ಪುರುಷರಿಗೆ ಹೊಲಿಸಿದರೆ ಮಹಿಳೆಯರು ಧರಿಸಲು ಲೆಕ್ಕವಿರದಷ್ಟು ಆಭರಣಗಳಿದೆ. ಮಹಿಳೆಯರಿಗೆ ಯಾವೆಲ್ಲಾ ಆಭರಣಗಳಿದೆ ಎಂದು ಲೆಕ್ಕ ಹಾಕಲು ಕುಳಿತುಕೊಂಡರೆ ನೀವು ಖಂಡಿತವಾಗಿಯೂ ಸುಸ್ತಾಗಬಹುದು. ನೀವು ಮಾರುಕಟ್ಟೆಗಳಿಗೆ ಹೋದರೆ ಮಹಿಳೆಯರಿಗೆಂದೇ ತರಾವರಿ ಟ್ರೆಂಡಿ ಹಾಗೂ ಟ್ರೆಡಿಷನಲ್ ಆಭರಣಗಳಿರುವುದನ್ನು ಕಾಣಬಹುದಾಗಿದೆ.
ಸಾಮಾನ್ಯವಾಗಿ ಮಹಿಳೆಯರನ್ನು ಸುಂದರಗೊಳಿಸುವುದೇ ಆಭರಣಗಳು. ಮಹಿಳೆಯರು ಯಾವ ಆಭರಣ ಧರಿಸಿದರೂ ಮುದ್ದಾಗಿ ಕಾಣಿಸುತ್ತಾರೆ. ಅದರಲ್ಲಿಯೂ ಮಹಿಳೆಯರು ಧರಿಸುವ ಸೊಂಟದ ಚೈನ್ ಅವರ ನಡುವಿನ ಅಂದವನ್ನು ಹೆಚ್ಚಿಸುತ್ತದೆ. ಸಾಕಷ್ಟು ಮಹಿಳೆಯರು ಮದುವೆಯಾದ ನಂತರ ಆಭರಣವನ್ನು ಹೆಚ್ಚಾಗಿ ಧರಿಸುತ್ತಾರೆ. ಆದರೆ ಇದೀಗ ಹಲವಾರು ಆಭರಣಗಳ ಜೊತೆಗೆ ಸೊಂಟದ ಚೈನ್ ಧರಿಸಲು ಆರಂಭಿಸಿದ್ದಾರೆ. ಮಹಿಳೆಯರಿಗೆಂದೇ ಮಾರುಕಟ್ಟೆಗೆ ಹಲವಾರು ಡಿಸೈನ್‍ಗಳ ಸೊಂಟದ ಚೈನ್ ಬಂದಿದೆ. ಇವುಗಳನ್ನು ಲೆಹೆಂಗಾ, ಸೀರೆಯೊಂದಿಗೆ ಧರಿಸುವುದು ಮಾತ್ರವಲ್ಲದೇ ಜೀನ್ಸ್ ಮೇಲೆ ಕೂಡ ಧರಿಸುವ ಟ್ರೆಂಡ್ ಶುರುವಾಗಿದೆ. ಈ ಕುರಿತ ಒಂದಷ್ಟು ಮಾಹಿತಿಯನ್ನು ಇಂದು ನಿಮಗೆ ನಾವು ನೀಡುತ್ತೇವೆ. ಇದನ್ನೂ ಓದಿ: ಹನಿಟ್ರ್ಯಾಪ್ ಮೂಲಕ ಉದ್ಯಮಿಗೆ ಬೆದರಿಕೆ – ಸ್ಯಾಂಡಲ್‍ವುಡ್ ಯುವ ನಟ ಅರೆಸ್ಟ್
ಬಂಜಾರ ಶೈಲಿಯ ಸೊಂಟದ ಚೈನ್ ಡಿಸೈನ್
ಬಂಜಾರ ಶೈಲಿಯ ಸೊಂಟದ ಚೈನ್ ನೀವು ಸೀರೆಯೊಂದಿಗೂ ಧರಿಸಬಹುದು ಮತ್ತು ಜೀನ್ಸ್ ಪ್ಯಾಂಟ್ ಮೇಲೆ ಕೂಡ ಧರಿಸಬಹುದಾಗಿದೆ. ನೋಡಲು ಸಿಲ್ವರ್ ಚೈನ್ ರೀತಿ ಇರುವ ಈ ಸರ ನಿಮಗೆ ಮಾರುಕಟ್ಟೆಯಲ್ಲಿ 250 ರೂಪಾಯಿಯಿಂದ 500 ರೂಪಾಯಿವರೆಗೂ ಸಿಗಬಹುದು. ಇದನ್ನು ನೀವು ಸಲ್ವಾರ್ ಸೂಟ್‍ನೊಂದಿಗೆ ಸಹ ಧರಿಸಬಹುದು. ಪಾರ್ಟಿ ವೇಳೆ, ಡ್ಯಾನ್ಸ್ ಮಾಡುವಾಗ ಈ ಚೈನ್ ಧರಿಸುವುದರಿಂದ ನಿಮ್ಮ ಸೊಂಟ ಸುಂದರವಾಗಿ ಕಾಣಿಸುತ್ತದೆ. ಅದರಲ್ಲಿಯೂ ಬ್ಲ್ಯಾಕ್ ಕಲರ್ ಸೀರೆ ಜೊತೆಗೆ ಈ ಸೀರೆಯನ್ನು ಧರಿಸಿದರೆ ಸಖತ್ ಸ್ಟೈಲಿಶ್ ಲುಕ್ ನೀಡುತ್ತದೆ. ಸಾಂಪ್ರದಾಯಿಕ ರಾಜಸ್ಥಾನಿ ಲೆಹೆಂಗಾ ಮತ್ತು ಗುಜರಾತಿ ಘಾಗ್ರಾದೊಂದಿಗೆ ಕೂಡ ಇದನ್ನು ಧರಿಸಬಹುದು.
