ರಾಮನಗರ: ನಾನು ಎರಡು ಬಾರಿ ಪೆಟ್ಟು ತಿಂದಿದ್ದೇನೆ. ಈ ಬಾರಿ ನಿಮ್ಮನ್ನ ನಂಬಿ ಕೊನೆಯದಾಗಿ ಚುನಾವಣೆಗೆ ನಿಂತಿದ್ದೇನೆ. ನನ್ನ ಕೈ ಬಿಡಬೇಡಿ ಎಂದು ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಚನ್ನಪಟ್ಟಣ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಚಕ್ಕೆರೆ ಗ್ರಾಮದಲ್ಲಿ ಮತಪ್ರಚಾರ ಮಾಡಿ ಮಾತನಾಡಿದ ಅವರು, ಚಕ್ಕೆರೆ ಗ್ರಾಮದಲ್ಲಿ ಜೆಡಿಎಸ್‌ನಲ್ಲಿ (JDS) ಗುರುತಿಸಿಕೊಂಡವರು ಕಾಂಗ್ರೆಸ್‌ಗೆ (Congress) ಹೋಗಿದ್ದಾರೆ. ಆದರೆ ಚಕ್ಕೆರೆಯಲ್ಲಿ ಅನೇಕ ಜನರು ಜೆಡಿಎಸ್ ಪಕ್ಷ ಕಟ್ಟಿದ್ದಾರೆ. ನಿಖಿಲ್ ಚುನಾವಣೆಗೆ ನಿಲ್ಲಬೇಕು ಎಂದು ಕ್ಷೇತ್ರದ ಜನರು ಮನವಿ ಮಾಡಿದ್ದರು. ಈ ಚುನಾವಣೆ ನನ್ನ ಪಾಲಿಗೆ ಅನಿರೀಕ್ಷಿತ ಬೆಳವಣಿಗೆ. ಸಿಎಂ, ಡಿಸಿಎಂ, ಎಲ್ಲಾ ಸಚಿವರು ಒಬ್ಬ ನಿಖಿಲ್ ಸೋಲಿಸೋಕೆ ಬಂದಿದ್ದಾರೆ. ನನ್ನ ಎರಡು ಸೋಲು ಜನರು ಸೋಲಿಸಿದಲ್ಲ. ಜನರು ತಮ್ಮ ಮನಸಿನಲ್ಲಿ ನನಗೆ ಜಾಗ ಕೊಟ್ಟಿದ್ದಾರೆ ಎಂದರು. ಇದನ್ನೂ ಓದಿ: ಅಬಕಾರಿ ಪೊಲೀಸರ ಭರ್ಜರಿ ಬೇಟೆ – 40,000ಕ್ಕೂ ಅಧಿಕ ಕಲಬೆರಕೆ ಮದ್ಯ ಜಪ್ತಿ
ನಾನು ಶಾಸಕ ಆಗಬೇಕು ಅಂತ ಚುನಾವಣೆಗೆ ನಿಂತಿಲ್ಲ. ನನಗೆ ನನ್ನ ಜವಾಬ್ದಾರಿ ಅರಿವಿದೆ. ಯುವಕನ ಜೊತೆ ನಿಲ್ಲಬೇಕು ಅಂತ ನೀವೆಲ್ಲ ಬಂದಿದ್ದೀರಾ. ನಿಖಿಲ್ ನಿಮ್ಮ ಹೃದಯ ಗೆಲ್ಲೋಕೆ ಬಂದಿದ್ದಾನೆ. ಬೇರೆ ಆಸೆಯಿಲ್ಲ. ಕುತಂತ್ರದಿಂದ ಎರಡು ಚುನಾವಣೆ ಸೋತೆ. ಬಳಿಕ ನಾನು ಚುನಾವಣೆಗೆ ಸ್ಪರ್ಧೆ ಮಾಡೋದು ಬೇಡ ಅಂತ ನಿರ್ಧಾರ ಮಾಡಿದ್ದೆ. ವಿರೋಧ ಪಕ್ಷಗಳು ನಿತ್ಯ ಟೀಕೆ ಮಾಡುತ್ತಿದ್ದಾರೆ. 