ಯೂಟ್ಯೂಬ್ ನೋಡಿ ಅಪ್‍ಗ್ರೇಡ್ ಆಗಿದ್ದ ಕಳ್ಳರು ಅರೆಸ್ಟ್

Public TV
2 Min Read
ANNAPURNESHWARINAGARA ARREST

– ಹುಬ್ಬಳ್ಳಿಯ ವ್ಯಕ್ತಿಯಿಂದ ಬೆಂಗ್ಳೂರಿನಲ್ಲಿ ಕಳ್ಳತನ

ಬೆಂಗಳೂರು: ಟೆಕ್ನಾಲಜಿ ಬಳಸಿಕೊಂಡು ಬೀಗ ಒಡೆದು ಕಳ್ಳತನ ಮಾಡುವುದಕ್ಕೆ ಏನೇನು ಬೇಕೋ ಎಲ್ಲವನ್ನೂ ತಯಾರಿಸಿಕೊಂಡಿದ್ದ ಕಳ್ಳರ ಗುಂಪನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ತಂಗ ಅಲಿಯಾಸ್ ತಂಗರಾಜ, ಜೀವನ್, ಶ್ರೀನಿವಾಸ ಹಾಗೂ ಲಕ್ಷ್ಮೀನಾರಾಯಣ ಬಂಧಿತ ಆರೋಪಿಗಳು. ಬಂಧಿತ ಕಳ್ಳರು ಅದೆಷ್ಟು ಫ್ರೊಫೆಷನಲ್ ಆಗಿ ಫೀಲ್ಡ್ ಗೆ ಇಳಿದ್ದರು ಅಂದ್ರೆ ಪೊಲೀಸರಿಗೆ ಶಾಕ್ ಆಗಿತ್ತು. ಆರೋಪಿಗಳು ಯೂಟ್ಯೂಬ್ ನೋಡಿ ಕಳ್ಳತನದ ತಂತ್ರವನ್ನು ಅಪ್ಡೇಟ್ ಮಾಡಿಕೊಂಡಿದ್ದರು.

ANNAPURNESHWARINAGARA B

ಈ ಗ್ಯಾಂಗ್ ಪ್ರಮುಖ ಲೀಡರ್ ತಂಗ ಅಲಿಯಾಸ್ ತಂಗರಾಜ. ಇವನು ಮೂಲತಃ ಹುಬ್ಬಳ್ಳಿಯವನಾಗಿದ್ದು, ಕಳೆದ ಹತ್ತು ವರ್ಷದ ಹಿಂದೆ ಬೆಂಗಳೂರಿಗೆ ಬರುತ್ತಿದ್ದಾನೆ. ಕೆಲಸ ಅಂದ್ರೆ ಕಾಲ್ಕೀಳ್ತಿದ್ದ ಈ ತಂಗರಾಜ ಮೋಜು ಮಸ್ತಿಯ ಜೀವನಕ್ಕಾಗಿ ಕಳ್ಳತನ ಮಾಡುವುದಕ್ಕೆ ಶುರುಮಾಡಿದ್ದ. ಬೆಂಗಳೂರಿನ ಕಾಮಾಕ್ಷಿಪಾಳ್ಯ, ಜ್ಞಾನ ಭಾರತಿ, ಕೆಂಗೇರಿ ಹೀಗೆ ಹಲವಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿ ಜೈಲು ಕೂಡ ಸೇರಿದ್ದ. ಹೀಗಿದ್ದವನು ಇತ್ತೀಚೆಗೆ ಬಹಳ ನೀಟಾಗಿ ಪ್ಲ್ಯಾನ್ ಮಾಡಿಕೊಂಡು ಕಳ್ಳತನ ಮಾಡುವುದಕ್ಕೆ ತನ್ನ ಮೂವರು ಸಹಚರರನ್ನ ಸೇರಿಸಿಕೊಂಡಿದ್ದ.

ತಂಗರಾಜ್ ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಸಲೀಸಾಗಿ ಮನೆ ಕಿಟಕಿ ಹಾಗೂ ಬಾಗಿಲನ್ನು ಮುರಿಯುವ ಹೈಡ್ರಾಲಿಕ್ ಕಟ್ಟಿಂಗ್ ಪ್ಲೇಯರನ್ನು ಖರೀದಿಸಿದ್ದ. ಬೆಂಗಳೂರಿನಲ್ಲಿ ಪೊಲೀಸರು ಆಕ್ಟಿವ್ ಇದ್ದಾರೆ ಅಂತ ಉತ್ತರ ಕರ್ನಾಕದ ಭಾಗದಲ್ಲಿ ಈ ತಂಗು ಗ್ಯಾಂಗ್ ಮನೆಗಳನ್ನು ದೋಚುವ ಕೆಲಸವನ್ನ ಮಾಡಿತ್ತು. ಬೆಳಗಿನ ಜಾವದಲ್ಲೇ ಸೈಲೆಂಟಾಗಿ ಬೀಗ ಹಾಕಿರುವ ಮನೆಗಳನ್ನ ಗುರುತಿಸಿ ಸೈಲೆಂಟಾಗಿ ಬೀಗಗಳನ್ನು ಮುರಿಯುತ್ತಿದ್ದರು. ಕಳ್ಳತನಕ್ಕೆ ತಮ್ಮ ಸ್ವಂತ ಬೈಕು, ಕಾರುಗಳನ್ನ ಬಳಸಿದರೆ ಸಮಸ್ಯೆಯಾಗುತ್ತೆ ಅಂತ ಡಸ್ಟರ್ ಹಾಗೂ ಇನ್ನಿತರ ದುಬಾರಿ ಕಾರುಗಳನ್ನ ಕಳ್ಳತನ ಮಾಡುತ್ತಿದ್ದರು. ಅದೇ ವಾಹನದಲ್ಲಿ ಮನೆಗಳನ್ನ ದೋಚುವ ಕೆಲಸವನ್ನು ಮಾಡುತ್ತಿದ್ದರು.

ANNAPURNESHWARINAGARA A

ಹೈಫೈ ಆಗಿ ಜೀವನ ನಡೆಸಬೇಕು ಎನ್ನುವ ಕಾರಣಕ್ಕೆ ಸಿಕ್ಕ ಸಿಕ್ಕಲ್ಲಿ ಮನೆಗಳನ್ನ ದೋಚುತ್ತಿದ್ದ ಈ ಗ್ಯಾಂಗ್ ಅನ್ನು ಇದೀಗ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ತುಮಕೂರಿನ ಕೊರಟಗೆರೆ ಬಳಿ ಬ್ಯಾಂಕ್ ಸಾಲ ತೀರಿಸಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯ ಟಿವಿಗಳನ್ನೇ ಈ ತಂಗರಾಜನ ಗ್ಯಾಂಗ್ ಕಳ್ಳತನ ಮಾಡಿಕೊಂಡು ಬಂದಿದ್ದರಂತೆ. ಗೋವಾ, ಮಹಾರಾಷ್ಟ್ರ ಇನ್ನಿತರ ರಾಜ್ಯಗಳಲ್ಲಿ ಅಪರಾಧ ಕೃತ್ಯಗಳನ್ನ ಎಸಗಿ ಸೈ ಅನಿಸಿಕೊಂಡಿದ್ದ ಆರೋಪಿಗಳು ಇದೀಗ ಅಂದರ್ ಆಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *