ಕೊಪ್ಪಳ: ನಾನು ಶ್ರೀರಾಮುಲು (Sriramulu) ಬಾಲ್ಯದಿಂದಲೂ ಸ್ನೇಹಿತರು, ನಮ್ಮಿಬ್ಬರ ನಡುವೆ ಯಾವುದೇ ಮುನಿಸು ಬಂದರೂ ಅದು ಕ್ಷಣಿಕ ಮಾತ್ರ. ನಮ್ಮಿಬ್ಬರ ಮುನಿಸು ಲಾಭ ಪಡೆದುಕೊಳ್ಳಲು ಬಯಸುವವರು ಮೂರ್ಖರು, ನಾವು ಯಾವಾಗಲೂ ಒಂದೇ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ (Gali Janardhan Reddy) ಹೇಳಿದರು.
ಕೊಪ್ಪಳದ ಗಂಗಾವತಿ ತಾಲೂಕಿನ ಮರಳಿ ಗ್ರಾಮದ ಖಾಸಗಿ ಹೊಟೇಲ್‌ನಲ್ಲಿ ಬಿಜೆಪಿ ಪಕ್ಷದ ವತಿಯಿಂದ ಇಂದು ಹಮ್ಮಿಕೊಂಡ ಸಂಘಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇದನ್ನೂ ಓದಿ: ಮುನಿಸು ಮರೆತು ಒಂದಾದ ರೆಡ್ಡಿ-ರಾಮುಲು; ಇಬ್ಬರ ಕೈ ಹಿಡಿದೆತ್ತಿದ ವಿಜಯೇಂದ್ರ
ನಾವಿಬ್ಬರು ನಿಜವಾದ ಸ್ನೇಹಿತರು, ನಮ್ಮಿಬ್ಬರ ನಡುವೆ ಜಗಳವಾದರೆ ಕೃಷ್ಣ ಅರ್ಜುನ ನಡುವೆ ಜಗಳವಾದಂತೆ. ಕೆಟ್ಟ ಘಳಿಗೆಗಳು ಪ್ರತಿಯೊಬ್ಬರಿಗೂ ಬರುತ್ತವೆ. ಆದರೆ ಇದರ ಲಾಭ ಪಡೆದು ಕೊಳ್ಳಬೇಕು ಎಂದು ಯೋಚಿಸುವವರು ಮೂರ್ಖರಾಗಿದ್ದಾರೆ. ನಾವುಗಳು ಯಾವತ್ತು ಬೇರಾಗುವುದಿಲ್ಲ. ನಾವಿಬ್ಬರು ಒಂದೇ, ಮುಂದಿನ ದಿನಮಾನಗಳಲ್ಲಿ ಕೂಡ ರಾಜ್ಯಾದ್ಯಂತ ಸಂಚರಿಸಿ, ಪಕ್ಷ ಕಟ್ಟಲಾಗುವುದು. ಕಾಂಗ್ರೆಸ್ ಸರ್ಕಾರ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಕೆಟ್ಟ ಸರ್ಕಾರ ಎನ್ನುವಂತೆ ಆಡಳಿತ ನಡೆಸುತ್ತಿದೆ. ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಸರ್ಕಾರ ಜನರನ್ನು ಮರಳು ಮಾಡುತ್ತಿದೆ. ಸಿಎಂ ಅಭಿವೃದ್ಧಿಯನ್ನು ಮರೆತು ಅಧಿಕಾರಕ್ಕಾಗಿ ಜಗಳ ಮಾಡುತ್ತಿದ್ದಾರೆ. ಇದನ್ನು ಜನರು ಅರಿತುಕೊಳ್ಳಬೇಕು ಎಂದರು. ಇದನ್ನೂ ಓದಿ: ಸಿಎಂ ಮೊದಲು ಆಡಳಿತ ಪಕ್ಷದ ಶಾಸಕರ ಪ್ರಶ್ನೆಗೆ ಉತ್ತರ ನೀಡಲಿ: ವಿಜಯೇಂದ್ರ ಸವಾಲು