2019 ಲೋಕಸಭೆ ಚುನಾವಣೆಯಲ್ಲಿ ಶಾಸಕರು, ಕಾರ್ಯಕರ್ತರ ಒತ್ತಾಯಕ್ಕೆ ಸ್ಪರ್ಧೆ ಮಾಡಿದ್ದೆ. ಜನ ಎಂದೂ ನನ್ನ ಕೈ ಬಿಡಲಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಮೈತ್ರಿ ಧರ್ಮ ಪಾಲನೆ ಮಾಡಿಲ್ಲ. 5 ವರ್ಷ ಕುಮಾರಸ್ವಾಮಿ ಸಿಎಂ ಅಂತ ಕಾಂಗ್ರೆಸ್ ಅವರು ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡೋ ಭರವಸೆ ಕೊಟ್ಟಿದ್ದರು. ಅದರಂತೆ ಕುಮಾರಸ್ವಾಮಿ ಸಾಲಮನ್ನಾ ಮಾಡಿದರು. 14 ತಿಂಗಳಲ್ಲಿ ಕುಮಾರಸ್ವಾಮಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಚನ್ನಪಟ್ಟಣದಲ್ಲಿ 11 ಸಾವಿರ ರೈತರ ಸಾಲಮನ್ನಾ ಮಾಡಿದ್ದಾರೆ. ಕುಮಾರಸ್ವಾಮಿ ಯಾವುದೇ ಜಾತಿ, ಧರ್ಮ ನೋಡಿ ಸಾಲಮನ್ನಾ ಮಾಡಿಲ್ಲ. ಕುಮಾರಸ್ವಾಮಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಸರ್ಕಾರಿ ಶಾಲೆಗೆ 25 ಎಕರೆ ದಾನ ಮಾಡಲು ಮಹಾರಾಜರ ವಂಶಸ್ಥರಾ? – ಡಿಕೆಶಿ ವಿರುದ್ಧ ಹೆಚ್‌ಡಿಕೆ ಕೆಂಡ
ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ರಾಮನಗರ-ಮಂಡ್ಯ ಮಧ್ಯೆ ಒಂದು ಕೈಗಾರಿಕಾ ಸ್ಥಾಪನೆಗೆ ಕುಮಾರಸ್ವಾಮಿ ನಿರ್ಧಾರ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಕೆಲಸ ಆಗುತ್ತಿದೆ. ಕುಮಾರಸ್ವಾಮಿ ಮಾತು ಕೊಟ್ಟಿದ್ದನ್ನ ಉಳಿಸಿಕೊಂಡಿದ್ದಾರೆ. ಈ ಭಾಗಕ್ಕೆ ಕೈಗಾರಿಕೆ ತರಲು ನಾವು ಕೆಲಸ ಮಾಡುತ್ತೇವೆ. ದೇವೇಗೌಡರ ಬಗ್ಗೆ ಕಾಂಗ್ರೆಸ್ ಅವರು ಏನೇನೋ ಮಾತನಾಡುತ್ತಾರೆ. 1988ರಲ್ಲಿ ನಾನು ಹುಟ್ಟಿದೆ. ಆದರೆ ರಾಮನಗರ ಮತ್ತು ದೇವೇಗೌಡರ ಸಂಬಂಧ 1973ರಿಂದ ಪ್ರಾರಂಭವಾಗಿದೆ. ದೇವೇಗೌಡರ ಕಾಲಿನ ಮಂಡಿಗೆ 92 ವರ್ಷ ವಯಸ್ಸು ಆಗಿದೆ. ದೇಹಕ್ಕೆ ವಯಸ್ಸು ಆಗಿಲ್ಲ. ಹೋರಾಟದ ಕಿಚ್ಚು ಇನ್ನು ಅವರಿಗೆ ಇದೆ. ನಾನು ಹುಟ್ಟೋ 15 ವರ್ಷಕ್ಕಿಂತ ಮುಂಚೆ ನಿಮ್ಮ ಜೊತೆ ದೇವೇಗೌಡರು ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ಮೇಲೂರು ಕೆರೆಯಲ್ಲಿ ತಾಯಿ-ಮಗನ ಶವ ಪತ್ತೆ; ಆತ್ಮಹತ್ಯೆ ಶಂಕೆ
