ಮುಂಬೈ: ಸಿನಿಮೀಯ ರೀತಿಯಲ್ಲಿ ಖದೀಮರು 25 ಅಡಿ ಉದ್ದದ ಸುರಂಗ ಕೊರೆದು ಬ್ಯಾಂಕ್‍ಗೆ ಕನ್ನ ಹಾಕಿ, 40 ಲಕ್ಷ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳನ್ನ ಲೂಟಿ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.
Advertisement
ನವೀ ಮುಂಬೈ ಬಳಿ ಜುಯಿನಗರ್‍ನಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಶನಿವಾರ ಮತ್ತು ಭಾನುವಾರದ ನಡುವೆ ಈ ದರೋಡೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಈ ದರೋಡೆಗೆ ಕಳ್ಳರು ಸುಮಾರು 5 ತಿಂಗಳಿನಿಂದ ಪ್ಲ್ಯಾನ್ ಮಾಡಿರಬಹುದು ಎಂದು ಶಂಕಿಸಲಾಗಿದೆ.
Advertisement
Advertisement
ಬ್ಯಾಂಕ್ ಸಿಬ್ಬಂದಿ ಸೋಮವಾರದಂದು ಕೆಲಸಕ್ಕೆ ಬಂದ ನಂತರ, ಲಾಕರ್ ರೂಮಿಗೆ ಹೋದಾಗ ಕೆಲವು ಲಾಕರ್‍ಗಳು ಓಪನ್ ಆಗಿದ್ದನ್ನು ನೋಡಿದ್ದಾರೆ. ಆಗ ದರೋಡೆ ನಡೆದಿರೋದು ಬೆಳಕಿಗೆ ಬಂದಿದೆ.
Advertisement
ಆರೋಪಿಗಳು ಬ್ಯಾಂಕ್ ಪಕ್ಕದಲ್ಲೇ ಇದ್ದ ಅಂಗಡಿಯೊಂದನ್ನ ಮೇನಲ್ಲಿ ಬಾಡಿಗೆಗೆ ಪಡೆದಿದ್ದರು. ಅಂದಿನಿಂದ ಸುರಂಗ ಕೊರೆಯಲು ಶುರು ಮಾಡಿದ್ದರು. ಬ್ಯಾಂಕ್ ಆಫ್ ಬರೋಡಾದ ಲಾಕರ್ ರೂಮ್ ತಲುಪಲು ಸುಮಾರು 25 ಅಡಿ ಉದ್ದದ ಸುರಂಗ ಕೊರೆದಿದ್ದಾರೆ. ಅಲ್ಲಿದ್ದ 225 ಲಾಕರ್‍ಗಳಲ್ಲಿ 30 ಲಾಕರ್‍ಗಳನ್ನ ತೆರೆದಿದ್ದು, 40 ಲಕ್ಷ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ. ಸೋಮವಾರದಂದು ಬ್ಯಾಂಕ್ ಸಿಬ್ಬಂದಿ ಕೆಲಸಕ್ಕೆ ಮರಳಿದಾಗ ದರೋಡೆ ನಡೆದಿರೋದು ಗೊತ್ತಾಗಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸದ್ಯ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದ್ದೇವೆ. ದರೋಡೆಯಾಗಿರುವ ವಸ್ತುಗಳ ನಿರ್ದಿಷ್ಟ ಮೌಲ್ಯ ಇನ್ನಷ್ಟೇ ತಿಳಿದುಬರಬೇಕು. ಕಳುವಾಗಿರುವ ವಸ್ತುಗಳ ಬೆಲೆ ಸುಮಾರು 40 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಘಟನೆ ಕುರಿತು ಸನ್ಪಾದಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ ಎಂದು ನವೀ ಮುಂಬೈ ಪೊಲೀಸ್ ಆಯುಕ್ತರಾದ ಹೇಮಂತ್ ನಗ್ರಾಲೆ ಹೇಳಿದ್ದಾರೆ.