ಮುಂಬೈ: ಅಧಿಕಾರದಲ್ಲಿರುವವರು ಸಮಾಜದಲ್ಲಿ ಕಹಿಯನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ದೇಶವನ್ನು ಮುನ್ನಡೆಸುವುದು ಮತ್ತು ಸಾಮರಸ್ಯವನ್ನು ಕಾಪಾಡುವುದು ದೊಡ್ಡ ಸವಾಲಾಗಿದೆ ಎಂದು ಬಿಜೆಪಿ ವಿರುದ್ಧ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದ್ದಾರೆ.
ರಾಜಕೀಯವು ಈ ಹಿಂದೆ ಜನರ ನಡುವೆ ಸಂಪರ್ಕ ಕಲ್ಪಿಸುತ್ತಿತ್ತು. ಆದರೆ ಈಗ ದೇಶದಲ್ಲಿನ ಜನರನ್ನು ಧರ್ಮದ ಆಧಾರದ ಮೇಲೆ ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ. ದೇಶದ ನಾಯಕತ್ವವು ಮಹಾತ್ಮ ಗಾಂಧಿಯವರಂತಹ ರಾಷ್ಟ್ರೀಯ ಐಕಾನ್‍ಗಳನ್ನು ದೂಷಿಸಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹಿಜಬ್ ನಿಷೇಧಿಸಿ ಕರ್ನಾಟಕ ಹೈಕೋರ್ಟ್ ಇಸ್ಲಾಂ ಬಗ್ಗೆ ಭೀತಿ ಹುಟ್ಟುವಂತೆ ಮಾಡಿದೆ: ಇಮ್ರಾನ್ ಖಾನ್
ಇಲ್ಲಿಂದ ಸುಮಾರು 230 ಕಿಮೀ ದೂರದಲ್ಲಿರುವ ಸಾಂಗ್ಲಿಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾ ಪರಿಷತ್ ಅಧ್ಯಕ್ಷರಾಗಿ ಶಿವಾಜಿರಾವ್ ಯಶಸ್ವಿಯಾಗಿದ್ದರು. ಅವರನ್ನು ಮರಳಿ ಎನ್‍ಸಿಪಿಗೆ ಸ್ವಾಗತಿಸುತ್ತೇನೆ. ಅವರ ಪರಿಣತಿಯನ್ನು ಮಹಾರಾಷ್ಟ್ರದ ಅಭ್ಯುದಯಕ್ಕೆ ಬಳಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡೋಣ ಎಂದಿದ್ದಾರೆ.
ಮಹಾರಾಷ್ಟ್ರವು ಅಭಿವೃದ್ಧಿಗಾಗಿ ಅಥವಾ ಜನರನ್ನು ಒಟ್ಟುಗೂಡಿಸಲು ಕೆಲಸ ಮಾಡುವ ನಾಯಕತ್ವವನ್ನು ಹೊಂದಿತ್ತು. ಆದರೆ ಇಂದು ದೇಶದಲ್ಲಿ ಧರ್ಮದ ಆಧಾರದ ಮೇಲೆ ಜನರನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ಮಹಾತ್ಮ ಗಾಂಧಿ, ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಮತ್ತು ದೇಶವನ್ನು ಕಟ್ಟಲು ಶ್ರಮಿಸಿದರು. ಆದರೆ ಪ್ರಸ್ತುತ ದೇಶದ ನಾಯಕತ್ವವು ಈ ಜನರನ್ನು ದೂಷಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಇಸ್ಲಾಂ ಸ್ಲೀಪರ್ ಸೆಲ್ ಕೆಲಸ ಮಾಡ್ತಿದೆ: ಚಕ್ರವರ್ತಿ ಸೂಲಿಬೆಲೆ
ಇತ್ತೀಚೆಗಷ್ಟೇ ಬಿಜೆಪಿ ಆಡಳಿತವಿರುವ ಕರ್ನಾಟಕದಲ್ಲಿ ಕೆಲ ಸಂಘಟನೆಗಳು ಫತ್ವಾ ಹೊರಡಿಸಿದ್ದು, ಅಲ್ಪಸಂಖ್ಯಾತ ಸಮುದಾಯದವರು ನಡೆಸುತ್ತಿರುವ ಅಂಗಡಿಗಳಲ್ಲಿ ಏನನ್ನೂ ಖರೀದಿಸದಂತೆ ಜನರಿಗೆ ಸೂಚಿಸಲಾಗಿತ್ತು. ಈ ರೀತಿಯ ಕಹಿಯ ಅಂಶಗಳನ್ನು ಹರಡಲಾಗುತ್ತಿದೆ. ಈ ರೀತಿ ಪಕ್ಷ ರಾಜ್ಯಗಳಲ್ಲಿ ಅಧಿಕಾರದ್ದರೆ, ಈ ದೇಶವು ಹೇಗೆ ಮುಂದುವರಿಯುತ್ತದೆ ಮತ್ತು ನಾವು ಹೇಗೆ ಸಾಮರಸ್ಯವನ್ನು ಕಾಪಾಡಿಕೊಳ್ಳುತ್ತೇವೆ ಎಂಬುದು ಒಂದು ಪ್ರಶ್ನೆಯಾಗಿದೆ ಅಸಮಾಧಾನ ಹೊರಹಾಕಿದ್ದಾರೆ.