Connect with us

Bollywood

ಶ್ರದ್ಧಾ ಕಪೂರ್ ಮೊದಲು ಈ ನಟಿಯನ್ನು ಸಾಹೋ ಚಿತ್ರಕ್ಕೆ ಆಫರ್ ಮಾಡಿದ್ರು!

Published

on

ಮುಂಬೈ: ಬಾಹುಬಲಿ-2 ಚಿತ್ರದ ನಂತರ ಪ್ರಭಾಸ್ ಅವರಿಗೆ ಅಭಿಮಾನಿಗಳು ಹೆಚ್ಚಾಗಿದ್ದಾರೆ. ದೇಶಾದ್ಯಂತ ಪ್ರಭಾಸ್ ಗೆ ಅಭಿಮಾನಿಗಳಿದ್ದು, ಎಲ್ಲರೂ ‘ಸಾಹೋ’ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.

ಈ ಚಿತ್ರದಲ್ಲಿ ನಾಯಕಿಯಾಗಿ ಶ್ರದ್ಧಾ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಶ್ರದ್ಧಾ ಆಯ್ಕೆಯಾಗುವ ಮೊದಲು ಕತ್ರಿನಾ ಕೈಫ್ ನಿಂದ ಅನುಷ್ಕಾ ಶೆಟ್ಟಿ ವರೆಗೂ ಎಲ್ಲರ ಹೆಸರು ಕೇಳಿ ಬಂದಿತ್ತು.

ವರದಿಯೊಂದರ ಪ್ರಕಾರ ಶ್ರದ್ಧಾ ಕಪೂರ್ ಮೊದಲು ಈ ಚಿತ್ರಕ್ಕಾಗಿ ಅಲಿಯಾ ಭಟ್ ಅವರನ್ನು ಕರೆ ತರಲು ಚಿತ್ರತಂಡ ಯೊಚಿಸಿತ್ತು. ಅವರನ್ನು ಅಪ್ರೋಚ್ ಕೂಡ ಮಾಡಿದ್ದರು. ಆದರೆ ಈ ಪಾತ್ರ ಮಾಡಲು ನಟಿ ಅಲಿಯಾ ಭಟ್ ಒಪ್ಪಲಿಲ್ಲ ಎಂದು ವರದಿವೊಂದು ತಿಳಿಸಿದೆ.

ಸದ್ಯ ಅಲಿಯಾ ಈಗ ಕರಣ್ ಜೋಹರ್ ನಿರ್ದೇಶನದ ‘ಬ್ರಹ್ಮಸ್ತ್ರ’ ಚಿತ್ರದಲ್ಲಿ ರಣ್‍ಬೀರ್ ಕಪೂರ್ ಜೊತೆ ನಟಿಸುತ್ತಿದ್ದಾರೆ. ಆ ಚಿತ್ರದ ನಂತರ ಮೇಘನಾ ಗುಲ್ ಝರ್ ಅವರ `ರಾಝಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಸಾಹೋ ಚಿತ್ರವನ್ನು ಸುಜೀತ್ ನಿರ್ದೇಶನ ಮಾಡುತ್ತಿದ್ದು, ಪ್ರಭಾಸ್, ಶ್ರದ್ಧಾ ಕಪೂರ್, ಅರುಣ್ ವಿಜಯ್, ನೀಲ್ ನಿತಿನ್ ಮುಕೇಶ್, ಜಾಕಿ ಶ್ರಾಫ್ ಹಾಗೂ ಲಾಲ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ತಮಿಳು, ತೆಲಗು ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಲಿದೆ.

Click to comment

Leave a Reply

Your email address will not be published. Required fields are marked *