ಬೆಂಗಳೂರು: ರಾಮ ಮಂದಿರದಲ್ಲಿ (Ram Mandir) ಲೂಟಿ ಹೊಡೆದವರು ನಾಗೇಂದ್ರ (B Nagendra) ಬಗ್ಗೆ ಮಾತನಾಡುತ್ತಾರೆ ಎಂದು ಸಚಿವ ಸಂತೋಷ್ ಲಾಡ್ (Santosh Lad) ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ನಾಗೇಂದ್ರಗೆ ಸಚಿವ ಸ್ಥಾನ ಕೊಟ್ಟಿರೋದಕ್ಕೆ ಬಿಜೆಪಿ (BJP) ವಿರೋಧ ಮಾಡುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು,ನಾಗೇಂದ್ರ ವಿಚಾರದಲ್ಲಿ ಕ್ಲಾರಿಟಿ ಇದೆ. ಸದನದಲ್ಲಿ ಇಲಾಖೆ ವಿಚಾರ ಬಂದರೆ ಅದಕ್ಕೆ ಉತ್ತರ ಕೊಡುತ್ತೇವೆ ಎಂದರು. ಇದನ್ನೂ ಓದಿ: ತಗ್ಗಿದ ಮುಂಗಾರು – ಮುಂದಿನ ವಾರ ರಾಜ್ಯದ ಅಲ್ಲಲ್ಲಿ ಸಾಧಾರಣ ಮಳೆ
ರಾಮ ಮಂದಿರದಲ್ಲಿ ಲೂಟಿ ಹೊಡೆದವರು ಇದರ ಬಗ್ಗೆ ಮಾತನಾಡುತ್ತಾರೆ. ಕೋವಿಡ್ ಸಮಯದಲ್ಲಿ ಪಿಎಂ ಫಂಡ್ ಅಂತ 20 ಸಾವಿರ ಕೋಟಿ ಕಲೆಕ್ಟ್ ಮಾಡಿದ್ದರು. ಅದರ ಬಗ್ಗೆ ಉತ್ತರ ಕೊಡಲ್ಲ. ಅದರ ಬಗ್ಗೆ ಚರ್ಚೆಯೇ ಮಾಡಬೇಡಿ ಎನ್ನುತ್ತಾರೆ. ನಾಗೇಂದ್ರ ವಿಚಾರ ಸದನದಲ್ಲಿ ಚರ್ಚೆ ಮಾಡಲಿ, ಅದಕ್ಕೆ ನಾವು ಉತ್ತರ ಕೊಡುತ್ತೇವೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಡದಿ ಟೌನ್ ಶಿಪ್ ಯೋಜನೆಗೆ ವಿರೋಧ, ಸದನದಲ್ಲಿ ಉತ್ತರ: ಸಂತೋಷ್ ಲಾಡ್

