Bengaluru CityDistrictsKarnatakaLatestLeading NewsMain Post

ಹೊಂಬಾಳೆ ಸಂಸ್ಥೆಗೂ ಚಿಲುಮೆಗೂ ಸಂಬಂಧ ಇಲ್ಲ: ಕೈ ಆರೋಪಕ್ಕೆ ಅಶ್ವಥ್ ನಾರಾಯಣ್ ತಿರುಗೇಟು

ಬೆಂಗಳೂರು: ಹೊಂಬಾಳೆ ಸಂಸ್ಥೆ (Hombale0 ಗೂ ಚಿಲುಮೆ (Chilume) ಗೂ ಏನೂ ಸಂಬಂಧ ಇಲ್ಲ. ಏನಾದರು ಇದ್ದರೆ ಹೋಗಿ ನೋಡಲಿ. ಬೇರೆ ಯಾರದ್ರು ಹೊಂಬಾಳೆ ಅಂತ ಇಟ್ಟುಕೊಂಡರೆ ತಡೆಯಲು ಆಗಲ್ಲ. ನನ್ನ ಸಹೋದರಿನಿಗೂ ಈ ಚಿಲುಮೆಗೂ ಸಂಬಂಧ ಇಲ್ಲ ಎಂದು ಸಚಿವ ಅಶ್ವಥ್ ನಾರಾಯಣ್ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಅಶ್ವಥ್ ನಾರಾಯಣ್ (Ashwath Narayan), ಹೊಂಬಾಳೆ ಪ್ರತಿಷ್ಠಿತ ಸಂಸ್ಥೆ. ನಮ್ಮ ನಾಡಿಗೆ, ಸಿನಿಮಾಗೆ ಗೌರವ ತಂದಿರೋರು. ಇಂತಹ ಕೀಳು ಮಟ್ಟದಲ್ಲಿ ಮಾತಾಡ್ತಿರೋರ ರೇಂಜ್‌ಗೆ ಹೊಂಬಾಳೆ ಸಂಸ್ಥೆ ಇಲ್ಲ. ಇವರ ರೀತಿ ನಮ್ಮ ನಾಡಿಗೆ ಭಾರವಾಗಿ ಹೊಂಬಾಳೆ ಸಂಸ್ಥೆ ಇಲ್ಲ. ನಮ್ಮ ನಾಡಿಗೆ ಗೌರವ ತಂದಿದ್ದಾರೆ. ಆರೋಪ ಮಾಡೋರು ನೋಡಿಕೊಂಡು ಮಾತಾಡಲಿ. ಕಾಂಗ್ರೆಸ್ ಅವರಿಗೆ ಒಂದು, ಎರಡು ಇಲ್ಲ. ಸಂಸ್ಥೆ ಮೇಲೆ ಯಾಕೆ ಅವಮಾನ ಮಾಡ್ತೀರಾ ಎಂದು ಪ್ರಶ್ನಿಸಿದರು.

ಇಂತಹ ನಿರಾಧಾರವಾದ ಆಪಾದನೆ ಖಂಡಿಸುತ್ತೇನೆ. ಚುನಾವಣೆ ಆಯೋಗದ ಹಿನ್ನೆಲೆಯಲ್ಲಿ ಅದು ನಡೆದಿರುತ್ತೆ. ಆಯೋಗದ ಅಡಿಯಲ್ಲಿ ಇದು ನಡೆಯುತ್ತೆ. ಪಕ್ಷ ಸರ್ಕಾರದ ಅಡಿ ಆಗಲ್ಲ. ಪುರುಸೊತ್ತಾಗಿ ಕಾಂಗ್ರೆಸ್‍ನವರು ಇದ್ದಾರೆ. ನಮ್ಮ ನಾಡಿಗೆ ಗೌರವ ತರುವ ಸಂಸ್ಥೆ ನಮ್ಮದು. ಕಾಂಗ್ರೆಸ್ ಅವರಂತೆ ನಾಡಿಗೆ ಅಗೌರವ ತರುವವರು ಅಲ್ಲ. ಕಾಂಗ್ರೆಸ್ ಅವರಿಗೆ ಒಂದು ಎರಡು ಇಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಮತ ಮಾಹಿತಿಗೆ ಕನ್ನ: ಕಾಂಗ್ರೆಸ್ ಹೊಸ ಬಾಂಬ್

