ಪಾಟ್ನಾ: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಮೋದನೆಗೊಂಡಿದ್ದ ಮಹಿಳಾ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದು, ಕೇಂದ್ರ ಸರ್ಕಾರ ಶುಕ್ರವಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ. ಇದಾದ ಒಂದು ದಿನದ ಬಳಿಕ ರಾಷ್ಟ್ರೀಯ ಜನತಾ ದಳದ (RJD) ಹಿರಿಯ ನಾಯಕ ಅಬ್ದುಲ್ ಬಾರಿ ಸಿದ್ದಿಕಿ (Abdul Bari Siddiqui) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Advertisement
ಬಿಹಾರದ ಮುಜಾಫರ್ ನಗರದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಮಹಿಳಾ ಮೀಸಲಾತಿ ಮಸೂದೆ (Women’s Reservation Bill) ಹೆಸರಿನಲ್ಲಿ ಲಿಪ್‌ಸ್ಟಿಕ್ ಮತ್ತು ಬಾಬ್ ಕಟ್ ಹೇರ್ ಸ್ಟೈಲ್ ಮಾಡಿಕೊಂಡ ಮಹಿಳೆಯರು ಮುಂದೆ ಬರುತ್ತಾರೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶದ ಚುನಾವಣೆ ಗಾಂಧಿ ಮತ್ತು ಗೋಡ್ಸೆ ಸಿದ್ಧಾಂತಗಳ ನಡುವಿನ ಹೋರಾಟ: ರಾಹುಲ್ ಗಾಂಧಿ
Advertisement
ಲಿಪ್‌ಸ್ಟಿಕ್ ಹಾಗೂ ಬಾಬ್ ಕಟ್ ಹೇರ್‌ಸ್ಟೈಲ್ (Bob-Cut Hairstyles) ಮಾಡಿಕೊಂಡ ಮಹಿಳೆಯರು ಈ ಮೀಸಲಾತಿ ಹೆಸರಿನಲ್ಲಿ ಮುಂದೆ ಬರುತ್ತಾರೆ. ಆದ್ದರಿಂದ ಹಿಂದುಳಿದ ಸಮುದಾಯಗಳ ಮಹಿಳೆಯರಿಗೆ ಮಾತ್ರ ಸರ್ಕಾರ ಈ ಮೀಸಲಾತಿಯನ್ನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
Advertisement
Advertisement
ಸಿದ್ದಿಕಿ ಹೇಳಿಕೆಗೆ ಬೆಂಬಲಿಗರಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಮುಗಿಯುವವರೆಗೂ ದೂರದರ್ಶನ ಮತ್ತು ಸೋಶಿಯಲ್ ಮೀಡಿಯಾಗಳಿಂದ ದೂರವಿರುವಂತೆ ಅವರು ಸಲಹೆ ನೀಡಿದ್ದಾರೆ. ಆದ್ರೆ ತಮ್ಮ ವಾದವನ್ನು ಸಮರ್ಥಿಸಿಕೊಂಡಿರುವ ಸಿದ್ದಿಕಿ, ಹೊಸ ಕಾನೂನಿನ ಪ್ರಯೋಜನವನ್ನು ನಮ್ಮ ಜನರಿಗೆ ಅರ್ಥಮಾಡಿಸಲು ಗ್ರಾಮೀಣ ಭಾಷೆ ಬಳಸಿದ್ದೇನೆ, ಬೇರೆ ದುರುದ್ದೇಶವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಂತ್ರಸ್ತ ಬಾಲಕಿ ದತ್ತು ಪಡೆಯಲು ಮುಂದಾದ ಅತ್ಯಾಚಾರ ಪ್ರಕರಣ ಭೇದಿಸಿದ ಪೊಲೀಸ್ ಅಧಿಕಾರಿ
ಇನ್ನೂ ಸಿದ್ದಿಕಿ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಆರ್‌ಜೆಡಿ ನಾಯಕನ ಹೇಳಿಕೆ ಸಣ್ಣ ಮನಸ್ಥಿತಿಯನ್ನು ತೋರಿಸುತ್ತದೆ. ಕಾರಿಗೆ ಎರಡು ಚಕ್ರಗಳಿದ್ದಂತೆ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಮಹಿಳೆಯರು ಮತ್ತು ಪುರುಷರು ಒಟ್ಟಾಗಿ ಸಾರ್ವಜನಿಕ ಹಿತಾಸಕ್ತಿಯ ಕಾನೂನುಗಳನ್ನು ರಚಿಸುವ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. ಆದ್ರೆ ಆರ್‌ಜೆಡಿ ನಾಯಕನ ಹೇಳಿಕೆ ಸಣ್ಣತನವನ್ನು ತೋರಿಸಿದೆ ಎಂದು ಕಿಡಿ ಕಾರಿದ್ದಾರೆ.
ನಾವಿಂದು 21ನೇ ಶತಮಾನದಲ್ಲಿದ್ದೇವೆ. ಮಹಿಳೆಯರಿಗೆ ನೋವುಂಟು ಮಾಡುವ ಹೇಳಿಕೆಗಳನ್ನ ತಪ್ಪಿಸಬೇಕು. ಹಿಂದುಳಿದ ವರ್ಗದ ಮಹಿಳೆಯರೂ ಮುಂದೆ ಬರಬೇಕು. ಅದಕ್ಕಾಗಿ ಮೀಸಲಾತಿ ಮಸೂದೆ ಬಂದಿದೆ ಎಂದು ಹೇಳಿದ್ದಾರೆ.
Web Stories