‘ತೋತಾಪುರಿ’ ಚಿತ್ರದ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು ರಿಲೀಸ್ ಆಗಿದ್ದೇ ಆಗಿದ್ದು, ಎಲ್ಲೇ ಹೋದ್ರು ಈ ಹಾಡಿನದ್ದೇ ಕಾರುಬಾರು. ಮಿಲಯನ್ ಗಟ್ಟಲೇ ಮನಸ್ಸುಗಳ ಕದ ತಟ್ಟಿರುವ ಈ ಹಾಡಿನ ಸೆಲೆಬ್ರೇಶನ್‌ಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ಯಾರ್ ಕೇಳಿದ್ರು ‘ಬಾಗ್ಲು ತೆಗೆ ಮೇರಿ ಜಾನ್’ ಹಾಡಿನ ಜಪವನ್ನೇ ಮಾಡುತ್ತಿದ್ದಾರೆ.
Advertisement
ಟೀಂ ತೋತಾಪುರಿಗಂತೂ ಈ ಗೆಲುವು ಎಲ್ಲಿಲ್ಲದ ಖುಷಿ ತಂದು ಕೊಟ್ಟಿದೆ. ಅದೇ ಖುಷಿಯಲ್ಲಿ ಈ ಹಾಡಿನ ಸಂಭ್ರಮದ ತೇರನ್ನು ಎಳೆಯಲು ಆರಂಭಿಸಿತ್ತು. ಮೊದಲಿಗೆ ಅನಿವಾಸಿ ಕನ್ನಡಿಗರೊಂದಿಗೆ ನಡೆದ ವರ್ಚ್ಯುಯಲ್ ಕಾರ್ಯಕ್ರಮ ಸೂಪರ್ ಸಕ್ಸಸ್ ಆದ ಬೆನ್ನಲ್ಲೇ ಇದೀಗ ಗಲ್ಫ್ ಕನ್ನಡಿಗರೊಂದಿಗೆ ಸ್ಪೆಶಲ್ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜು ಮಾಡಿದೆ. ಇದನ್ನೂ ಓದಿ: ಕುಂತ್ರು ನಿಂತ್ರು, ಎಲ್ಲೇ ಹೋದ್ರು ‘ತೋತಾಪುರಿ’ ಸಿನಿಮಾ ಹಾಡಿನದ್ದೇ ಗಾನಬಜಾನ
Advertisement
Advertisement
ಹೌದು ಅಂತಹದ್ದೊಂದು ದೊಡ್ಡ ಕ್ರೇಜ್ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು ಸೃಷ್ಟಿಸಿದೆ. ಕೇವಲ ಕರುನಾಡು ಮಾತ್ರವಲ್ಲದೇ ದೇಶ ವಿದೇಶದಲ್ಲಿರುವ ಕನ್ನಡಿಗರ ಹೃದಯಕ್ಕೆ ಈ ಹಾಡು ಲಗ್ಗೆ ಇಟ್ಟಿತ್ತು. ಅಷ್ಟಕ್ಕೆ ನಿಲ್ಲದೇ ಇದೀಗ ದುಬೈ ಕನ್ನಡಿಗರ ಹೃದಯವನ್ನೂ ಕದ್ದಿದೆ. ಅಲ್ಲಿನ ಕನ್ನಡಿಗರು ಹಾಡನ್ನು ರಿಪೀಟ್ ಮೂಡ್‌ನಲ್ಲಿ ಕೇಳುತ್ತಿದ್ದಾರೆ. ಇಂತಹದೊಂದು ಕ್ರೇಜ್ ಹುಟ್ಟುಹಾಕಿರುವ ಹಾಡಿನ ಸಂಭ್ರಮವನ್ನು ಅಲ್ಲಿನವರೊಂದಿಗೆ ಸೆಲೆಬ್ರೇಟ್ ಮಾಡಬೇಕೆಂಬುದು ಚಿತ್ರತಂಡದ ಮಹದಾಸೆ. ಅದಕ್ಕೆಂದೇ ಫೆಬ್ರವರಿ 25ರಂದು ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಮೋನಿಫಿಕ್ಸ್ ಆಡಿಯೋಸ್ ಯೂಟ್ಯೂಬ್ ಚಾನೆಲ್‌ನಲ್ಲಿ ವರ್ಚ್ಯುಯಲ್ ಕಾರ್ಯಕ್ರಮ ಹಮ್ಮಿಕೊಂಡಿದೆ ಚಿತ್ರತಂಡ. ಈ ಕಾರ್ಯಕ್ರಮದಲ್ಲಿ ಕುವೈತ್, ಒಮನ್, ಬಹ್ರೇನ್, ಕತಾರ್‌ನಲ್ಲಿರುವ ಕನ್ನಡಿಗರು ಭಾಗಿಯಾಗಿ ನವರಸ ನಾಯಕ ಜಗ್ಗೇಶ್ ಜೊತೆ ಮಾತುಕತೆ ನಡೆಸಲಿದ್ದಾರೆ. ಇದನ್ನೂ ಓದಿ: ಟ್ರೆಂಡಿಂಗ್‌ನಲ್ಲಿ ‘ತೋತಾಪುರಿ’ ಸಾಂಗ್ – ಸಿನಿರಸಿಕರಿಂದ 2 ಮಿಲಿಯನ್ ಮೆಚ್ಚುಗೆಯ ಮುದ್ರೆ
Advertisement
ಸುರೇಶ್ ಆರ್ಟ್ಸ್, ಮೋನಿಫ್ಲಿಕ್ಸ್ ಸ್ಟುಡಿಯೋಸ್ ಬ್ಯಾನರ್‌ನಡಿ ನಿರ್ಮಾಣವಾದ ಈ ಚಿತ್ರಕ್ಕೆ ನೀರ್ ದೋಸೆ ಖ್ಯಾತಿಯ ವಿಜಯಪ್ರಸಾದ್ ನಿರ್ದೇಶನವಿದೆ. ಕೆ.ಎ ಸುರೇಶ್ ಬಂಡವಾಳ ಹೂಡಿದ್ದಾರೆ. ನವರಸ ನಾಯಕನಿಗೆ ಅದಿತಿ ಪ್ರಭುದೇವ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದು, ಡಾಲಿ ಧನಂಜಯ್, ದತ್ತಣ್ಣ, ಸುಮನ ರಂಗನಾಥ್, ವೀಣಾ ಸುಂದರ್, ಹೇಮಾದತ್ ತಾರಾಬಳಗದಲ್ಲಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.