ಬೆಂಗಳೂರು: ಉಪ್ಪು ತಿಂದವರು ನೀರು ಕುಡಿಯಲೇಬೇಕು. ದರ್ಶನ್ (Actor Darshan) ಕೇಸ್‌ನಲ್ಲಿ ಗೃಹ ಇಲಾಖೆ ಕ್ರಮ ತೆಗೆದುಕೊಳ್ಳುತ್ತದೆ ಕಾನೂನು ಎಲ್ಲರಿಗೂ ಒಂದೇ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪ್ರತಿಕ್ರಿಯಿಸಿದ್ದಾರೆ.
ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದರ್ಶನ್ ಪ್ರಕರಣದ ಬಗ್ಗೆ ನಾನು ಮಾಧ್ಯಮದಲ್ಲಿ ಅಷ್ಟೇ ನೋಡಿರೋದು. ಸೌಲಭ್ಯ ಕೊಡಬೇಕು ಎಂದು ಸರ್ಕಾರಕ್ಕೆ ಉದ್ದೇಶ ಇರಲ್ಲ. ಅವರವರೇ ಏನೇನೋ ಹೊಂದಾಣಿಕೆ ಮಾಡಿಕೊಂಡಿರುತ್ತಾರೆ. ಅಂತವರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರ್ತಿದೆ ಎಂದರು.ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ: ಶೀಘ್ರವೇ ದರ್ಶನ್ ಬೇರೆ ಜೈಲಿಗೆ ಶಿಫ್ಟ್?
ಐಷಾರಾಮಿ ರಾಜಾತಿಥ್ಯ ಅನುಭವಿಸಿದವರು ಹಾಗೂ ನೀಡಿದವರು ತಕ್ಕ ಶಿಕ್ಷೆಗೆ ಗುರಿಯಾಗುತ್ತಾರೆ. ಕಾನೂನು ಎಲ್ಲರಿಗೂ ಒಂದೇ ಅದ್ದರಿಂದ ಚುರುಕಾಗಿ ತನಿಖೆ ನಡೆದಿದೆ. ಬಿಜೆಪಿ (BJP) ಶಾಸಕರು ಯಾವ ಮಟ್ಟಕ್ಕೆ ಒತ್ತಡ ನೀಡಿದ್ರು ಎನ್ನುವ ಕುರಿತು ಎಲ್ಲರಿಗೂ ತಿಳಿದೇ ಇದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದಿದ್ದಾರೆ.
ಯಾರಿಗೂ ಸೌಲಭ್ಯ ಕೊಡಬೇಕು ಅಂತ ರೂಲ್ಸ್ ಇಲ್ಲ. ಈ ವಿಚಾರ ಸರ್ಕಾರಕ್ಕೆ ಮುಜುಗರ ತರ್ತಿದೆ. ಸುಮ್ಮನೆ ಊಹಾಪೋಹ ಬೇಡ. ಪರಮೇಶ್ವರ್ ಅವರು ಇರಲಿ, ಯಾರೇ ಇರಲಿ ಸಂವಿಧಾನ ಉಲ್ಲಂಘನೆ ಮಾಡುವುದಿಲ್ಲ. ಇಷ್ಟು ಹಂತಕ್ಕೆ ಬಂದಿದೆ ಅಂದ್ರೆ ಸರ್ಕಾರ ಈ ಬಗ್ಗೆ ದೃಢ ನಿರ್ಧಾರ ಮಾಡುತ್ತದೆ. ಇದರ ಬಗ್ಗೆ ಇಂಟರನಲ್ ತನಿಖೆಗೆ ಆದೇಶ ಕೊಟ್ಟಿದೆ. ಯಾರೇ ಇದ್ದರೂ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ವಾರ್ನಿಂಗ್ ನೀಡಿದ್ದಾರೆ.ಇದನ್ನೂ ಓದಿ: ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ – 7 ಮಂದಿ ಅಮಾನತು