ಮತ್ತೊಂದು ಸೆನ್ಸೇಷನ್ ಹಿಟ್ ಕೊಡೋದಕ್ಕೆ ಸಕಲ ಸಜ್ಜಾಗಿದ್ದಾರೆ ನವರಸ ನಾಯಕ ಜಗ್ಗೇಶ್ ಹಾಗೂ ವಿಜಯ ಪ್ರಸಾದ್ ಜೋಡಿ. ಈ ಕಾಂಬಿನೇಶನ್ ನೀರ್ ದೋಸೆಯಲ್ಲಿ ಮಾಡಿದ್ದ ಮ್ಯಾಜಿಕ್ ಎಲ್ಲರಿಗೂ ಗೊತ್ತೇ ಇದೆ. ಅದಕ್ಕಿಂತ ಡಬಲ್ ಧಮಾಕ ಮನರಂಜನೆ ಉಣಬಡಿಸಲು ‘ತೋತಾಪುರಿ’ ಮೂಲಕ ಪ್ರೇಕ್ಷಕರೆದುರು ಬರ್ತಿರೋದು ಗೊತ್ತಿರುವ ವಿಷ್ಯ. ಆದರೆ ಇದೀಗ ಸಿನಿಮಾ ಕೆಲಸ ಮುಗಿಸಿ ಪ್ರಚಾರ ಕಾರ್ಯ ಶುರು ಹಚ್ಚಿಕೊಂಡಿರುವ ನಿರ್ದೇಶಕ ವಿಜಯ ಪ್ರಸಾದ್ ಸಿನಿಮಾ ತಂಡ ಚಿತ್ರದ ಬಹು ನಿರೀಕ್ಷಿತ ವೀಡಿಯೋ ಸಾಂಗ್ ಬಿಡುಗಡೆ ಮಾಡಿ ಸಿನಿರಸಿಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಮೊನ್ನೆ ಮೊನ್ನೆಯಷ್ಟೇ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡಿನ ಟೀಸರ್ ಝಲಕ್ ತೋರಿಸಿ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದ್ದ ಚಿತ್ರತಂಡ ಈಗ ಪೂರ್ತಿ ವೀಡಿಯೋ ಹಾಡನ್ನೇ ಬಿಡುಗಡೆ ಮಾಡಿದೆ. ‘ಬಾಗ್ಲು ತೆಗಿ ಮೇರಿ ಜಾನ್’ ಎನ್ನುವ ಅದಿತಿ ಪ್ರಭುದೇವ ‘ಸ್ವಲ್ಪ ತಡಿ ಮೇರಿ ಜಾನ್’ ಎನ್ನುವ ಜಗ್ಗೇಶ್ ಕಾಂಬಿನೇಶನ್ ನೋಡುಗರಿಗೆ ಸಖತ್ ಥ್ರಿಲ್ ನೀಡುತ್ತಿದೆ. ವಿಜಯ ಪ್ರಸಾದ್ ಸಾಹಿತ್ಯ ಕೃಷಿ, ಅನೂಪ್ ಸೀಳಿನ್ ಸಂಗೀತ, ಮುರಳಿ ಮಾಸ್ಟರ್ ಕೊರಿಯೋಗ್ರಫಿ ಹಾಡಿನ ಹೈಲೈಟ್ ಆದ್ರೆ, ಜಗ್ಗೇಶ್ ಎಕ್ಸ್ ಪ್ರೆಶನ್, ಅದಿತಿ ಪ್ರಭುದೇವ ಕ್ಯೂಟ್‌ನೆಸ್ ಬಾಗ್ಲು ತೆಗಿ ಮೇರಿ ಜಾನ್ ಎನರ್ಜಿಯನ್ನು ಇನ್ನಷ್ಟು ಹೆಚ್ಚಿಸಿದೆ. ಕೆಜಿಎಫ್ ಖ್ಯಾತಿಯ ಸಿಂಗರ್ ಅನನ್ಯ ಭಟ್, ವ್ಯಾಸರಾಜ್ ಸೋಸಲೆ, ಸುಪ್ರಿಯ ರಾಮ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಒಟ್ಟಿನಲ್ಲಿ ಕೇಳೋಕು, ನೋಡೋಕು ಚೆಂದ ಎನಿಸಿಕೊಂಡಿರುವ ಹಾಡು ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಂಡು ಟ್ರೆಂಡಿಂಗ್‌ನಲ್ಲಿದೆ. ಅಷ್ಟೇ ಅಲ್ಲ, ಬಿಡುಗಡೆಯಾದ ನಲವತ್ತೆಂಟು ಗಂಟೆಗಳಲ್ಲಿ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡು ಮತ್ತಷ್ಟು ಮೆಚ್ಚುಗೆಯತ್ತ ಸಾಗುತ್ತಿದೆ.
Advertisement
Advertisement
Advertisement
ಜಗ್ಗೇಶ್ ಸಿನಿಮಾ ಅಂದ್ರೆ ಅಲ್ಲಿ ಎಂಟಟೈನ್ಮೆಂಟ್ ಅನ್ನೋದಕ್ಕೆ ಕೊರತೆ ಇರೋದಿಲ್ಲ. ನವರಸ ನಾಯಕನ ಹಾವಭಾವ ನೋಡೋದೆ ಒಂದು ಮನರಂಜನೆ. ಈ ಸಿನಿಮಾದಲ್ಲಿ ನೆಕ್ಸ್ಟ್ ಲೆವೆಲ್ ಮನರಂಜನೆಯ ರಸದೌತಣ ನೀಡಲು ಜಗ್ಗೇಶ್ ರೆಡಿಯಾಗಿದ್ದಾರೆ. ಇವರ ಜೊತೆ ನಿರ್ದೇಶಕ ವಿಜಯಪ್ರಸಾದ್ ಜೊತೆಯಾದ ಮೇಲಂತೂ ಕೇಳೋದೇ ಬೇಡ ಅಷ್ಟು ಕಾಮಿಡಿ ಫ್ಯಾಕ್ಟರ್ ಸಿನಿಮಾದಲ್ಲಿ ಇರುತ್ತೆ. ಅಂತಹದ್ದೇ ಕಾಮಿಡಿ ಎಳೆಯನ್ನಿಟ್ಟುಕೊಂಡು ಸ್ಟ್ರಾಂಗ್ ಮೆಸೇಜ್ ನೀಡೋದಕ್ಕೆ ಈ ಹಿಟ್ ಜೋಡಿ ‘ತೋತಾಪುರಿ’ಯೊಂದಿಗೆ ಸದ್ಯದಲ್ಲೇ ಚಿತ್ರಮಂದಿರದ ಅಂಗಳಕ್ಕೆ ಕಾಲಿಡಲಿದೆ.
ಮೋನಿಫ್ಲಿಕ್ಸ್ ಸುಡಿಯೋಸ್, ಸುರೇಶ್ ಆರ್ಟ್ಸ್ ಬ್ಯಾನರ್ ನಡಿ ಕೆ.ಎ ಸುರೇಶ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡಿಗಡೆ ಮಾಡಲು ರೆಡಿಯಾಗಿದ್ದಾರೆ. ಎರಡು ಸೀಕ್ವೆಲ್ ನಲ್ಲಿ ಬಿಡುಗಡೆಯಾಗುತ್ತಿರುವ ತೋತಾಪುರಿ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ನಿರಂಜನ್ ಬಾಬು ಕ್ಯಾಮೆರಾ ಕೈಚಳಕವಿದೆ. ದತ್ತಣ್ಣ, ಸುಮನ್ ರಂಗನಾಥ್, ಡಾಲಿ ಧನಂಜಯ, ವೀಣಾ ಸುಂದರ್, ಹೇಮಾ ದತ್ ಒಳಗೊಂಡ ಕಲಾವಿದರ ಬಳಗ ಚಿತ್ರದಲ್ಲಿದೆ.