ಪ್ರತಿನಿತ್ಯದ ಜೀವನದಲ್ಲಿ ಪಾದರಕ್ಷೆ ಎಷ್ಟು ಮುಖ್ಯ ಅಲ್ವಾ? ಪಾದರಕ್ಷೆಗಳಿಲ್ಲದೇ ಯಾರು ತಾನೇ ಮನೆಯಿಂದ ಹೊರಗಡೆ ಹೋಗುತ್ತಾರೆ? ಮುಖ್ಯವಾಗಿ ಮಹಿಳೆಯರು ಹೊಸ ಹೊಸ ವಿನ್ಯಾಸದ ಪಾದರಕ್ಷೆಗಳಿಗೆ ಮಾರು ಹೋಗುತ್ತಾರೆ. ಇವುಗಳು ನಮ್ಮ ಪಾದವನ್ನು ರಕ್ಷಿಸುವುದಲ್ಲದೇ ಸ್ಟೈಲಿಶ್ ಆಗಿ ಕಾಣಲು ಸಹಕಾರಿಯಾಗುತ್ತವೆ.
ಹೀಗಿರುವಾಗ ಹೆಣ್ಣು ಮಕ್ಕಳಲ್ಲಿ 5 ಜೊತೆ ಪಾದರಕ್ಷೆಗಳು ಇಲ್ಲದಿದ್ದರೆ ಹೇಗೆ? ಸ್ಟೈಲ್‌ನ ಡ್ರೆಸ್‌ಗಳಿಗೆ ತಕ್ಕಂತೆ ಪಾದುಕೆಗಳನ್ನು ಧರಿಸುವುದೂ ಮುಖ್ಯವಾಗುತ್ತದೆ. ಪ್ರತೀ ಹುಡುಗಿಯರೂ ಹೊಂದಿರಬೇಕಾದ 5 ರೀತಿಯ ಪಾದರಕ್ಷೆಗಳ ಪಟ್ಟಿ ಹೀಗಿದೆ.
Advertisement
ಹೀಲ್ಸ್:
ಫ್ಯಾಶನ್ ಪ್ರಿಯರ ಬಳಿ ಇರಲೇಬೇಕು ಹೀಲ್ಸ್. ಎತ್ತರ ಇರುವವರಿಗೆ ಹೀಲ್ಸ್ ಅಷ್ಟೊಂದು ಅಗತ್ಯ ಬೀಳದಿದ್ದರೂ ಕುಳ್ಳಗೆ ಇರುವವರಿಗೆ ಹೀಲ್ಸ್ ಬಹು ಮುಖ್ಯವಾಗಿರುತ್ತದೆ. ನಿಮ್ಮ ಬಳಿ ಇರುವ ಹೀಲ್ಸ್, ಎಲ್ಲಾ ಬಣ್ಣದ ಬಟ್ಟೆಗಳಿಗೂ ಸರಿ ಹೊಂದುವಂತಿದ್ದರೆ ಚೆನ್ನಾಗಿರುತ್ತದೆ. ಇದನ್ನೂ ಓದಿ: ಅಪ್ಪನ Birthdayಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಐರಾ, ಯಥರ್ವ್
Advertisement
Advertisement
ನೀವು ಕೇವಲ ಒಂದು ಜೊತೆ ಹೀಲ್ಸ್ ಖರೀದಿಸಲು ಇಷ್ಟ ಪಡುತ್ತೀರಿಯಾದರೆ ಕಪ್ಪು ಇಲ್ಲವೇ ಚರ್ಮದ ಬಣ್ಣದ ಹೀಲ್ಸ್ ಖರೀದಿಸುವುದೇ ಉತ್ತಮ. ಇವುಗಳು ಫಾರ್ಮಲ್ ಈವೆಂಟ್‌ಗಳ ದಿರಿಸಿನೊಂದಿಗೆ ಮ್ಯಾಚ್ ಆಗುವುದರೊಂದಿಗೆ ಮೆರುಗನ್ನೂ ನೀಡುತ್ತವೆ. ಹೀಲ್ಸ್ ಪೆನ್ಸಿಲ್ ಪಾಯಿಂಟ್‌ನದ್ದೇ ಆಗಬೇಕೆಂದೇನಿಲ್ಲ. ಬ್ಲಾಕ್ ಹೀಲ್ಸ್ ಕೂಡಾ ಸ್ಟಾಂಡರ್ಡ್ ಲುಕ್ ನೀಡುವುದರೊಂದಿಗೆ ನಿಮ್ಮ ಪಾದಗಳಿಗೂ ಕಂಫರ್ಟ್ ಆಗಿರುತ್ತದೆ.