ಫೋಟೋ ರಿಲೀಸ್ ವಿಚಾರ ಕುರಿತು ಪ್ರತಿಕ್ರಿಯಿಸಿ, ಕೃಷ್ಣಪ್ಪ ಯಾರು ಅಂತ ಗೊತ್ತು. ಸಾಮಾಜಿಕ ಕಾರ್ಯಕ್ರಮದಲ್ಲಿ ಕರೆದಾಗ ಹೋಗಿದ್ದೆ. ಕಾಂಗ್ರೆಸ್ ಅವರನ್ನ ಕೇಳಿ ಹೋಗಬೇಕಾ? ಕಾರ್ಯಕ್ರಮಕ್ಕೆ ಕರೆದಿದ್ದರು. ಹೋಗಿದ್ದೆ. ಅದು ತಪ್ಪಾ..? ಕಾಂಗ್ರೆಸ್ ಅವರು ದೂರು ನೀಡಲಿ. ಚುನಾವಣೆ ಆಯೋಗ ತನಿಖೆ ಮಾಡುತ್ತೆ. ಚುನಾವಣೆ ಆಯೋಗ ತನಿಖೆ ಬಗ್ಗೆ ತೀರ್ಮಾನ ಮಾಡಲಿ ಎಂದು ಹೇಳಿದರು.

ಕಾಂಗ್ರೆಸ್ (Congress) ಗೆ ಮಾಹಿತಿ ಕೊರತೆ, ಆಧಾರದ ಕೊರತೆ ಇದೆ. ಕಾಂಗ್ರೆಸ್ ಅವರು ಮಸಿ ಬಳದುಕೊಂಡು ಇದ್ದಾರೆ. ಕಾಂಗ್ರೆಸ್ ಕಾನೂನು ಉಲ್ಲಂಘನೆ ಮಾಡಿರೋದು. ಡಿಕೆ, ಸಿದ್ದರಾಮಯ್ಯ, ಸುರ್ಜೇವಾಲ ಕಾನೂನು ವಿರುದ್ಧ ಕೆಲಸ ಮಾಡ್ತಿದ್ದಾರೆ. ಆಧಾರ ಇಟ್ಟು ಮಾತಾಡಬೇಕು. ಇದರಲ್ಲಿ ನಾನು ಭಾಗಿಯಾಗಿಲ್ಲ. ನನಗೆ ಮಸಿ ಬಳಿಸೋಕೆ ಹೀಗೆ ಮಾಡ್ತಾರೆ. ರವಿ ಅನ್ನೋನು ನನಗೆ ಗೊತ್ತು. ನನಗೆ ಎಲ್ಲರೂ ಸಿಂಪಥೈಸರ್ ಗಳೇ. ಯಾರು ಆರೋಪ ಮಾಡಿದ್ದಾರೆ ಆಧಾರ ಕೇಳಿ. ಆಧಾರ ಇದ್ದರೆ ದೂರು ಕೊಡಲಿ ಎಂದು ಕಿಡಿಕಾರಿದರು.

ಕಾಂಗ್ರೆಸ್ ಅವರಿಗೆ ನನ್ನನ್ನ ನೋಡಿದ್ರೆ ಭಯ. ಟಾರ್ಗೆಟ್ ಅಶ್ವಥ್ ನಾರಾಯಣ್ ಆಗಿದೆ. ನಮ್ಮಲ್ಲಿ ಯಾರೂ ಸಂಚು ಮಾಡ್ತಿಲ್ಲ. ಒಗ್ಗಟ್ಟಾಗಿ ಇದ್ದೇವೆ. ಇದು ಕುಟುಂಬದ ಪಕ್ಷ ಅಲ್ಲ. ನಮ್ಮದು ಪ್ರೈವೆಟ್ ಲಿಮಿಟೆಡ್ ಅಷ್ಟೆ. ಇದು ಗಾಳಿ ಸುದ್ದಿ ಅಷ್ಟೆ. ನಾನು ಯಾರನ್ನು ಡಿಪೆಂಡ್ ಮಾಡಲ್ಲ. ಇಂತಹ ಚುನಾವಣೆ ವಿಚಾರ ಬಂದರೆ ಆಯೋಗ ನೋಡುತ್ತೆ. ಅವರಿಗೆ ದೂರು ನೀಡಲಿ ಎಂದರು.

Live Tv

Leave a Reply

Your email address will not be published. Required fields are marked *

Back to top button