ಹೈದರಾಬಾದ್: ಆರೋಗ್ಯ ಕೇಂದ್ರವೊಂದಕ್ಕೆ ನುಗ್ಗಿದ ಕಳ್ಳರು ಕೋವಿಡ್-19 ಲಸಿಕೆಗಳನ್ನು ಕದ್ದರುವ ಘಟನೆ ಹೈದರಾಬಾದ್‌ನ ಓಲ್ಡ್ ಸಿಟಿ ಬಳಿಯ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಸೋಮವಾರ ಕಳ್ಳರು ಕೋವಿಶೀಲ್ಡ್‌ನ 24 ಬಾಟಲಿ ಹಾಗೂ ಕೋವ್ಯಾಕ್ಸಿನ್‌ನ 17 ಬಾಟಲಿಗಳನ್ನು ಕದ್ದು ಪರಾರಿಯಾಗಿದ್ದಾರೆ.
ಆರೋಗ್ಯ ಕಾರ್ಯಕರ್ತರು ಆಟೋದಲ್ಲಿ ಮನೆ ಮನೆಗೆ ಭೇಟಿ ನೀಡಿ ಲಸಿಕೆಯನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಸಮಯದಲ್ಲಿ ಕಳ್ಳರು ಕೇಂದ್ರವೊಂದಕ್ಕೆ ನುಗ್ಗಿ ಲಸಿಕೆಗಳನ್ನು ಕದ್ದಿದ್ದಾರೆ. ಕಳ್ಳರು ಕದ್ದಿರುವ ಲಸಿಕೆಗಳಲ್ಲಿ 300 ಡೋಸ್ ಕೋವಿಶೀಲ್ಡ್ ಹಾಗೂ 270 ಡೋಸ್ ಕೋವ್ಯಾಕ್ಸಿನ್ ಇತ್ತು ಎನ್ನಲಾಗಿದೆ. ಇದನ್ನೂ ಓದಿ: ಕಾಫಿನಾಡಿನ ಎರಡು ವಸತಿ ಶಾಲೆಯ 55 ಮಕ್ಕಳಿಗೆ ಕೊರೊನಾ
ಲಸಿಕೆಗಳೊಂದಿಗೆ ಕಳ್ಳರು ಎರಡು ಕಂಪ್ಯೂಟರ್ ಹಾಗೂ ಕೆಲವು ಸ್ಟೇಷನರಿ ವಸ್ತುಗಳನ್ನೂ ತೆಗೆದುಕೊಂಡು ಹೋಗಿದ್ದಾರೆ. ಇಷ್ಟು ಮಾತ್ರವಲ್ಲದೇ ಆರೋಗ್ಯ ಕೇಂದ್ರದ ಕಂಪೌಂಡ್ ಬಳಿ ನಿಂತಿದ್ದ ಆಟೋ ರಿಕ್ಷಾದ ಟೈರ್‌ಅನ್ನೂ ತೆಗೆದುಕೊಂಡು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಮಕ್ಕಳಲ್ಲಿ ಕೊರೊನಾ ಪಾಸಿಟಿವ್ ಪ್ರಮಾಣ ಹೆಚ್ಚಾಗುತ್ತಿದೆ: ಡಾ. ಪ್ರಸಾದ್
ಘಟನೆ ಯುಪಿಹೆಚ್‌ಸಿಯ ಮಿರ್‌ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯ ಕಲಿಖಬರ್ ರಸ್ತೆಯಲ್ಲಿ ನಡೆದಿದೆ. ಆಸ್ಪತ್ರೆಯ ಸಿಬ್ಬಂದಿ ನೀಡಿರುವ ದೂರಿ ಮೇರೆಗೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.