Advertisement
ಶೂಸ್:
ಒಂದೆರಡು ವರ್ಷಗಳ ಹಿಂದೆ ಕಪ್ಪು ಬಣ್ಣದ ಶೂಗಳ ಟ್ರೆಂಡ್ ಇತ್ತು. ಪ್ರತಿ ಕಾಲೇಜು ಹುಡುಗಿಯರ ಕಾಲಿನಲ್ಲೂ ಶೂಗಳು ರಾರಾಜಿಸುತ್ತಿದ್ದವು. ಈ ಟ್ರೆಂಡ್ ಹಳೆಯದಾಗಿಲ್ಲವಾದರೂ ಬಣ್ಣಗಳಲ್ಲಿ ಬದಲಾವಣೆ ನೋಡಬಹುದು. ಇತ್ತೀಚೆಗೆ ಕಪ್ಪು ಬಣ್ಣದ ಶೂಗಳಿಗಿಂತಲೂ ಬಿಳಿ ಬಣ್ಣದ ಶೂಗಳನ್ನು ಹುಡುಗಿಯರು ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ಇವುಗಳು ಕೂಡಾ ಸ್ಟೈಲಿಶ್ ಬಟ್ಟೆಗಳೊಂದಿಗೆ ಟ್ರೆಂಡಿಯಾಗಿ ಕಾಣಿಸುತ್ತವೆ. ಇದನ್ನೂ ಓದಿ: ಅಕ್ಕಿ ಹಿಟ್ಟಿನಿಂದ ಮಾಡಿ ರುಚಿಯಾದ ಪೇಡ
ಕಾಲೇಜು ಹುಡುಗಿಯರಿಗೆ ಶೂಗಳು ಜೀನ್ಸ್, ಫ್ರಾಕ್, ಜಂಪ್‌ಸೂಟ್‌ಗಳಿಗೆ ಚೆನ್ನಾಗಿ ಹೊಂದಿಕೆಯಾಗುತ್ತವೆ. ಕಪ್ಪು ಅಥವಾ ಬಿಳಿಯ ಶೂ ನಿಮ್ಮಲ್ಲಿದ್ದರೆ, ಸ್ಟೈಲಿಶ್ ಬಟ್ಟೆಗಳಿಗೆ ಮ್ಯಾಚ್ ಮಾಡಿಕೊಂಡು ಧರಿಸಬಹುದು.
