ವಿಜಯಪುರ: ಮೂರು ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಟು ಅಂತರ್ ಜಿಲ್ಲಾ ಕಳ್ಳರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೇವಸ್ಥಾನವನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಚಿತ್ರದುರ್ಗ ಜಿಲ್ಲೆಯ ಮುದ್ದು ರಾಜ್ (41), ಬಾಗಲಕೋಟೆ ಜಿಲ್ಲೆಯ ಮಲ್ಲನಗೌಡ ಆಕೂರು (57) ಹಾಗೂ ರವಿ ಮುರನಾಳ (24) ಎಂದು ಹೇಳಲಾಗಿದೆ. ಇನ್ನೂ ಬೈಕ್ ಕಳ್ಳತನ ಮಾಡುತ್ತಿದ್ದ ವಸಂತ ಹಾಗೂ ಮಲ್ಲಿಕಾರ್ಜುನ. ಲಾರಿಗಳನ್ನೇ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರಾದ ವಿಜಯಪುರದ ಮೂಲದ ಭರತ ಅಗರವಾಲ್, ಅಬ್ದುಲ್ ರಜಾಕ್ ಮಸಳಿ ಹಾಗೂ ಬಾದಷಾ ನದಾಫ್‍ನನ್ನು ಬಂಧಿಸಲಾಗಿದೆ.
ಬಂಧಿತರಿಂದ 43 ಲಕ್ಷ ರೂ. ನಗದು ಹಣ, 76 ಕೆಜಿ ಬೆಳ್ಳಿ ಮೂರ್ತಿ ಹಾಗೂ 417 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಬೈಕ್ ಕಳ್ಳರಿಂದ ಒಂದು ಲಕ್ಷ ರೂ. ಮೌಲ್ಯದ ಎರಡು ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಇವರು ಒಂದುವರೆ ಟನ್ ಸಕ್ಕರೆ ಹೊಂದಿದ್ದ ಲಾರಿಯನ್ನೇ ಕಳ್ಳತನ ಎಸಗಿದ್ದರು. ಅದನ್ನೂ ಕೂಡ ವಶಪಡಿಸಿಕೊಂಡಿದ್ದಾರೆ.
ಪೊಲೀಸರು ವಸ್ತುಗಳನ್ನು ಕಳೆದುಕೊಂಡಿದ್ದ ಮೂಲ ಮಾಲೀಕರುಗಳಿಗೆ ಎಲ್ಲಾ ವಸ್ತುಗಳನ್ನು ಹಿಂದಿರುಗಿಸಿದ್ದಾರೆ. ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡಿದ್ದ ಜನರು ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಬಂಧಿಸಿದ್ದ ಎಲ್ಲಾ ಆರೋಪಿಗಳನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.