ಯೋಗೇಶ್ವರ್ ನಾನು ಆಧುನಿಕ ಭಗೀರಥ ಅಂತ ಹೇಳಿಕೊಳ್ಳುತ್ತಾರೆ. ಆದರೆ ಇಲ್ಲಿ ಕೆರೆಗಳು ತುಂಬಲು ಕಾರಣ ಅಂದಿನ ಸಿಎಂ ಸದಾನಂದಗೌಡ. ಯೋಗೇಶ್ವರ್ ಅವರನ್ನು ಎಂಎಲ್‌ಸಿ ಮಾಡಿ ಮಂತ್ರಿ ಮಾಡಿದ್ದರು. ನಾವು ಜೆಡಿಎಸ್‌ನಿಂದ ಸ್ಪರ್ಧೆ ಮಾಡಿ ಅಂತ ಹೇಳಿದ್ದೆವು. ಬರುತ್ತೇನೆ ಎಂದು ಬರಲಿಲ್ಲ. ಬಿಜೆಪಿಯಿಂದಲೇ ನಿಂತುಕೊಳ್ಳಿ ಅಂದರೂ ಕಾಂಗ್ರೆಸ್‌ಗೆ ಹೋದರು. ಯೋಗೇಶ್ವರ್ 6 ವರ್ಷಕ್ಕಿಂತ ಹೆಚ್ಚು ಒಂದು ಪಕ್ಷದಲ್ಲಿ ಇರಲ್ಲ. ತಾಲೂಕು ಪರ ಇವರು ಕೆಲಸ ಮಾಡುತ್ತಾರಾ? ಇದಕ್ಕೆ ಮೊದಲು ಉತ್ತರ ಕೊಡಲಿ. ನಾವು 107ಕೆರೆ ತುಂಬಿಸಿದ್ದೇವೆ, ನಾವು ಪ್ರಚಾರ ಪಡೆದಿಲ್ಲ. ಆತ್ಮಸಾಕ್ಷಿಗೆ ಅನುಗುಣವಾಗಿ ನಾವು ಕೆಲಸ ಮಾಡಿದ್ದೇವೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಟ್ರಂಪ್‌ಗೆ `ಎಕ್ಸ್’ನಲ್ಲಿ ಪಾಕ್ ಪ್ರಧಾನಿ ಅಭಿನಂದನೆ – ಬ್ಯಾನ್ ಮಾಡಿದ್ದ ಸೋಶಿಯಲ್ ಮೀಡಿಯಾ ವೇದಿಕೆ ಬಳಸಿದ್ದಕ್ಕೆ ಜನರ ಆಕ್ಷೇಪ
4 ತಿಂಗಳ ಹಿಂದೆ ಡಿಕೆಶಿಗೆ ಚನ್ನಪಟ್ಟಣ ಇರೋದು ಗೊತ್ತಾಯಿತು. ಈಗ 500 ಕೋಟಿ ಕೊಡುತ್ತೇವೆ, ಮನೆ ಕೊಡುತ್ತೇವೆ ಎನ್ನುತ್ತಾರೆ. ನೀವು ಯಾಕೆ ಒಂದೂವರೆ ವರ್ಷಗಳಲ್ಲಿ ಅಭಿವೃದ್ಧಿ ಕೆಲಸ ಈ ಭಾಗಕ್ಕೆ ಕೊಡಲಿಲ್ಲ? ನಿಮ್ಮನ್ನು ನಂಬಿಕೊಂಡು ಬಂದಿದ್ದೇನೆ. ಇದು ಪ್ರಾದೇಶಿಕ ಪಕ್ಷದ ಅಸ್ಥಿತ್ವದ ಪ್ರಶ್ನೆ. ನನ್ನನ್ನು ಒಂದು ಬಾರಿ ಪರೀಕ್ಷೆ ಮಾಡಿ. ದೇವೇಗೌಡ, ಕುಮಾರಸ್ವಾಮಿ ನಿಮಗೆ ಯಾವತ್ತು ಅನ್ಯಾಯ ಮಾಡಿಲ್ಲ. ನನಗೆ ಒಂದು ಅವಕಾಶ ಕೊಡಿ. ಮೂರೂವರೆ ವರ್ಷ ಇದೆ. ಒಂದು ಅವಕಾಶ ಕೊಟ್ಟು ನೋಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಕಾಂಗ್ರೆಸ್‌ನವರ ಗೊಡ್ಡು ಬೆದರಿಕೆಗೆ ನಾವು ಜಗ್ಗಲ್ಲ: ಶ್ರೀರಾಮುಲು