Wednesday, 18th July 2018

Recent News

ಈ ಯುವತಿಯ ಫೋಟೋಗೆ ಹುಡಗರು ಫಿದಾ-ಇಲ್ಲಿದೆ ಫೋಟೋವಿನ ಅಸಲಿ ಸತ್ಯ

ಬೀಜಿಂಗ್: ಇತ್ತೀಚಿಗೆ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯ ಫೋಟೋವೊಂದು ವೈರಲ್ ಆಗಿದ್ದು, ಸಾಕಷ್ಟು ಪಡ್ಡೆ ಹುಡುಗರು ಈಕೆಯ ಸೌಂದರ್ಯಕ್ಕೆ ಮನಸೋತಿದ್ದಾರೆ.

ಈ ಫೋಟೋದಲ್ಲಿ ಕಾಣುವುದು ಮಹಿಳೆ ಅಲ್ಲ. ಅಸಲಿಗೆ ಅದೊಂದು ಸುಂದರವಾದ ಗೊಂಬೆಯ ಫೋಟೋ ಆಗಿದೆ. ಮನುಷ್ಯರಂತೆ ಹೋಲಿಕೆಯ ಹಾಗೆ ಗೊಂಬೆಯನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ.

ವಿದೇಶಗಳಲ್ಲಿ ಈ ಗೊಂಬೆಗಳು ಸಾಕಷ್ಟು ಪ್ರಸಿದ್ಧಿ ಹೊಂದಿದ್ದು, ಮಾರುಕಟ್ಟೆಯಲ್ಲಿಯೂ ಸಹ ಅತಿ ಬೇಡಿಕೆಯನ್ನು ಹೊಂದಿವೆ. ಈ ವಿಶೇಷ ಮಹಿಳೆ ಮಾದರಿ ಗೊಂಬೆಗಳಿಗೆ ಸೆಕ್ಸ್ ಡಾಲ್ ಎಂದು ಸಹ ಕರೆಯಲಾಗುತ್ತದೆ. ಇನ್ನೂ ಈ ಗೊಂಬೆಗಳ ತಯಾರಿಕೆಯ ಬಗ್ಗೆಯೂ ವಿಶೇಷ ತರಬೇತಿಯ ಶಾಲೆಗಳನ್ನು ನಾವು ವಿದೇಶಗಳಲ್ಲಿ ಕಾಣಬಹುದಾಗಿದೆ. ಗೊಂಬೆಗಳ ತಯಾರಿಕೆಯಲ್ಲಿ ವಿಶೇಷ ರೋಬೋಟಿಕ್ ತಂತ್ರಜ್ಞಾನ ಬಳಸಲಾಗಿರುತ್ತದೆ.

ಚೀನಾ ಗೊಂಬೆ: ಈ ರೀತಿಯ ಸೆಕ್ಸ್ ಡಾಲ್‍ಗಳನ್ನು ತಯಾರಿಸುವಲ್ಲಿ ಚೀನಿಯರು ನುರಿತರಾಗಿದ್ದಾರೆ. ಚೀನಾದ `ಎಕ್ಸ್ ಡಾಲ್ ಕಂಪನಿ’ ಇಂತಹ ಗೊಂಬೆಗಳನ್ನು ತಯಾರಿಸುವಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಎಕ್ಸ್ ಕಂಪನಿ ತನ್ನ ಗೊಂಬೆಗಳಿಗೆ DS Doll Robotic Head ಎಂದು ಹೆಸರಿನಿಂದ ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ಈ ಗೊಂಬೆಗಳ ಜೊತೆ ನಾವುಗಳು ಮಾತನಾಡಬಹುದು ಮತ್ತು ಹಾಡನ್ನು ಹಾಡಬಹುದು.

Leave a Reply

Your email address will not be published. Required fields are marked *