ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಜೋಡಿ ಪ್ರೀತಿ ಬಲೆಗೆ ಸಿಲುಕಿದ ಮೇಲೆ ಪ್ರಪ್ರಥಮ ಬಾರಿಗೆ ಜಾಹೀರಾತು ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಹಲವು ವರ್ಷಗಳಿಂದ ಅನುಷ್ಕಾ ಮತ್ತು ವಿರಾಟ್ ಪ್ರೀತಿಯಲ್ಲಿದ್ದಾರೆ ಅಂತ ಹೇಳಲಾಗುತ್ತಿದೆ. ಆದರೆ ಇಲ್ಲಿಯವರೆಗೂ ಇವರಿಬ್ಬರ ಪ್ರೀತಿ ಪ್ರೇಮದ ಬಗ್ಗೆ ಬಾಯ್ಬಿಟ್ಟಿರಲಿಲ್ಲ. ಇದೀಗ ಫಸ್ಟ್ ಟೈಂ ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡು ಮದುವೆ ಹತ್ತಿರದಲ್ಲೇ ಇರುವ ಸೂಚನೆ ಕೊಟ್ಟಿದೆ.
ಈ ಜಾಹೀರಾತಿನಲ್ಲಿ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸುವ ಈ ಜೋಡಿ ವಧು-ವರರು ಮಾತನಾಡಿಕೊಳ್ಳುತ್ತಿರುವ ಶೈಲಿಯನ್ನ ಕಾಮಿಕ್ ಆಗಿ ಪ್ರಸ್ತುತಪಡಿಸಿದ್ದಾರೆ. ತಿಂಗಳಲ್ಲಿ 15 ದಿನ ವಿರಾಟ್ ಅಡುಗೆ ಮಾಡೋದಾಗಿ ಒಪ್ಪಿಕೊಂಡರೆ ಯಾವುದೇ ಕಂಪ್ಲೇಂಟ್ ಇಲ್ಲದೆ ಅನುಷ್ಕಾ ಸೇವಿಸೋದಾಗಿ ಹೇಳಿದ್ದಾರೆ. ಇನ್ನು ವಿರಾಟ್ ಅನುಷ್ಕಾರನ್ನ ಯಾವುತ್ತೂ ಕೈಹಿಡಿದು ಕಾಪಾಡೋದಾಗಿ ಹೇಳಿರುವ ಮಾತು ಇವರಿಬ್ಬರ ಪ್ರೀತಿ ಪ್ರೇಮವನ್ನ ಸಾರಿ ಸಾರಿ ಹೇಳುತ್ತಿದೆ.
https://www.youtube.com/watch?v=I8q-pPwQ0h4