ತ್ರಿಶಾ ಕೃಷ್ಣನ್ (Trisha Krishnan) ಸದ್ಯ ದಕ್ಷಿದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 40 ವರ್ಷದ ಈ ಸುಂದರಿಗೆ ಟಾಪ್ ಹೀರೋಗಳ ಜೊತೆ ನಟಿಸಲು ಭಾರೀ ಬೇಡಿಕೆ ಇದೆ. ಹೀಗಿರುವಾಗ ಬಾಲಿವುಡ್ ಚಿತ್ರಗಳಲ್ಲಿ ಯಾಕೆ ನಟಿಸಲ್ಲ ಎಂದು ತ್ರಿಶಾ ತಿಳಿಸಿದ್ದಾರೆ. ಇದನ್ನೂ ಓದಿ:ಮಂಜುನಾಥನ ಸನ್ನಿಧಿಯಲ್ಲಿ ನೆರವೇರಿತು ‘ಗಾಡ್ ಪ್ರಾಮಿಸ್’ ಚಿತ್ರದ ಸ್ಕ್ರೀಪ್ಟ್ ಪೂಜೆ
Advertisement
‘ಪೊನ್ನಿಯನ್ ಸೆಲ್ವನ್’ ಚಿತ್ರದ ಸಕ್ಸಸ್ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ತ್ರಿಶಾ ತೊಡಗಿಸಿಕೊಂಡಿದ್ದಾರೆ. ಇದೀಗ ಸೌತ್‌ನ ಸಾಕಷ್ಟು ನಟಿಯರು ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ತ್ರಿಶಾ ಈಗಾಗಲೇ ಒಂದು ಹಿಂದಿ ಸಿನಿಮಾದಲ್ಲಿ ನಟಿಸಿದ್ದಾರೆ. ಅದಾದ ನಂತರ ಅವರು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ.
Advertisement
ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಖಟ್ಟಾ ಮಿಟ್ಟಾ’ ಸಿನಿಮಾ ನಂತರ ನಾನು ಹಿಂದಿ ಚಿತ್ರದಲ್ಲಿ ನಟಿಸಲಿಲ್ಲ. ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಿತ್ತು. ಆದರೆ ಆ ಚಿತ್ರ ಸಕ್ಸಸ್ ಕಾಣದೇ ಹೀನಾಯವಾಗಿ ಸೋತಿತ್ತು. ಹಿಂದಿ ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಪಡೆಯೋದ್ರಲ್ಲಿ ನಾನು ಸೋತೆ ಎಂದಿದ್ದಾರೆ. ಹಾಗಾಗಿ ಅದೇ ನನ್ನ ಮೊದಲ ಮತ್ತು ಕೊನೆಯ ಚಿತ್ರವಾಗಿದೆ. ಹಾಗಾಗಿ ನಾನು ಬಾಲಿವುಡ್‌ನಲ್ಲಿ ಸಿನಿಮಾ ಮಾಡುವುದು ಬಿಟ್ಟೆ ಎಂದು ತ್ರಿಶಾ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
Advertisement
Advertisement
ಸದ್ಯ ‘ವಿಶ್ವಾಂಭರ’ (Vishwambara) ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿಗೆ (Megastar Chiranjeevi) ತ್ರಿಶಾ ನಾಯಕಿಯಾಗಿದ್ದಾರೆ. ಚಿತ್ರೀಕರಣ ಭರದಿಂದ ಸಾಗುತ್ತಿದೆ.