ಭೂಪಾಲ್: ಮಧ್ಯಪ್ರದೇಶದ ಗ್ರಾಮವೊಂದರಲ್ಲಿ 400 ವರ್ಷಗಳಿಂದ ಹೆರಿಗೆಯೇ ಆಗಿಲ್ಲ. ಹೆರಿಗೆ ಆಗದೇ ಇರಲು ದೇವಿಯ ಶಾಪ ಕಾರಣವಂತೆ!
ಮಧ್ಯಪ್ರದೇಶದ ರಾಜ್ಗಡ್ ಜಿಲ್ಲೆಯಲ್ಲಿರುವ ಶಂಕ ಸ್ಯಾಮ್ ಜಿ ಗ್ರಾಮದಲ್ಲಿ ಹೆರಿಗೆ ಆಗುತ್ತಿಲ್ಲ. ಗ್ರಾಮಕ್ಕೆ ದೇವಿಯ ಶಾಪವಿದ್ದು, ಹೆರಿಗೆಯಾದರೆ ತಾಯಿ ಇಲ್ಲವೇ ಮಗು ಸಾವನ್ನಪ್ಪುತ್ತಾರೆ ಅಥವಾ ಮಗು ಕುರುಪಿಯಾಗಿ ಜನಿಸುತ್ತದೆ ಎನ್ನುವ ಮೂಢನಂಬಿಕೆ ಇವರಲ್ಲಿ ಇರುವ ಕಾರಣ ಹೆರಿಗೆ ಆಗುತ್ತಿಲ್ಲ.
Advertisement
ಮೂಢನಂಬಿಕೆಗೆ ಹೆದರಿ ತಮ್ಮ ಹೆರಿಗೆ ಸರಳವಾಗಿ ಆಗಲಿ ಎಂದು ಇಲ್ಲಿನ ಬಾಣಂತಿಯರು ಡೆಲಿವರಿ ಸಮಯ ಬಂದಾಗ ಬೇರೊಂದು ಪ್ರದೇಶಕ್ಕೆ ಹೋಗುತ್ತಾರೆ.
Advertisement
“90% ರಷ್ಟು ಹೆರಿಗೆಯು ಆಸ್ಪತ್ರೆಯಲ್ಲಿ ಆಗುತ್ತವೆ. ಇನ್ನು ಉಳಿದಂತೆ ಕೆಲವು ಹೆರಿಗೆಗಳು ಗ್ರಾಮದ ಹೊರವಲಯದಲ್ಲಿ ಆಗುತ್ತವೆ'” ಎಂದು ಗ್ರಾಮದ ಮುಖ್ಯಸ್ಥ ನರೇಂದ್ರ ಗುರ್ಜಾಲ್ ಹೇಳುತ್ತಾರೆ.
Advertisement
ಯಾಕೆ ಈ ನಂಬಿಕೆ ಬಂದಿದೆ ಎಂದು ಕೇಳಿದ್ದಕ್ಕೆ, ಸುಮಾರು 16ನೇ ಶತಮಾನದಲ್ಲಿ ಇಲ್ಲಿ ದೇವಸ್ಥಾನವೊಂದು ನಿರ್ಮಾವಾಗುತ್ತಿತ್ತು. ಈ ವೇಳೆ ಮಹಿಳೆಯೊಬ್ಬಳು ನಿರ್ಮಾಣ ಕಾರ್ಯಕ್ಕೆ ಅಡ್ಡಿ ಪಡಿಸಿದಳು. ಹೀಗಾಗಿ, ದೇವಸ್ಥಾನ ನಿರ್ಮಾಣ ಕಾರ್ಯ ನಿಂತುಹೋಯಿತು. ಇದರಿಂದ ಕೋಪಗೊಂಡ ದೇವತೆಯರು ಈ ಗ್ರಾಮದಲ್ಲಿ ಮಹಿಳೆಯರು ಜನ್ಮ ನೀಡದಂತಾಗಲಿ ಎಂದು ಶಾಪ ಹಾಕಿದರಂತೆ. ಇದು ನಮ್ಮ ಪೂರ್ವಿಕರ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದು ಅವರು ಕಥೆ ಹೇಳಿದ್ದಾರೆ.
Advertisement
ಇಂದಿಗೂ ಇಲ್ಲಿನ ಜನರು ಇದೇ ನಂಬಿಕೆಯಲ್ಲಿ ಬದುಕುತ್ತಿದ್ದಾರೆ. ಹೀಗಾಗಿ, 400 ವರ್ಷಗಳಿಂದಲೂ ಯಾವುದೇ ಮಹಿಳೆಯೂ ಇಲ್ಲಿ ಮಗುವಿಗೆ ಜನ್ಮ ನೀಡಿಲ್ಲ. ಒಂದು ವೇಳೆ ಮಗುವಿಗೆ ಜನ್ಮ ನೀಡಿದರೆ ಮಗು ಕುರುಪಿಯಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಗ್ರಾಮದ ಹೊರಗೆ ಒಂದು ಕೊಠಡಿಯನ್ನು ನಿರ್ಮಾಣ ಮಾಡಲಾಗಿದೆ. ಕೆಲವೊಮ್ಮೆ ಅಲ್ಲಿಯೇ ಹೆರಿಗೆ ಮಾಡಲಾಗುತ್ತದೆ.