ನವದೆಹಲಿ: ಹೆಣ್ಣು ಮಗು ಹುಟ್ಟಿತೆಂದರೆ ಆ ಮಗುವನ್ನ ನಿರ್ಲಕ್ಷ್ಯದಿಂದ ಕಾಣುವ ಸ್ಥಿತಿ ಈಗಲೂ ಇದೆ ಅನ್ನೋದನ್ನ ಅಲ್ಲಗಳೆಯಲು ಆಗಲ್ಲ. ಇದರ ಮಧ್ಯೆ ಇಲ್ಲೊಬ್ಬ ಯುವತಿ ತನ್ನ ತಂದೆಯ ಪ್ರಾಣವನ್ನೇ ಉಳಿಸಿ ಹೋರೋ ಮಗಳು ಎನಿಸಿಕೊಂಡಿದ್ದಾರೆ.
ಪೂಜಾ ಬಿಜಾರ್ನಿಯಾ ಎಂಬ ಯುವತಿ ಲಿವರ್ ಕಸಿಗೆ ಒಳಗಾಗಿ ತನ್ನ ತಂದೆಗೆ ಮರುಜೀವ ನೀಡಿದ್ದಾರೆ. ಈ ಮೂಲಕ ಆಕೆ ಅಪ್ಪ ಮಗಳ ಸಂಬಂಧವನ್ನ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಈ ಯುವತಿಯ ಧೈರ್ಯವನ್ನು ಮೆಚ್ಚಿ ಈಕೆ ನಿಜಜೀವನದ ಹೀರೋ ಎಂದು ವೈದ್ಯರೊಬ್ಬರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋ ಹಾಕಿ ತಿಳಿಸಿದ್ದಾರೆ.
Advertisement
Advertisement
ಪೂಜಾ ಬಿಜಾರ್ನಿಯಾ ತನ್ನ ತಂದೆಗೆ ಲಿವರ್ ದಾನ ಮಾಡಿ ಅವರನ್ನು ಬದುಕಿಸಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ನಂತರ ಚೇತರಿಸಿಕೊಂಡ ಅಪ್ಪ-ಮಗಳ ಫೋಟೋವನ್ನು ಡಾ. ರಚಿತ್ ಭೂಷಣ್ ಶ್ರೀವಾಸ್ತವ ಫೇಸ್‍ಬುಕ್‍ನಲ್ಲಿ ಹಾಕಿದ್ದರು. ಅದನ್ನು ಸುಮಾರು 11 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಅಷ್ಟೇ ಅಲ್ಲದೇ 10 ಸಾವಿರಕ್ಕೂ ಹೆಚ್ಚು ಜನರು ಶೇರ್ ಕೂಡ ಮಾಡಿದ್ದಾರೆ.
Advertisement
ಡಾ. ರಚಿತ್ ಅವರು ಆ ಫೋಟೋ ಕೆಳಗೆ ಮನಮುಟ್ಟುವ ಅಡಿಬರಹವನ್ನು ಪ್ರಕಟಿಸಿದ್ದಾರೆ. “ಕೆಲವು ನಿಜ ಜೀವನದ ಹೀರೋಗಳಿರುತ್ತಾರೆ. ಅವರಿಗೆ ಭಯ, ಅದೃಷ್ಟ ಮತ್ತು ಅಸಾಧ್ಯ ಎಂಬ ಮಾತುಗಳಲ್ಲಿ ನಂಬಿಕೆ ಇರಲ್ಲ. ಹೆಣ್ಣೆಂದರೆ ಕೆಲಸಕ್ಕೆ ಬಾರದವರು ಎನ್ನುವವರಿಗೆ ಈ ಹುಡುಗಿಯೇ ಉತ್ತರ. ಲಿವರ್ ಕಸಿ ಮಾಡಿಸಿಕೊಂಡು ತನ್ನ ತಂದೆಯ ಜೀವ ಉಳಿಸಿದ ಈಕೆ ನನಗೆ ವೈಯಕ್ತಿಕವಾಗಿ ಪರಿಚಯವಿಲ್ಲದಿದ್ದರೂ, ಈಗ ನನಗೆ ಹೀರೋ ಆಗಿದ್ದಾಳೆ. ನಿನ್ನ ಬಗ್ಗೆ ಹೆಮ್ಮೆ ಇದೆ. ಈಕೆಯಂತವರಿಂದ ಕಲಿಯೋದು ಬಹಳ ಇದೆ. ದೇವರು ಒಳ್ಳೆಯದು ಮಾಡಲಿ” ಎಂದು ಬರೆದುಕೊಂಡಿದ್ದಾರೆ.
Advertisement