ಮೆಶ್ವರ್ಕ್ ಸೊಂಟದ ಚೈನ್ ಡಿಸೈನ್
ಜಾಲಿ ವರ್ಕ್ ಮಾಡಿರುವ ಈ ಟ್ರೆಡಿಷನ್ ಸೊಂಟದ ಚೈನ್ ಅನ್ನು ಹೆಚ್ಚಾಗಿ ಮಾರುಕಟ್ಟೆಗಳಲ್ಲಿ ನೀವು ಕಾಣುತ್ತೀರಾ. ಅದರಲ್ಲಿಯೂ ವಿಶೇಷವಾಗಿ ಹಿಂದೂಗಳ ಮದುವೆ ಸಮಾರಂಭಗಳಲ್ಲಿ ವಧು ಧರಿಸಿರುವುದನ್ನು ನೋಡಬಹುದಾಗಿದೆ. ಈ ರೀತಿಯ ಚೈನ್‍ಗಳು ಚಿನ್ನ ಹಾಗೂ ಬೆಳ್ಳಿ ಎರಡರಲ್ಲಿಯೂ ಸಿಗುತ್ತದೆ. ನೀವೇನಾದರೂ ಸೊಂಟದ ಚೈನ್ ಹುಡುಕುತ್ತಿದ್ದರೆ, 300 ರೂಪಾಯಿಯಿಂದ 1,000 ರೂಪಾಯಿವರೆಗೂ ಈ ಚೈನ್ ಮಾರುಕಟ್ಟೆಯಲ್ಲಿ ಸಿಗುತ್ತದೆ. ಇದನ್ನೂ ಓದಿ: ವೈಯಕ್ತಿಕ ಬಳಕೆಗಾಗಿ ಬಾಡಿಗೆ ನೀಡಿದ್ದರೆ ಜಿಎಸ್‌ಟಿ ಇಲ್ಲ- ಕೇಂದ್ರ
ಇದನ್ನು ನೀವು ಲೆಹೆಂಗಾಗಳು ಮತ್ತು ಸೀರೆಗಳ ಜೊತೆಗೆ ಅಫ್ಘಾನಿ ಸಲ್ವಾರ್ ಮತ್ತು ಕ್ರಾಪ್ ಟಾಪ್‍ಗಳೊಂದಿಗೆ ಕೂಡ ಧರಿಸಬಹುದು. ಈ ರೀತಿಯ ಸೊಂಟದ ಚೈನ್‍ಗಳು ಸ್ವಲ್ಪ ಭಾರವಾಗಿರುತ್ತದೆ. ಹಾಗಾಗಿ ನೀವು ಇದನ್ನು ಪಾರ್ಟಿ ಮತ್ತು ಹಬ್ಬದ ಸಮಾರಂಭಗಳಲ್ಲಿ ಮಾತ್ರ ಧರಿಸಿದರೆ ಉತ್ತಮ. ಜೀನ್ಸ್ ಜೊತೆಗೆ ಕೊಂಚ ಎಥ್ನಿಕ್ ಲುಕ್ ನೀಡಲು ನೀವು ಬಯಸಿದರೆ, ಇವುಗಳನ್ನು ಸ್ಕಿನ್ ಫಿಟ್ ಜೀನ್ಸ್ ಮತ್ತು ಸ್ಕಿನ್ ಫಿಟ್ ಟೀ ಶರ್ಟ್‍ನೊಂದಿಗೆ ಧರಿಸಬಹುದು.
ಪರ್ಲ್ ವರ್ಕ್ ಸೊಂಟದ ಚೈನ್ ಡಿಸೈನ್
ಮುತ್ತಿನಿಂದ ವಿನ್ಯಾಸಗೊಳಿಸಿರುವ ಈ ಚೈನ್ ನಿಮಗೆ ರಾಯಲ್ ಲುಕ್ ನೀಡುತ್ತದೆ. ಇದನ್ನು ನೀವು ಸಿಂಪಲ್ ಆಗಿರುವಂತಹ ಸೀರೆ ಅಥವಾ ಲೆಹೆಂಗಾ ಜೊತೆಗೆ ಧರಿಸುವುದು ಉತ್ತಮ. ಈ ಚೈನ್ ಕೊಂಚ ಕಾಸ್ಟಿಯಾಗಿದ್ದು, ಮಾರುಕಟ್ಟೆಯಲ್ಲಿ 500 ರೂಪಾಯಿಯಿಂದ 1,000 ರೂಪಾಯಿವರೆಗೂ ಪಡೆಯಬಹುದಾಗಿದೆ. ಯಾವುದೇ ಮದುವೆ, ಹಬ್ಬ ಅಥವಾ ಪಾರ್ಟಿಯಾಗಿರಲಿ ಸಲ್ವಾರ್, ಸೀರೆ ಅಥವಾ ಲೆಹೆಂಗಾದೊಂದಿಗೆ ಈ ರೀತಿಯ ಸರ ಮ್ಯಾಚ್ ಆಗುತ್ತದೆ. ಅಲ್ಲದೇ ಈ ಚೈನ್ ನಿಮಗೆ ರಾಣಿಯರಂತೆ ರಿಚ್ ಲುಕ್ ನೀಡುತ್ತದೆ.