ಬರೋಬ್ಬರಿ 10 ಲಕ್ಷಕ್ಕೆ ಮಾರಾಟವಾಯ್ತು ಹೋರಿ

Public TV
1 Min Read
hvr bull copy

ಹಾವೇರಿ: ಸಾಮಾನ್ಯವಾಗಿ ಹೋರಿಗಳನ್ನ ಒಂದು ಲಕ್ಷ ಎರಡು ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡೋದನ್ನ ನೋಡಿದ್ದೇವೆ. ಆದರೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕು ಖುರ್ದಕೋಡಿಹಳ್ಳಿಯ ಕೊಬ್ಬರಿ ಹೋರಿ ಬರೋಬ್ಬರಿ 10 ಲಕ್ಷ ಒಂದು ಸಾವಿರಕ್ಕೆ ಮಾರಾಟವಾಗಿದೆ. ಗ್ರಾಮದ ರೇವಣಸಿದ್ದಪ್ಪ ಮಾತನವರ್ ಎಂಬವರಿಗೆ ಸೇರಿದ ಹೋರಿ ಇದಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಆಂಧ್ರ ಪ್ರದೇಶದಲ್ಲಿ ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿದ್ದರು.

ಹೋರಿಯ ವಿಶೇಷತೆ:
ಅಮರಾವತಿ ತಳಿಯ ಹೋರಿಯಾಗಿದ್ದು ದಷ್ಟ-ಪುಷ್ಟವಾಗಿರುತ್ತದೆ. ಹೋರಿ ಓಡುವ ಸ್ವರ್ಧೆಯಲ್ಲಿ ಧೈರ್ಯದಿಂದ ಓಡುವ ಹೋರಿ ಇದಾಗಿದೆ. ಅಖಾಡದಲ್ಲಿ 8 ರಿಂದ 10 ಸೆಕೆಂಡ್ ಗಳಲ್ಲಿ 250 ಮೀಟರ್ ಓಡುತ್ತದೆ. ಯಾರ ಕೈಯಿಂದ ಮೈಮುಟ್ಟಿಸಿಕೊಳ್ಳುವುದಿಲ್ಲ.

HVR HORI SALE AV copy

ತಮಿಳುನಾಡಿನ ವೆಲ್ಲಂಪಾಡಿಯ ರೈತ ಸೆಲ್ವಂ ಬರೋಬ್ಬರಿ 10 ಲಕ್ಷ ಒಂದು ಸಾವಿರ ರುಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. ಜಲ್ಲಿಕಟ್ಟು ಮಾದರಿ ಸ್ಪರ್ಧೆಗೆ ಹೇಳಿ ಮಾಡಿಸಿದ ಹೋರಿ ಇದಾಗಿದೆ. ರಾಜ್ಯ ಸೇರಿದಂತೆ ನಾನಾಭಾಗದಲ್ಲಿ ಸ್ಪರ್ಧೆ ಮಾಡಿದ ಈ ಹೋರಿ ಹಲವು ಬಹುಮಾನಗಳು ತನ್ನದಾಗಿಸಿಕೊಂಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *