ಬೆಂಗಳೂರು: ಸಮೀಕ್ಷೆಗಳು ಏನೇ ಹೇಳಿದರೂ ಈ ಬಾರಿ ಜನರು ಜೆಡಿಎಸ್‌ಗೆ (JDS) ಅವಕಾಶ ಕೊಡುತ್ತಾರೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ವಿಶ್ವಾಸ ವ್ಯಕ್ತಪಡಿಸಿದರು.
ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ (Mysuru) ಇದೇ ಅಕ್ಟೋಬರ್ 19-20 ರಂದು 126 ಅಭ್ಯರ್ಥಿಗಳಿಗೆ ಕಾರ್ಯಾಗಾರ ಇದೆ. ಬಿಡದಿಯಲ್ಲಿ ಕೊಟ್ಟ ಟಾಸ್ಕ್ ಪೂರ್ಣ ಮಾಡಿದ್ದೀರಾ ಅಂತಾ ಚೆಕ್ ಮಾಡ್ತೀವಿ. ಚುನಾವಣೆಗೆ (Elections) ಹೇಗೆ ಕೆಲಸ ಮಾಡಬೇಕು ಅಂತ ಸೂಚನೆ ಕೊಡ್ತೀವಿ ಎಂದು ಹೇಳಿದರು. ಇದನ್ನೂ ಓದಿ: ವಿವಾಹಿತನೊಂದಿಗೆ ಓಡಿ ಹೋಗಿದ್ದಕ್ಕೆ ಕಲ್ಲೆಸೆದು ಕೊಲ್ಲುವ ಶಿಕ್ಷೆ – ತಾನೇ ನೇಣಿಗೆ ಶರಣಾದ ಅಫ್ಘಾನ್ ಮಹಿಳೆ
Advertisement
Advertisement
ಬಿಜೆಪಿ-ಕಾಂಗ್ರೆಸ್ (BJP, Congress) ಭರಾಟೆ ಏನೇ ಇದ್ದರೂ ಜೆಡಿಎಸ್ ಪರ ಜನರ ಭಾವನೆ ಇದೆ. ಈ ಬಾರಿ ಕುಮಾರಸ್ವಾಮಿಗೆ ಅವಕಾಶ ಕೊಡಬೇಕು ಅಂತ ಜನರ ಮನಸ್ಸಿನಲ್ಲಿ ಇದೆ. ಭಾರತ್ ಜೋಡೋ (Bharat Jodo Yatra), ಸಂಕಲ್ಪ ಯಾತ್ರೆ ಯಾವುದು ಯಶಸ್ವಿಯಾಗಲ್ಲ ಅಂತ ತಿಳಿಸಿದರು. ಇದನ್ನೂ ಓದಿ: ಇರಾನ್ ಜೈಲಿನಲ್ಲಿ ಬೆಂಕಿ ಅವಘಡ- ಹಿಜಬ್ ವಿರೋಧಿ ಬೆಂಬಲಿಗರು ಸಾವು, 61 ಮಂದಿಗೆ ಗಾಯ
Advertisement
Advertisement
ಯಾರೋ ಮಾಡೋ ಸರ್ವೆ ರಿಪೋರ್ಟ್ ನನಗೆ ಮುಖ್ಯ ಅಲ್ಲ. ನನ್ನ ಗುರಿ 123 ಸ್ಥಾನ. ಅದಕ್ಕೆ ನಾವು ಕೆಲಸ ಮಾಡ್ತೀವಿ. ನಾವು ಕೂಡಾ ಸರ್ವೆ ಮಾಡಿಸುತ್ತಿದ್ದೇವೆ. 30-40 ಕ್ಷೇತ್ರ ಸರ್ವೆ ಆಗಿದೆ. ಅಲ್ಲಿ ಕೆಲ ಗೊಂದಲ ಸರಿ ಮಾಡೋಕೆ ಕೆಲಸ ಮಾಡ್ತಿದ್ದೇವೆ ಅಂತ ತಿಳಿಸಿದರು.
ಸರ್ವೆ ರಿಪೋರ್ಟ್ ನಮ್ಮ ಪರ ಇದೆ ಅಂತ ಮೈಮರೆಯೋದು ಬೇಡ. ಸರ್ವೆ ನೆಗೆಟೀವ್ ಇರಲಿ ಪಾಸಿಟಿವ್ ಇರಲಿ. ನಾವು ಚುನಾವಣೆ ಗೆಲ್ಲೋಕೆ ಕೆಲಸ ಮಾಡುತ್ತೇವೆ ಅಂತ ತಿಳಿಸಿದರು.