ರಾಯಚೂರು: ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಹಾಡಹಗಲೇ ವ್ಯಕ್ತಿಯಿಂದ 7 ಲಕ್ಷ ರೂಪಾಯಿ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಪಟ್ಟಣದ ಖಾಜಾಹುಸೇನ್ ಎಂಬವರ ಗಮನ ಬೇರೆಡೆ ಸೆಳೆದು 7 ಲಕ್ಷ ದೋಚಲಾಗಿದೆ.
ಬ್ಯಾಂಕ್ ಆಫ್ ಬರೋಡಾದಿಂದ ಹಣ ಡ್ರಾ ಮಾಡಿಕೊಂಡು ಹೊರಬಂದಿದ್ದ ಖಾಜಾಹುಸೇನ್ ಕೈಯಲ್ಲಿದ್ದ ಹಣದ ಚೀಲ ದೋಚಿ ಬೈಕ್ (Bike) ನಲ್ಲಿ ಇಬ್ಬರು ಕಳ್ಳರು ಪರಾರಿಯಾಗಿದ್ದಾರೆ. ಕಳ್ಳರ ಬೆನ್ನತ್ತಿ ಹೋದಾಗ ಹಿರೇಹಳ್ಳ ಸಮೀಪ ಬೈಕ್ ಬಿಟ್ಟು ಕಳ್ಳರು ಓಡಿ ಹೋಗಿದ್ದಾರೆ.
ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ (Bank of Baroda Bank) ನ ಸಿಸಿ ಕ್ಯಾಮೆರಾದಲ್ಲಿ ಕಳ್ಳರ ಗುರುತು ಸೆರೆಯಾಗಿದ್ದು, ಪೊಲೀಸ್ ರಿಂದ ಕಳ್ಳರ ಶೊಧಕಾರ್ಯ ಮುಂದುವರಿದಿದೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿನಿಯನ್ನು 500 ಮೀಟರ್ ಎಳೆದೊಯ್ದ ಆಟೋ ಚಾಲಕ!