ಅಪ್ರಾಪ್ತನಿಂದ ದ್ವಿಚಕ್ರ ವಾಹನ ಚಾಲನೆ – ತಂದೆಗೆ 25,000 ರೂ. ದಂಡ!

Public TV
1 Min Read
Thirthahalli Court

ಶಿವಮೊಗ್ಗ: ಅಪ್ರಾಪ್ತನೊಬ್ಬ ದ್ವಿಚಕ್ರ ವಾಹನ ಚಾಲನೆ ಮಾಡಿದ್ದಕ್ಕೆ ತಂದೆಗೆ 25 ಸಾವಿರ ರೂ. ದಂಡ ವಿಧಿಸಿದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆದಿದೆ.

ತನ್ನ ಮಗನಿಗೆ ತಂದೆಯೇ ವಾಹನ ಚಾಲನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ತೀರ್ಥಹಳ್ಳಿ ನ್ಯಾಯಾಲಯವು (Thirthahalli Court) ತಂದೆಗೆ 25,000 ರೂ. ದಂಡ ವಿಧಿಸಿದೆ. ದ್ವಿಚಕ್ರ ವಾಹನ ಚಾಲನೆ ಮಾಡಿದ 17 ವರ್ಷದ ಬಾಲಕ ಮೂಲತಃ ತೀರ್ಥಹಳ್ಳಿಯವನು (Thirthahalli) ಎಂದು ತಿಳಿದುಬಂದಿದೆ. ಇದನ್ನೂ ಓದಿ: ದೆಹಲಿಯಲ್ಲಿ ನೀರಿನ ಬಿಕ್ಕಟ್ಟು – 2ನೇ ದಿನಕ್ಕೆ ಕಾಲಿಟ್ಟ ಸಚಿವೆ ಅತಿಶಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

Traffic Fine

ತೀರ್ಥಹಳ್ಳಿ ಟೌನ್ ದೊಡ್ಮನೆ ಕೇರಿ ಬಳಿಕ ಶಿವಮೊಗ್ಗ ಸಂಚಾರ ಪೊಲೀಸರು (Shivamogga Traffic Police) ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಬಂದಿದ್ದ 17 ವರ್ಷದ ಅಪ್ರಾಪ್ತನನ್ನು ತಡೆದು ಪರವಾನಗಿ ಪರಿಶೀಲಿಸಿದರು.

ನಂತರ ಆತ ಅಪ್ರಾಪ್ತ ಮತ್ತು ಪರವಾನಗಿಯಿಲ್ಲದೇ ಬೈಕ್‌ ಚಾಲನೆ ಮಾಡುತ್ತಿದ್ದ ಕಾರಣಕ್ಕೆ ಪೊಲೀಸರು ಆತನನ್ನ ಕೋರ್ಟ್‌ಗೆ ಹಾಜರು ಪರಿಡಿಸಿದ್ದರು. ಇದನ್ನು ಗಮನಿಸಿದ ತೀರ್ಥಹಳ್ಳಿ ಪಿಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ 25,000 ದಂಡ ವಿಧಿಸಿ ಆದೇಶಿಸಿತು. ಇದನ್ನೂ ಓದಿ: ಹಣಕಾಸು ಆಯೋಗದ ಶಿಫಾರಸಿನ ಅನುದಾನವನ್ನು ಕರ್ನಾಟಕಕ್ಕೆ ನೀಡಿ – ಕೇಂದ್ರದ ಮುಂದೆ ರಾಜ್ಯ ಸರ್ಕಾರ ಡಿಮ್ಯಾಂಡ್!

Share This Article