ಬ್ಯಾಲೆಟ್ ಶೂಸ್:
ಕಾಲೇಜು ಹುಡುಗಿಯರ ಅಚ್ಚುಮೆಚ್ಚಿನ ಪಾದರಕ್ಷೆಗಳೆಂದರೆ ಅವುಗಳೇ ಬ್ಯಾಲೆಟ್ ಶೂಗಳು. ಪ್ರತಿಯೊಂದು ಸ್ಟೈಲ್‌ನ ಬಟ್ಟೆಗಳಿಗೂ ಹೊಂದಿಕೊಂಡು ಹೋಗಬಲ್ಲ ಬ್ಯಾಲೆಟ್ ಶೂವನ್ನು ಹೆಣ್ಣುಮಕ್ಕಳೂ ಹೊಂದಿರಲೇ ಬೇಕು. ಇವುಗಳು ಜೀನ್ಸ್ ಅಥವಾ ಎತ್ನಿಕ್ ಉಡುಗೆಗಳಿಗೆ ಪರ್ಫೆಕ್ಟ್ ಆಗಿ ಮ್ಯಾಚ್ ಆಗುತ್ತವೆ. ಇದನ್ನೂ ಓದಿ: ಶೂಟಿಂಗ್‍ನಲ್ಲಿ ಪಾಲ್ಗೊಂಡ ಮೇಘನಾ ರಾಜ್
ಸ್ಲೈಡರ್, ಸ್ಯಾಂಡಲ್ಸ್ ಅಥವಾ ಫ್ಲಾಟ್ಸ್:
ಬ್ಯಾಲೆಟ್ ಶೂಗಳನ್ನು ಧರಿಸಲು ಇಷ್ಟಪಡದವರು ಅಥವಾ ಕಂಫರ್ಟಬಲ್ ಎನಿಸದವರು ಸ್ಲೈಡರ್ ಇಲ್ಲವೇ ಸ್ಯಾಂಡಲ್‌ಗಳನ್ನು ಹೊಂದಿರಲೇಬೇಕು. ಇವು ಸಹ ಯಾವುದೇ ರೀತಿಯ ಬಟ್ಟೆಗೂ ಹೊಂದಿಕೆಯಾಗುತ್ತವೆ. ಇವುಗಳು ಹೆಣ್ಣುಮಕ್ಕಳ ಡೈಲಿ ಯೂಸ್ ಬಟ್ಟೆಗಳಿಗೆ ಜೋಡಿಯಾಗಬಲ್ಲವು. ಕುರ್ತಾ ಟಾಪ್, ಜೀನ್ಸ್, ಲೆಗಿನ್ಸ್, ಅಥವಾ ಚೂರಿದಾರ್ ಯಾವುದೇ ರೀತಿಯ ಉಡುಗೆಗೆ ಇವುಗಳು ಮ್ಯಾಚ್ ಆಗುತ್ತವೆ.
ಫಂಕ್ಷನ್ ವೇರ್ಸ್:
ನೀವು ಮದುವೆ ಸಮಾರಂಭ ಅಥವಾ ಟ್ರೆಡಿಶನಲ್ ಈವೆಂಟ್‌ಗೆ ಯಾವ ರೀತಿಯ ಪಾದುಕೆಗಳನ್ನು ಧರಿಸುತ್ತೀರಿ? ಮೇಲೆ ತಿಳಿಸಲಾದ ಯಾವುದೇ ರೀತಿಯ ಪಾದರಕ್ಷೆ ಅಷ್ಟಾಗಿ ಸರಿ ಹೊಂದುವುದಿಲ್ಲ ಎನಿಸುವವರು, ಒಂದು ಜೊತೆ ಫಂಕ್ಷನ್ ವೇರ್ ಹೊಂದಿರುವುದು ಸೂಕ್ತ. ಇವುಗಳಿಗೆ ಆಯ್ಕೆ ನೀಡುವುದಾದರೆ ಕೋಲಾಪುರಿ ಅಥವಾ ಮೊಜಿರಿ ಶೈಲಿಯ ಪಾದುಕೆಗಳ ಹೆಸರನ್ನು ತಿಳಿಸಬಹುದು. ಇದನ್ನೂ ಓದಿ: ಹೋಟೆಲ್ ಸ್ಟೈಲ್‌ನಲ್ಲಿ ಮಾಡಿ ರುಚಿಯಾದ ಪನೀರ್ ಕರಿ
ಇವುಗಳು ಸೀರೆ, ಲೆಹೆಂಗಾ, ಗಾಗ್ರಾ, ಅಥವಾ ಇನ್ನಿತರ ಗ್ರಾಂಡ್ ಬಟ್ಟೆಗಳಿಗೆ ಹೊಂದಿಕೆಯಾಗುತ್ತವೆ. ಇವುಗಳು ನಿಮ್ಮ ಟ್ರೆಡಿಶನಲ್ ಬಟ್ಟೆಗಳ ಲುಕ್ ಹಾಳು ಮಾಡದೇ ಇನ್ನಷ್ಟು ಮೆರುಗು ನೀಡುವುದು ಖಂಡಿತಾ.