ಹಾಸನ: ತಡರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿದ್ದು, ಕೋಟ್ಯಂತರ ಮೌಲ್ಯದ ಚಿನ್ನ, ಹಣ ಕಳವು ಮಾಡಿರುವ ಆರೋಪವೊಂದು ಕೇಳಿಬಂದಿದೆ.
Advertisement
ಹಾಸನದ ಬೇಲೂರು ರಿಂಗ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬರೋಬ್ಬರಿ 3 ಕೆ.ಜಿ ಚಿನ್ನ ಹಾಗೂ 24 ಲಕ್ಷ ಹಣ ದೋಚಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಇಂದಿನಿಂದ ಪ್ರಖ್ಯಾತ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಸರ್ವದರ್ಶನಕ್ಕೆ ಅವಕಾಶ
Advertisement
Advertisement
ಮನೆ ಮಂದಿ ಹಬ್ಬಕ್ಕೆ ಬಟ್ಟೆ ತರಲು ತೆರಳಿದ್ದರು. ಈ ವೇಳೆ ಕನ್ನ ಹಾಕಿರುವ ಖದೀಮರು ಮನೆಯಲ್ಲಿ ಯಾರೂ ಇಲ್ಲದ್ದನ್ನು ಮನಗಂಡು ಹೊಂಚು ಹಾಕಿ ಕೈಚಳಕ ತೋರಿದ್ದಾರೆ. ಇತ್ತ ಹಬ್ಬದ ವಸ್ತು ಖರಿದಿಸಿ ವಾಪಸ್ ಮನೆಗೆ ಬರುವಷ್ಟರಲ್ಲಿ ರಾತ್ರಿಯಾಗಿತ್ತು. ಮನೆಗೆ ಬಂದು ನೋಡಿದಾಗ ಕಳ್ಳತನ ಕೃತ್ಯ ಬಯಲಿಗೆ ಬಂದಿದೆ. ಇದನ್ನೂ ಓದಿ: ನೇಪಾಳದಲ್ಲಿ ಪ್ರವಾಹ – 50ಕ್ಕೂ ಹೆಚ್ಚು ಮಂದಿ ನೀರಿನಲ್ಲಿ ಕೊಚ್ಚಿ ಹೋದ್ರು!
Advertisement
ಗ್ರಾನೈಟ್ ಉದ್ಯಮಿಯ ಮನೆಗೆ ಕನ್ನ ಹಾಕಿದ ಕಳ್ಳರು ಬಾಗಿಲು ಮುರಿದು ಚಿನ್ನ, ಹಣ ದೋಚಿದ್ದಾರೆ. ಈ ಘಟನೆ ಹಾಸನ ಪೆನ್ಶನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಹಾಸನ ಎಸ್ಪಿ ಶ್ರೀನಿವಾಸ್ ಗೌಡ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಲಬುರಗಿ ಪಾಲಿಕೆ ಪಟ್ಟಕ್ಕೆ ಮೈತ್ರಿ ಅನಿವಾರ್ಯ – ಜೆಡಿಎಸ್ ಜೊತೆ ಕೈ ಜೋಡಿಸಲು ಸಿದ್ದು ವಿರೋಧ