ಮುಂಬೈ: 18 ವರ್ಷದೊಳಗಿನ ಮಕ್ಕಳು ಮೊಬೈಲ್ ಬಳಸದಂತೆ ಬಂಸಿ (Bansi) ಗ್ರಾಮದಲ್ಲಿ ನಿಷೇಧಿಸಲಾಗಿದೆ.
ಮಕ್ಕಳು ಗೇಮಿಂಗ್ ಮತ್ತು ಮೊಬೈಲ್ ಗೀಳಿಗೀಡಾಗುವುದನ್ನು ತಪ್ಪಿಸಲು ಗ್ರಾಮದ ಹಿರಿಯರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮಹಾರಾಷ್ಟ್ರದ (Maharashtra) ಪಶ್ಚಿಮ ವಿದರ್ಭ ಪ್ರದೇಶದಲ್ಲಿರುವ ಯವತ್ಮಾಲ್ ಜಿಲ್ಲೆಯಲ್ಲಿ ಬಂಸಿಯಲ್ಲಿರುವ ಈ ಗ್ರಾಮ ತನ್ನ ನಿರ್ಧಾರದಿಂದ ಈ ದೇಶದ್ಯಾಂತ ಸುದ್ದಿಯಲ್ಲಿದೆ.
Advertisement
Advertisement
ಮಕ್ಕಳಿಗೆ ಮೊಬೈಲ್ ನೀಡುವುದರಿಂದ ಮಕ್ಕಳು ಗೇಮಿಂಗ್ ಚಟಕ್ಕೆ ಬೀಳಬಹುದು, ದುಶ್ಚಟಗಳಿಗೆ ಬಲಿಯಾಗಬಹುದು ಮತ್ತು ಪೊರ್ನ್ ವೆಬ್‍ಸೈಟ್‍ಗಳಿಗೆ ದಾಸರಾಗಬಹುದು ಎನ್ನುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗ್ರಾಮದ ಮುಖಂಡ ಗಜಾನನ ತಾಳೆ (Gajanan Tale) ಎಲ್ಲ ಪೋಷಕರು ಈ ನಿಯಮ ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಹೊಂಬಾಳೆ ಸಂಸ್ಥೆಗೂ ಚಿಲುಮೆಗೂ ಸಂಬಂಧ ಇಲ್ಲ: ಕೈ ಆರೋಪಕ್ಕೆ ಅಶ್ವಥ್ ನಾರಾಯಣ್ ತಿರುಗೇಟು
Advertisement
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮೊಬೈಲ್ ಫೋನ್‍ಗಳನ್ನು ನಿಷೇಧಿಸುವ ಔಪಚಾರಿಕ ನಿರ್ಣಯವನ್ನು ಗ್ರಾಮಸ್ಥರು ಸರ್ವಾನುಮತದಿಂದ ಅಂಗೀಕರಿಸಿದ್ದಾರೆ ಎಂದು ಗಜಾನನ ತಾಳೆ ಹೇಳಿದ್ದಾರೆ. ಗ್ರಾಮದ ಶಾಲಾ ಮಕ್ಕಳು ಮೊಬೈಲ್ ಚಟಕ್ಕೆ ಬಿದ್ದಿದ್ದಾರೆ. ಹೀಗಾಗಿ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಆಟೋದಿಂದ ಜಂಪ್ – ಬಾಲಕಿ ತಲೆಗೆ ಗಂಭೀರ ಗಾಯ
Advertisement
ಇದರ ಅನುಷ್ಠಾನದಲ್ಲಿ ಸಾಕಷ್ಟು ತೊಂದರೆಗಳಿದೆ. ಆದರೆ ನಾವು ಮಕ್ಕಳಿಗೆ ಕೌನ್ಸೆಲಿಂಗ್ ಮೂಲಕ ಈ ಸಮಸ್ಯೆಗಳನ್ನು ನಿವಾರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ತಾಳೆ ಅವರು, ನಿಯಮದ ಉಲ್ಲಂಘನೆಯಾದಲ್ಲಿ ದಂಡವನ್ನು ವಿಧಿಸಲಾಗುತ್ತದೆ. ಈ ನಿರ್ಧಾರವನ್ನು ಗ್ರಾಮಸ್ಥರು ಒಮ್ಮತದಿಂದ ಬೆಂಬಲಿಸಿದ್ದಾರೆ. ನಿಯಮ ಉಲ್ಲಂಘಿಸುವ ಕುಟುಂಬಕ್ಕೆ ಆರಂಭದಲ್ಲಿ ಸಲಹೆ ನೀಡುತ್ತೇವೆ. ಎರಡನೇ ಬಾರಿಗೆ ನಿಯಮ ಉಲ್ಲಂಘನೆಯಾದಲ್ಲಿ ನಾವು ದಂಡವನ್ನು ವಿಧಿಸುತ್ತೇವೆ. ಈವರೆಗೂ ದಂಡದ ಮೊತ್ತವನ್ನು ನಿಗದಿಪಡಿಸಿಲ್ಲ ಎಂದು ತಿಳಿಸಿದ್ದಾರೆ.