ಬೆಂಗಳೂರು: ರೋಹಿಣಿ ಸಿಂಧೂರಿಯ (Rohin Sindhuri) ಫೋಟೋ ಪ್ರಕಟ ಮಾಡಿದ್ದು ಕೇವಲ ಸ್ಯಾಂಪಲ್ ಅಷ್ಟೇ. ಅವರು ಕಳುಹಿಸಬಾರದಂತಹ ಫೋಟೋಗಳನ್ನು ಕೆಲ ಐಎಎಸ್ ಅಧಿಕಾರಿಗಳಿಗೆ (IAS Officer) ಕಳುಹಿಸಿದ್ದಾರೆ ಎಂದು ಐಪಿಎಸ್ ಅಧಿಕಾರಿ ರೂಪಾ (Roopa IPS) ಸ್ಫೋಟಕ ಆರೋಪ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ರೂಪಾ, ಐಎಎಸ್ ಜವಾಬ್ದಾರಿಯುತ ಹುದ್ದೆಯಾಗಿದೆ. ಹೀಗಿರುವಾಗ ಸ್ಪಾ, ತಲೆ ದಿಂಬಿನ ಫೋಟೋ ಕಳುಹಿಸುತ್ತಾರೆ ಅಂದರೆ ಏನು ಅರ್ಥ? ಒಂದು ತಿಂಗಳ ಹಿಂದೆ ನನಗೆ ಫೋಟೋ ಸಿಕ್ಕಿದ್ದು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ತನಿಖೆ ನಡೆಯುತ್ತದೆ. ಕ್ರಮ ಏನಾಗುತ್ತದೆ ಎಂದು ಕಾದು ನೋಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಮನುಷ್ಯತ್ವ ಇರೋರು ಜನ ಸಾಯುತ್ತಿದ್ದಾಗ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಳ್ತಾರಾ – ರೋಹಿಣಿ ವಿರುದ್ಧ ರೂಪಾ ಕಿಡಿ
Advertisement
Advertisement
ಗೌರವಾನ್ವಿತ ಶಾಸಕರ ಜೊತೆ ರೋಹಿಣಿ ಸಿಂಧೂರಿ ಸಂಧಾನಕ್ಕೆ ಹೋಗಿದ್ದಾರೆ ಎಂದರೆ ಏನು ಅರ್ಥ? ರೋಹಿಣಿ ಸಿಂಧೂರಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯ (ಸಿಎಟಿ) ಮೊರೆ ಹೋದಾಗ ಅದರ ಕರಡನ್ನು ಬರೆದುಕೊಟ್ಟವರು ನನ್ನ ಪತಿ. ಆರಂಭದಲ್ಲಿ ಇವರ ನಡವಳಿಕೆ ಹೇಗಿತ್ತು ಗೊತ್ತಿಲ್ಲ. ಸಂಧಾನ ವಿಷಯ ಬಂದಾಗ ಮೈ ಉರಿದು ಹೋಯ್ತು. ಜನ ಸಾಯುತ್ತಿದ್ದರೂ ತನ್ನ ಮೋಜಿಗೆ ಸ್ವಿಮ್ಮಿಂಗ್‍ಪೂಲ್ ಮಾಡಿಸಿಕೊಂಡರು ಅಂದರೆ ಏನರ್ಥ? ಆಕೆಗೆ ಮಾನವೀಯತೆ ಇದೆಯೇ ಎಂದು ನೇರವಾಗಿಯೇ ಪ್ರಶ್ನಿಸಿದರು. ಇದನ್ನೂ ಓದಿ: ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟು – ನಮ್ಮ ದೇಶ ದಿವಾಳಿಯಾಗಿದೆ ಎಂದ ರಕ್ಷಣಾ ಸಚಿವ
Advertisement
Advertisement
ನಾನು ನಮ್ಮ ಮನೆಯವರು ಸಾಕಷ್ಟು ಸಹಾಯ ಮಾಡಿದ್ದೇವೆ. ಆದರೆ ಬರ ಬರುತ್ತಾ ಆಕೆಯ ವರ್ತನೆ ಸರಿ ಇಲ್ಲ ಎನ್ನುವುದು ಗೊತ್ತಾಯಿತು. ಆಕೆ ಪ್ರೊಬೇಷನರಿ ಅವಧಿಯಲ್ಲಿದ್ದಾಗ ಜಿಲ್ಲಾಧಿಕಾರಿ ಹಾಗೂ ಅವರ ಪತ್ನಿಯ ಸಂಬಂಧ ಹಾಳಾಗಿದೆ. ಇದರ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದರು.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k
I don’t think the title of your article matches the content lol. Just kidding, mainly because I had some doubts after reading the article. https://www.binance.com/de-CH/register?ref=WTOZ531Y