ಅಂದುಕೊಂಡಂತೆ ನಡೆದಿದ್ದರೆ ನರ್ತನ್ ನಿರ್ದೇಶನದ ಸಿನಿಮಾದಲ್ಲಿ ಯಶ್ (Yash) ನಟಿಸಬೇಕಿತ್ತು. ಎಲ್ಲವೂ ಒಪ್ಪಿತವಾಗಿದ್ದರೆ ಚಿತ್ರೀಕರಣವೂ ನಡೆದಿರುತ್ತಿತ್ತು. ಆದರೆ, ಈ ಪ್ರಾಜೆಕ್ಟ್ ನಿಂತಿ ಹೋಯಿತು. ಒಂದೂವರೆ ವರ್ಷದಿಂದ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದ ನರ್ತನ್, ಯಾಕೆ ಈ ಸಿನಿಮಾ ಮಾಡಲಿಲ್ಲ ಎನ್ನುವ ಕುತೂಹಲ ಎಲ್ಲರದ್ದಾಗಿತ್ತು. ಈ ಕುರಿತು ಸ್ವತಃ ನರ್ತನ್ ಮಾತನಾಡಿದ್ದಾರೆ.
Advertisement
ಇಂದು ನರ್ತನ್ ನಿರ್ದೇಶನದ ಭೈರತಿ ರಣಗಲ್ ಸಿನಿಮಾದ ಮುಹೂರ್ತ ನಡೆಯಿತು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ನಾನು ಮಾಡಿದ್ದ ಕಥೆಯು ಬೇರೊಂದು ಸಿನಿಮಾದ ಕಥೆಯನ್ನು ಹೋಲುತ್ತಿತ್ತು. ಹಾಗಾಗಿ ಯಶ್ ಅವರು ಈ ಸಿನಿಮಾವನ್ನು ಮಾಡುವುದು ಬೇಡ ಎಂದರು. ಇದರ ಹೊರತಾಗಿ ಬೇರೆ ಯಾವುದೇ ಕಾರಣವಿಲ್ಲ’ ಎಂದಿದ್ದಾರೆ. ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಹೊಯ್ಸಳ’ ಬಲಿ- ಫ್ಯಾನ್ಸ್ಗೆ ಸಿಕ್ತು ಸಿಹಿಸುದ್ದಿ
Advertisement
Advertisement
ಸದ್ಯ ನರ್ತನ್ ನಿರ್ದೇಶನದ ಭೈರತಿ ರಣಗಲ್ ಸಿನಿಮಾ ಮುಹೂರ್ತವಾಗಿದೆ. ಗೀತಾ ಪಿಕ್ಚರ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ 2ನೇ ಸಿನಿಮಾವಿದು. ಶಿವರಾಜ್ ಕುಮಾರ್ (Shivraj Kumar) ಮತ್ತು ನಿರ್ದೇಶಕ ನರ್ತನ್ (Narthan) ಈ ಸಿನಿಮಾದ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಐದು ವರ್ಷಗಳ ನಂತರ ಮಫ್ತಿ (Mufti) ಸಿನಿಮಾದ ಭೈರತಿ ರಣಗಲ್ (Bhairati Rangal) ಪಾತ್ರದ ಹಿನ್ನೆಲೆಯನ್ನು ಈ ಚಿತ್ರದಲ್ಲಿ ಬಿಚ್ಚಿಡಲಿದ್ದಾರೆ. ಹಾಗಾಗಿ ಇದು ಮಫ್ತಿ ಸಿನಿಮಾದ ಸೀಕ್ವೆಲ್ ಅಲ್ಲ, ಪ್ರೀಕ್ವೆಲ್ ಸಿನಿಮಾ ಎನ್ನಲಾಗುತ್ತಿದೆ. ಭೈರತಿ ರಣಗಲ್ ನ ರೋಚಕ ಸಂಗತಿಗಳನ್ನು ಈ ಸಿನಿಮಾದಲ್ಲಿ ತೋರಿಸಲಿದ್ದಾರಂತೆ ನಿರ್ದೇಶಕರು.
Advertisement
ಮಫ್ತಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಮೂಡಿಸಿದ್ದ ನಿರ್ದೇಶಕ ನರ್ತನ್, ಆ ನಂತರ ಯಶ್ ಗಾಗಿ ಅವರು ಸಿನಿಮಾ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಬರೋಬ್ಬರಿ ಎರಡ್ಮೂರು ವರ್ಷಗಳ ಕಾಲ ಯಶ್ ಹಿಂದೆ ಸುತ್ತಿದರು ನರ್ತನ್. ಒಂದು ವರ್ಷಕ್ಕೂ ಹೆಚ್ಚು ಕಾಲ ಕೂತು ಯಶ್ ಗಾಗಿ ಕಥೆ ಬರೆದರು. ಆನಂತರ ಆ ಸಿನಿಮಾ ಆಗಲಿಲ್ಲ. ನಾನಾ ಕಾರಣಗಳಿಂದಾಗಿ ಯಶ್ ಗಾಗಿ ನರ್ತನ್ ಸಿನಿಮಾ ಮಾಡುವುದಿಲ್ಲ ಎನ್ನುವ ವಿಷಯ ಹೊರಬಿತ್ತು.
ಶಿವರಾಜ್ ಕುಮಾರ್ ವೃತ್ತಿ ಬದುಕಿನಲ್ಲಿ ಮಫ್ತಿ ಕೂಡ ಒಂದೊಳ್ಳೆ ಸಿನಿಮಾದ ಯಾದಿಯಲ್ಲಿದೆ. ಹಾಗಾಗಿ ತಮ್ಮದೇ ಬ್ಯಾನರ್ ಸಿನಿಮಾದಲ್ಲಿ ನರ್ತನ್ ಗೆ ಅವಕಾಶ ನೀಡಿದ್ದಾರೆ ಶಿವಣ್ಣ. ಈ ಸಿನಿಮಾಗೆ ‘ಭೈರತಿ ರಣಗಲ್’ ಎಂದು ಹೆಸರಿಟ್ಟಿದ್ದಾರೆ. ಮಫ್ತಿಯಲ್ಲಿ ಶಿವರಾಜ್ ಕುಮಾರ್ ಮಾಡಿದ್ದ ಪಾತ್ರದ ಹೆಸರು ಇದಾಗಿದೆ. ಈ ಸಿನಿಮಾ ಕುರಿತು ಗೀತಾ ಪಕ್ಚರ್ಸ್ ಹಲವು ಮಾಹಿತಿಗಳನ್ನು ಹಂಚಿಕೊಂಡಿದೆ.