ಬೆಂಗಳೂರು: ಈ ಸರ್ಕಾರದಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣ ಜಾಸ್ತಿ ಆಗಿದೆ. ಇದು ದಲಿತರನ್ನು ರಕ್ಷಿಸದ ಸರ್ಕಾರ ಎಂದು ವಿಧಾನಪರಿಷತ್ತಿನ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆರೋಪಿಸಿದ್ದಾರೆ.
ಬಿಜೆಪಿ (BJP) ಕಚೇರಿಯಲ್ಲಿ ಮಾತಾಡಿದ ಅವರು, ದಲಿತರ ಮೇಲೆ ದೌರ್ಜನ್ಯ, ಜಾತಿ ನಿಂದನೆ ಹೆಚ್ಚಿದೆ. ದಲಿತರ ರಕ್ಷಣೆಗೆ ಸರ್ಕಾರ ಬಂದಿಲ್ಲ. ದೇವದುರ್ಗ ದಲಿತ ಅನ್ನೋ ಕಾರಣಕ್ಕೆ ಕಂಬಕ್ಕೆ ಕಟ್ಟಿ ಹೊಡೆದಿದ್ದಾರೆ. ಅತ್ಯಾಚಾರ ಕೊಲೆ ಮಾಡುತ್ತಿದ್ದಾರೆ. ಗೃಹ ಇಲಾಖೆ ಕಣ್ಣು ಮುಚ್ಚಿ ಕೂತಿದೆ. ದಲಿತರ ರಕ್ಷಿಸದ ಸರ್ಕಾರ ಏನೂ ಮಾಡುತ್ತಿಲ್ಲ. ಗೃಹ ಸಚಿವರು ಬೆಳಗಾದರೆ ಆರ್‌ಎಸ್‌ಎಸ್ ಸಚಿವರಾಗಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: 66 ಬಾರಿ ಶೂಟೌಟ್ ಆಗಿದೆ – ನಮ್ಮ ಅಧಿಕಾರಿಗಳದ್ದೇ ತಪ್ಪಿದ್ರೆ ಶಿಸ್ತುಕ್ರಮ ಗ್ಯಾರಂಟಿ: ರಾಮಲಿಂಗಾರೆಡ್ಡಿ
ಕಾಶಪ್ಪನವರ್ ವಿರುದ್ಧ ಕ್ರಮ ಆಗಬೇಕು. ಬೀದಿ ಕಾಮಣ್ಣನ ರೀತಿ ಆಡಿದ ಸಚಿವ ಕಾಶಪ್ಪನವರ್ ಮೋದಿ ಬಗ್ಗೆ ಮಾತನಾಡುತ್ತಾರೆ. ಮೋದಿ ದೇಶವನ್ನು ಹೊಲಗೇರಿ ಮಾಡಿದ್ದಾರೆ ಎಂದು ಹೀಯಾಳಿಸಿದ್ದಾರೆ. ಅಟ್ರಾಸಿಟಿ ಕೇಸ್ ಆದರೂ ಅವರನ್ನು ಬಂಧಿಸಿಲ್ಲ. ಎಫ್‌ಐಆರ್ ಅಗಿಲ್ಲ. ಇದನ್ನು ಸದನದಲ್ಲಿ ಸಿಎಂ ಮುಂದೆ ಪ್ರಸ್ತಾಪ ಮಾಡಿದ್ದೇವೆ ಎಂದರು.
ಖರ್ಗೆ ಅವರು ಭಾಷಣ ಮಾಡಿದ ಸ್ಥಳ ಸ್ವಚ್ಛಗೊಳಿಸಿದ್ದು ಖಂಡಿಸುತ್ತೇವೆ. ಅದನ್ನು ಬಿಜೆಪಿ ಮಾಡಿಲ್ಲ ಎಂದು ಹೇಳಿದರು. ಕೂಡಲೇ ಕಾಶಪ್ಪನವರ್ ಅನ್ನು ಬಂಧನ ಮಾಡಬೇಕು ಅಂತ ಆಗ್ರಹಿಸಿದರು.

