ಕೆಜಿಎಫ್ 2 ರಿಲೀಸ್ ನಂತರ ಥಿಯೇಟರ್‌ಗೆ ರಾಶಿ ರಾಶಿ ಚಿತ್ರಗಳು ಬರುತ್ತಿವೆ. ಪ್ರತಿ ವಾರ ಮೂರ್ನಾಲ್ಕು ಚಿತ್ರಗಳು ಬಿಡುಗಡೆ ಆಗುತ್ತಿದ್ದು, ಅದನ್ನು ಹೇಗೋ ನಿಭಾಯಿಸಿಕೊಂಡು ಹೋಗುತ್ತಿದ್ದರು ವಿತರಕರು. ಈ ವಾರ ಬರೋಬ್ಬರಿ 11 ಚಿತ್ರಗಳು ರಿಲೀಸ್ ಆಗಿವೆ. ಹನ್ನೊಂದು ಚಿತ್ರಗಳು ಕನ್ನಡದ್ದೇ ಆಗಿರುವುದು ಮತ್ತೊಂದು ಅಚ್ಚರಿಯ ವಿಷಯ. ಇದನ್ನೂ ಓದಿ : ಓಟಿಟಿಯಲ್ಲೂ ದಾಖಲೆ ಬರೆದ ‘ದಿ ಕಾಶ್ಮೀರ್ ಫೈಲ್ಸ್’
Advertisement
ಕೆಜಿಎಫ್ 2 ಸಿನಿಮಾದ ನಂತರ ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳು ಬಂದರೂ, ಗಲ್ಲಾ ಪೆಟ್ಟಿಗೆಯಲ್ಲಿ ಅಷ್ಟೇನೂ ಅವುಗಳು ಸದ್ದು ಮಾಡಲಿಲ್ಲ. ಹೀಗಾಗಿಯೇ ಅಜಯ್ ರಾವ್, ಸಾಧು ಕೋಕಿಲಾ ಸೇರಿದಂತೆ ಹಲವು ನಟರು ‘ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಬನ್ನಿ’ ಎಂದು ಕೈ ಮುಗಿದು ಕರೆದರು. ಆದರೂ, ಪ್ರೇಕ್ಷಕರು ಮಾತ್ರ ಕೆಜಿಎಫ್ 2 ಸಿನಿಮಾವನ್ನೇ ತಲೆಯೊಳಗೆ ಹಾಕಿಕೊಂಡು ಕೂತುಬಿಟ್ಟರು. ಇದನ್ನೂ ಓದಿ : ಯಶ್ ಆಸೆ ಈಡೇರಿಸುತ್ತಾರಾ ತಮಿಳಿನ ಖ್ಯಾತ ನಿರ್ದೇಶಕ ಶಂಕರ್
Advertisement
Advertisement
ಈ ವಾರ ಕಂಡು ಕೇಳರಿಯದಷ್ಟು ಚಿತ್ರಗಳು ರಿಲೀಸ್ ಆಗುತ್ತಿವೆ. ಸಣ್ಣ ಬಜೆಟ್ ಸಿನಿಮಾಗಳಿಂದ ಹಿಡಿದು, ಮಧ್ಯಮ ಬಜೆಟ್ ವರೆಗಿನ ಚಿತ್ರಗಳು ರಿಲೀಸ್ ಆಗಿವೆ. ಹೊಸಬರ ಚಿತ್ರಗಳಿಂದ ಸ್ಟಾರ್ ನಟರ ಚಿತ್ರಗಳು ಈ ವಾರ ತೆರೆ ಕಂಡಿವೆ. ಆದರೂ, ಜನರು ಥಿಯೇಟರ್ ನತ್ತ ಸುಳಿದದ್ದು ಕಡಿಮೆ ಎನ್ನುವ ವರದಿಯಿದೆ. ಈ ನಡುವೆ ಮೂರ್ನಾಲ್ಕು ದಿನಗಳಿಂದ ಮಳೆಯೂ ಆಗುತ್ತಿದೆ. ಹಾಗಾಗಿ ಮಳೆ ಕಾಟವೂ ಜನರು ಬರದೇ ಇರುವುದಕ್ಕೆ ಕಾರಣವೂ ಆಗಿದೆ. ಇದನ್ನೂ ಓದಿ : ಪ್ರಾದೇಶಿಕ ಭಾಷಾ ಮಹತ್ವ ಪ್ರಧಾನಿ ಮೋದಿ ಮಾತಿಗೆ ಸಂತಸ ವ್ಯಕ್ತ ಪಡಿಸಿದ ಕಿಚ್ಚ ಸುದೀಪ್
Advertisement
ಕೆಜಿಎಫ್ 2 ಚಿತ್ರಕ್ಕಾಗಿ ಸಣ್ಣ ಬಜೆಟ್ ಸಿನಿಮಾಗಳ ನಿರ್ಮಾಪಕರು ಕಾದರು. ಮುಂದೆ ಚಾರ್ಲಿ, ವಿಕ್ರಾಂತ್ ರೋಣ ರೀತಿಯ ಭಾರೀ ಬಜೆಟ್ ಮತ್ತು ಸ್ಟಾರ್ ಇರುವ ಸಿನಿಮಾಗಳು ತೆರೆ ಕಾಣಲಿವೆ. ಈ ನಡುವೆ ಸಣ್ಣ ಬಜೆಟ್ ಚಿತ್ರಗಳನ್ನು ರಿಲೀಸ್ ಮಾಡಿಕೊಳ್ಳೋಣ ಎಂದು ಹಲವು ನಿರ್ಮಾಪಕರು ಈ ಪ್ರಮಾಣದಲ್ಲಿ ಥಿಯೇಟರ್‌ಗೆ ನುಗ್ಗುತ್ತಿದ್ದಾರೆ. ಹಾಗಾಗಿ ವಾರಕ್ಕೆ ಹತ್ತತ್ತು ಸಿನಿಮಾಗಳನ್ನು ನೋಡುವಂತಹ ಅವಕಾಶ ಪ್ರೇಕ್ಷಕರಿಗೆ ಸಿಕ್ಕಿದೆ. ಆದರೆ, ಪ್ರೇಕ್ಷಕ ಮಾತ್ರ ಚಿತ್ರಮಂದಿರದಿಂದ ವಿಮುಖನಾಗಿದ್ದಾನೆ.
ಒಳ್ಳೆಯ ಕಂಟೆಂಟ್ ಮತ್ತು ಹೊಸ ಬಗೆಯ ಚಿತ್ರಗಳು ಬಂದರೂ, ವಾರಪೂರ್ತಿ ಮಳೆಯಲ್ಲಿಯೇ ಬೆಂಗಳೂರು ಮುಳುಗಿ ಹೋಗಿದೆ. ರಸ್ತೆಗೆ ಕಾಲಿಡಲು ಜನರು ಭಯ ಪಡುವಂತಾಗಿದೆ. ಹಾಗಾಗಿ ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿ ರಿಲೀಸ್ ಆದ ಚಿತ್ರಗಳು ಪ್ರೇಕ್ಷಕರ ಕೊರತೆಯನ್ನು ಎದುರಿಸುತ್ತಿವೆ.