ಬೆಂಗಳೂರು: ದಕ್ಷಿಣಕಾಶಿ ಎಂದು ನಾನಾ ಪವಾಡಗಳಿಗೆ ಸಾಕ್ಷಿಯಾಗಿರುವ ಪ್ರಸಿದ್ಧ ಪುಣ್ಯಕ್ಷೇತ್ರ ನೆಲಮಂಗಲದ (Nelamangala) ಶಿವಗಂಗೆ ಬೆಟ್ಟಕ್ಕೆ (Shivaganga Hill) ಈ ಬಾರಿ ಸಂಕ್ರಾಂತಿ ಹಬ್ಬಕ್ಕೆ (Makar Sankranti) ಜನರ ಪ್ರವೇಶ ನಿಷೇಧಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ವಿಶ್ವ ಪ್ರಸಿದ್ಧ ಶಿವಗಂಗೆ ಬೆಟ್ಟವನ್ನು ಏರಲು ಜನವರಿ 14 ಹಾಗೂ 15 ರಂದು ನಿರ್ಬಂಧಿಸಲಾಗಿದೆ. ಇತ್ತೀಚೆಗೆ ಹೊಸ ವರ್ಷದ ದಿನ ಭಕ್ತರೊಬ್ಬರು ಬೆಟ್ಟ ಏರಿ ನೂಕುನುಗ್ಗಲಿದ್ದರಿಂದ ಬಿದ್ದು ಸಾವನಪ್ಪಿರುವ ಹಿನ್ನೆಲೆ ಹಾಗೂ ಶನಿವಾರ ಮತ್ತು ಭಾನುವಾರ ರಜೆ ಇರುವ ಕಾರಣದಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಆದೇಶ ಪ್ರಕಟಿಸಿದೆ. ಇದನ್ನೂ ಓದಿ: ತಿರುಪತಿಗೆ ಹುಂಡಿಯಿಂದಲೇ 1,450 ಕೋಟಿ ರೂ. ಸಂಗ್ರಹ
Advertisement
Advertisement
ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಶಿವಗಂಗೆ ಬೆಟ್ಟಕ್ಕೆ ಇದೀಗ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ತಹಶಿಲ್ದಾರ್ ಆದೇಶಕ್ಕೆ ಜನರು ಹಾಗೂ ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಈ ಬಾರಿಯೂ ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧೆ? – ಏನಿದು ತಂತ್ರಗಾರಿಕೆ?
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k