ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಮದುವೆ ಆಗುತ್ತಿರುವ ವಿಚಾರ ಸ್ಯಾಂಡಲ್ ವುಡ್ ನಲ್ಲಿ ಅಚ್ಚರಿಗೆ ಕಾರಣವಾಗಿದೆ. ಯಾವುದೇ ಸುಳಿವು ಕೊಡದೇ ಏಕಾಏಕಿಯಾಗಿ ಇಂಥದ್ದೊಂದು ಸುದ್ದಿ ಕೊಟ್ಟ ತಾರೆಯರು, ಭೇಟಿಯಾಗಿದ್ದು ಎಲ್ಲಿ? ಪ್ರೇಮ ಶುರುವಾಗಿದ್ದು ಯಾವಾಗ? ಮೊದಲು ಪ್ರಪೋಸ್ ಮಾಡಿದ್ದು ಯಾರು ಇತ್ಯಾದಿ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿವೆ. ಇವರಿಬ್ಬರೂ ಪರಸ್ಪರ ಪ್ರೇಮಿಸೋಕೆ ಶುರು ಮಾಡಿದ್ದು ತೆಲುಗು ಸಿನಿಮಾವೊಂದರಿಂದ ಎಂದು ಹೇಳಲಾಗುತ್ತಿದೆ.
Advertisement
ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೊತೆಯಾಗಿ ತೆಲುಗಿನ ‘ಎವರು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಇನ್ನೂ ಬಿಡುಗಡೆ ಆಗಬೇಕಿದೆ. ಈ ಸಿನಿಮಾದಲ್ಲೇ ಇವರಿಬ್ಬರೂ ಪರಸ್ಪರ ಅರ್ಥ ಮಾಡಿಕೊಂಡರು ಎಂದು ಹೇಳಲಾಗುತ್ತಿದೆ. ಅಲ್ಲದೇ, ಗೆಳೆತನ ಗಟ್ಟಿಯಾಗಿ ಆ ನಂತರವಷ್ಟೇ ಮದುವೆ ಆಗುವ ನಿರ್ಧಾರವನ್ನು ತಗೆದುಕೊಂಡಿದ್ದಾರೆ ಎನ್ನುತ್ತಾರೆ ಆಪ್ತರು. ಮದುವೆ ಕುರಿತಾಗಿ ಇಷ್ಟೊಂದು ಸುದ್ದಿಯಾದರೂ, ವಸಿಷ್ಠ ಆಗಲಿ ಅಥವಾ ಹರಿಪ್ರಿಯಾ ಆಗಲಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಸಾಹಸ ಸಿಂಹ ವಿಷ್ಣುವರ್ಧನ್ ಮನೆ ಗೃಹಪ್ರವೇಶ: ನಾನಾ ಗಣ್ಯರು ಭಾಗಿ
Advertisement
Advertisement
ಮೊನ್ನೆಯಷ್ಟೇ ನಟಿ ಹರಿಪ್ರಿಯಾಗೆ ಮೂಗು ಚುಚ್ಚಿಸಿಕೊಂಡಿದ್ದರು. ಆ ಎಕ್ಸಿಪೀರಿಯನ್ಸ್ ಕೂಡ ಹಂಚಿಕೊಂಡಿದ್ದರು. ಸಡನ್ನಾಗಿ ಹರಿಪ್ರಿಯಾ ಮೂಗು ಚುಚ್ಚಿಕೊಳ್ಳಲು ಕಾರಣವೇನು ಎನ್ನುವ ಪ್ರಶ್ನೆ ಕೂಡ ಮೂಡಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ಸದ್ಯದಲ್ಲೇ ಹರಿಪ್ರಿಯಾ ಮದುವೆ ಆಗುತ್ತಿದ್ದು, ಮದುವೆಯ ಮುನ್ನ ಹೊಸ ಜೀವನಕ್ಕೆ ಕಾಲಿಡುತ್ತಿರುವ ಹುಡುಗನೇ ಹರಿಪ್ರಿಯಾಗೆ ಮೂಗು ಚುಚ್ಚಿಸಿದ್ದಾರೆ. ಆ ಹುಡುಗ ಬೇರೆ ಯಾರೂ ಅಲ್ಲ, ನಟ ವಸಿಷ್ಠ ಸಿಂಹ ಎನ್ನುವುದು ವಿಶೇಷ.
Advertisement
ಮೂಗು ಚುಚ್ಚಿಸಿಕೊಂಡ ವಿಡಿಯೋದಲ್ಲಿ ವಸಿಷ್ಠ ಸಿಂಹ ಕೂಡ ಇದ್ದು, ಅವರೇ ಮುಂದೆ ನಿಂತು ತನ್ನ ಹುಡುಗಿಗೆ ಮೂಗು ಚುಚ್ಚಿಸಿದ್ದಾರೆ. ವಿಡಿಯೋ ಹಂಚಿಕೊಂಡ ಸಂದರ್ಭದಲ್ಲಿ ಆ ಹುಡುಗ ಯಾರು ಎಂದು ಗೊತ್ತಾಗಿರಲಿಲ್ಲ. ಇಬ್ಬರ ಮದುವೆ ವಿಚಾರ ಹೊರಬೀಳುತ್ತಿದ್ದಂತೆಯೇ ವಿಡಿಯೋದಲ್ಲಿ ವಸಿಷ್ಠ ಇರುವುದನ್ನು ಪತ್ತೆ ಮಾಡಲಾಗಿದೆ. ಆ ವಿಡಿಯೋ ಮತ್ತೆ ಈಗ ವೈರಲ್ ಕೂಡ ಆಗಿದೆ.