im Traumatised Mumbai Man Finds Finger In Ice Cream

ಮುಂಬೈ: ತನ್ನ ಸಹೋದರಿಗಾಗಿ ವ್ಯಕ್ತಿಯೊಬ್ಬರು ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದ್ದ ಐಸ್‍ಕ್ರೀಮ್‍ನಲ್ಲಿ (Ice Cream) ಮನುಷ್ಯನ ಕೈಬೆರಳು ಪತ್ತೆಯಾಗಿರುವ ಘಟನೆ ಮುಂಬೈನಲ್ಲಿ (Mumbai) ನಡೆದಿದೆ.

ಮುಂಬೈನ ಮಲಾಡ್‍ನ ಡಾ.ಸೆರಾವೊ ಎಂಬ ವ್ಯಕ್ತಿ, ಆನ್‍ಲೈನ್‍ನಲ್ಲಿ ದಿನಸಿ ವಸ್ತುಗಳನ್ನು ಆರ್ಡರ್ ಮಾಡಿದ್ದರು. ಈ ವೇಳೆ ಅವರ ಸಹೋದರಿಗಾಗಿ ಐಸ್‍ಕ್ರೀಮ್ ಅನ್ನೂ ಆರ್ಡರ್ ಮಾಡಿದ್ದರು. ಬಳಿಕ ಆರ್ಡರ್ ಮಾಡಿದ್ದ ಐಸ್‍ಕ್ರೀಮ್ ಬರುತ್ತಿದ್ದಂತೆ ಓಪನ್ ಮಾಡಿದ್ದಾರೆ. ಈ ವೇಳೆ, ಅವರಿಗೆ ಬೆರಳು ನಟ್ಸ್ ರೀತಿ ಕಾಣಿಸಿಕೊಂಡಿದೆ. ಬಳಿಕ ಅದು ಮನುಷ್ಯನ ಕೈ ಬೆರಳು ಎಂಬುದು ಅವರ ಅರಿವಿಗೆ ಬಂದಿದೆ. ಇದನ್ನೂ ಓದಿ: ನಾಗ್ಪುರದ ಸ್ಫೋಟಕ ತಯಾರಿಕಾ ಕಾರ್ಖಾನೆಯಲ್ಲಿ ಬ್ಲಾಸ್ಟ್ – ಐವರ ದುರ್ಮರಣ!

ಆನ್‍ಲೈನ್‍ನಲ್ಲಿ ಹಂಚಿಕೊಳ್ಳಲಾದ ಫೋಟೋದಲ್ಲಿ ಐಸ್‍ಕ್ರೀಮ್‍ನಲ್ಲಿ ಕೈಬೆರಳಿರುವುದು ಕಾಣಿಸುತ್ತದೆ. ಈ ಬಗ್ಗೆ ಸೆರಾವೊ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಐಸ್ ಕ್ರೀಮ್‍ನ್ನು ಮತ್ತು ಬೆರಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಈ ರೀತಿ ಕೈ ಬೆರಳು ಪತ್ತೆಯಾಗಿರುವುದು ದೊಡ್ಡ ಅಪರಾಧದ ಶಂಕೆಯನ್ನು ಹುಟ್ಟುಹಾಕಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ದೋಡಾ ಟೆರರಿಸ್ಟ್ ಅಟ್ಯಾಕ್ – 4 ಉಗ್ರರ ರೇಖಾಚಿತ್ರ ಬಿಡುಗಡೆ

Share This Article