ವಾಷಿಂಗ್ಟನ್: ಅಮೆರಿಕದ ನ್ಯೂಯಾರ್ಕ್ ನಿವಾಸಿಯಾಗಿರುವ 7 ವರ್ಷದ ಪೋರ ವಾರ್ಷಿಕವಾಗಿ ಬರೋಬ್ಬರಿ 155 ಕೋಟಿ ರೂಪಾಯಿ ಗಳಿಸುವ ಮೂಲಕ ವಿಶ್ವದ ಯೂಟ್ಯೂಬ್ ಸ್ಟಾರ್ 2018ರ ಫೋರ್ಬ್ಸ್ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದ್ದಾನೆ.
7 ವರ್ಷದ ರೇಯಾನ್ ಅತಿ ಹೆಚ್ಚು ಆದಾಯ ಪಡೆಯುವ ಜಗತ್ತಿನ ಅತಿ ಚಿಕ್ಕ ಯೂಟ್ಯೂಬ್ ಸ್ಟಾರ್ ಎಂದು ಖ್ಯಾತಿಯನ್ನು ಪಡೆದಿದ್ದಾನೆ. 2018ರ ಸಾಲಿನಲ್ಲಿ ಬರೋಬ್ಬರಿ 155 ಕೋಟಿ ರೂಪಾಯಿ ಆದಾಯ ಗಳಿಸುವ ಮೂಲಕ ವಿಶ್ವದ ನಂಬರ್ ಒನ್ ಯೂಟ್ಯೂಬ್ ಸ್ಟಾರ್ ಆಗಿ ಹೊರಹೊಮ್ಮಿದ್ದಾನೆ.
Advertisement
Advertisement
ರೇಯಾನ್ ಯಾರು?
ರೇಯಾನ್ ತನ್ನ ‘ರೇಯಾನ್ ಟಾಯ್ಸ್ ರಿವೀವ್’ ಯೂಟ್ಯೂಬ್ ಚಾನಲ್ ಮೂಲಕ ವಿಶ್ವ ಪ್ರಸಿದ್ಧಿಯಾಗಿದ್ದಾನೆ. 2015ರಲ್ಲ ಈ ಚಾನೆಲ್ ಅನ್ನು ಆರಂಭಿಸಿದ್ದ. ವಿಶ್ವದಾದ್ಯಂತ ಈತ ಸುಮಾರು 1.73 ಕೋಟಿ ಫಾಲೋವರ್ಸ್ ರನ್ನು ಹೊಂದಿದ್ದಾನೆ. ಅಲ್ಲದೇ ಫೋರ್ಬ್ಸ್ ಬಿಡುಗಡೆ ಮಾಡಿರುವ 2018 ಯೂಟ್ಯೂಬ್ ಸ್ಟಾರ್ ಪಟ್ಟಿಯಲ್ಲಿ ವಿಶ್ವದ ಗಣ್ಯಾತಿಗಣ್ಯರನ್ನೆಲ್ಲಾ ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಅಲ್ಲದೇ ಕಳೆದ ವರ್ಷ 71 ಕೋಟಿ ರೂಪಾಯಿ ಆದಾಯ ಗಳಿಸುವ ಮುಖಾಂತರ ಫೋರ್ಬ್ಸ್ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದುಕೊಂಡಿದ್ದ.
Advertisement
1.73 ಕೋಟಿ ಫಾಲೋವರ್ಸ್ ಹೊಂದಿರುವ ರೇಯಾನ್ ವಿಡಿಯೋವನ್ನು ಕೋಟ್ಯಂತರ ಮಂದಿ ವೀಕ್ಷಿಸುತ್ತಾರೆ. ಬಾಲಕ ಮನೆಯಲ್ಲಿಯೇ ಕುಳಿತು ವಿಡಿಯೋ ಮೂಲಕ ಆಟಿಕೆಗಳ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ವಿವರಿಸುತ್ತಾನೆ. ಇದನ್ನು ವಿಡಿಯೋ ಮಾಡುವ ಆತನ ತಂದೆ-ತಾಯಿಗಳು ಅದನ್ನು ಯೂಟ್ಯೂಬಿನಲ್ಲಿ ಅಪ್‍ಲೋಡ್ ಮಾಡುತ್ತಾರೆ.
Advertisement
ರೇಯಾನ್‍ನ ವಿಡಿಯೋಗಳನ್ನು ನೋಡುವವರು ಬಹುತೇಕ 3 ರಿಂದ 7 ವರ್ಷದ ಮಕ್ಕಳಾಗಿದ್ದಾರೆ. ಅಲ್ಲದೇ ಅತಿಹೆಚ್ಚು ಅಮೆರಿಕದ ಅಭಿಮಾನಿಗಳನ್ನು ಹೊಂದಿದ್ದಾನೆ. ಇದಲ್ಲದೇ ಬಾಲಕ ತನ್ನ ‘ರೇಯಾನ್ಸ್ ವರ್ಲ್ಡ್ಸ್’ ಎಂಬ ಹೆಸರಿನ ಮೂಲಕ ಮಕ್ಕಳ ಆಟಿಕೆ ಹಾಗೂ ಬಟ್ಟೆಗಳ ವ್ಯಾಪಾರವನ್ನು ಮಾಡುತ್ತಿದ್ದಾನೆ. ಈತ ತನ್ನ ಉತ್ಪನ್ನಗಳನ್ನು ಇ-ಕಾಮರ್ಸ್ ದಿಗ್ಗಜ ವಾಲ್‍ಮಾರ್ಟ್ ನಲ್ಲಿ ಮಾರಾಟ ಮಾಡುತ್ತಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv